ಜೀವನ ಶೈಲಿಪುರುಷಫ್ಯಾಷನ್ಬಾಲ್ಕನಿಯಿಂದಮಕ್ಕಳುಲುಕ್ಸ್ಸುದ್ದಿಗಳು

ರಾಜಧಾನಿಯ 17 ವರ್ಷದ ಬಾಲಕ ಮಿ.ಟೀನ್ ಇಂಡಿಯಾ-2018ರ  ರನ್ನರ್ ಅಪ್!

ಬಾಲಿವುಡ್ ನ ಖ್ಯಾತ ನಟ-ನಟಿಯರೇ ತೀರ್ಪುಗಾರರಾದ ಈ ಫ್ಯಾಷನ್ ಪರೇಡ್

ರಾಜಧಾನಿಯ 17 ವರ್ಷದ ಪಿ.ಯು. ಬಾಲಕ ಮಿ.ಟೀನ್ ಇಂಡಿಯಾ-2018ರ  ರನ್ನರ್ ಅಪ್!

ಬೆಂಗಳೂರು, ಸೆ-12: ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಅಲೀಸ್ ಕ್ಲಬ್ ನ ವತಿಯಿಂದ ಇತ್ತೀಚೆಗೆ ಜರುಗಿದ ಮಿ.ಟೀನ್ ಇಂಡಿಯಾ ಪ್ರಶಸ್ತಿ-2018ರ ಸ್ಫರ್ಧೆಯಲ್ಲಿ ಬೆಂಗಳೂರಿನ ಬಾಲಕ ಅಭೀಷ್ಟ ಫಣಿರಾಜ್ ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ. ಸುಮಾರು ಎರಡು ವಾರಗಳ ಕಾಲ ವಿವಿಧ ಹಂತಗಳಲ್ಲಿ ನಡೆಸಲಾದ ಈ ವಿಶೇಷ  ಮಾಡೆಲಿಂಗ್ ಸ್ಫರ್ಧೆಯಲ್ಲಿ ಏಡ್ಸ್ ರೋಗದ ನಿರ್ಮೂಲನೆಯನ್ನೇ ಮಹಾಮಂತ್ರವನ್ನಾಗಿಸಿಕೊಳ್ಳಲಾಗಿತ್ತು.

ದೇಶಾದ್ಯಂತ ಸ್ಫರ್ಧಿಸಿದ 19ರ ವಯೋಮಿತಿಯೊಳಗಿನ  ಸಹಸ್ರಾರು ಯುವಕ-ಯುವತಿಯರಲ್ಲಿ ಎರಡು ಬಾರಿ ಗೆದ್ದು ಮುಂದುವರಿದ ಅಭೀಷ್ಟ, ಪ್ರಥಮ ರನ್ನರ್ ಅಪ್ ಪದವಿಯನ್ನು ಗೆದ್ದು ತಂದು ಬೆಂಗಳೂರಿಗರನ್ನು ಹೆಮ್ಮೆ ಪಡುವಂತೆ ಮಾಡಿದ್ದಾನೆ. ಬಾಲಿವುಡ್ ನ ಖ್ಯಾತ ನಟ-ನಟಿಯರಾದ ರೋಹಿತ್ ರಾಯ್, ಮುಕುಲ್ ದೇವ್, ಅಯೂಬ್ ಖಾನ್, ಅಶ್ಮಿತ್ ಪಟೇಲ್, ಪುಷ್ಕರ್ ಮೆಹತಾ, ಗ್ಲಾಡ್ ರಾಗ್ಸ್ ಮಿಸ್. ಇಂಡಿಯಾ ಅಮನ್ ಪ್ರೀತ್ ವಾಹೀ, ರಾಂಪ್ ಗುರು ಸಂಬಿತಾ ಬೋಸ್ ಮತ್ತಿತರರು ಇದೇ ಫ್ಯಾಷನ್ ಪರೇಡ್ ಸ್ಫರ್ಧೆಯನ್ನು ವೀಕ್ಷಿಸಿ ತೀರ್ಪುಗಾರರಾಗಿ ಹಾಜರಿದ್ದರು.

ಇಂಥಾ ಉನ್ನತ ಮಟ್ಟದಲ್ಲಿ ಭಾಗವಹಿಸಿದ ಬಳಿಕ ಅಭೀಷ್ಟ  ಇದೇ ರಂಗದಲ್ಲಿ ಉತ್ತಮ ಅವಕಾಶಗಳಿಗೆ ಕಾಯುತ್ತಾ ತನ್ನ ಸಾಧನೆಯನ್ನು ಗಟ್ಟಿಮಾಡಿಕೊಳ್ಳುತ್ತಿದ್ದಾನೆ. ಬಾಲ್ಕನಿ ತಂಡದಿಂದ ಈ ಬಾಲ ಸಾಧಕನಿಗೆ ಶುಭಕಾಮನೆಗಳು.

Tags