18+ಜೀವನ ಶೈಲಿ

ಪ್ರತಿ ನಿತ್ಯ ಈ ಹಣ್ಣು ತಿಂದರೆ ‘ಲೈಂಗಿಕ’ ಸಾಮರ್ಥ್ಯ ಹೆಚ್ಚುತ್ತದೆ

ಪ್ರತಿ ನಿತ್ಯ ಈ ಹಣ್ಣು ತಿಂದರೆ ‘ಲೈಂಗಿಕ’ ಸಾಮರ್ಥ್ಯ ಹೆಚ್ಚುತ್ತದೆ

ದಾಳಿಂಬೆ ಹಣ್ಣು ನಮಗೆ ಯಾವುದೇ ಋತುಮಾನದಲ್ಲಾದರೂ ಲಭಿಸುತ್ತದೆ. ಆಕರ್ಷಕ ಬಣ್ಣದ ಜತೆಗೆ ತಿನ್ನಲು ರುಚಿಯಾಗಿರುವ ಈ ಹಣ್ಣಿನ ಮೂಲಕ ನಮಗೆ ಅನೇಕ ರೀತಿಯ ಪೋಷಕಾಂಶಗಳು ಲಭಿಸುತ್ತವೆ. ಪೊಟ್ಯಾಷಿಯಂ, ಫೈಬರ್, ಕ್ಯಾಲ್ಸಿಯಂ, ವಿಟಮಿನ್ ಸಿ, ಐರನ್, ವಿಟಮಿನ್ ಬಿ6, ಮೆಗ್ನಿಷಿಯಂನಂತಹ ಅನೇಕ ಪೋಷಕಾಂಶಗಳು ದಾಳಿಂಬೆಯಲ್ಲಿವೆ. ನಿತ್ಯ ಒಂದು ದಾಳಿಂಬೆ ಹಣ್ಣನ್ನು ಆಹಾರದ ಭಾಗವಾಗಿ ತೆಗೆದುಕೊಂಡರೆ ಅದರಿಂದ ನಮಗೆ ಸಾಕಷ್ಟು ಪ್ರಯೋಜನಗಳಿವೆ. ಅವು ಏನು ಎಂಬುದನ್ನು ಈಗ ನೋಡೋಣ.

1. ಆಂಟಿ ಆಕ್ಸಿಡೆಂಟ್ ಗಳು, ವಿಟಮಿನ್ ಎ, ಸಿಯಂತಹ ಪೋಷಕಾಂಶಗಳು ದಾಳಿಂಬೆ ಹಣ್ಣಿನಲ್ಲಿ ಹೇರಳವಾಗಿರುವುದಾರಿಂದ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳು ಬರಲ್ಲ. ಪ್ರೋಸ್ಟೇಟ್ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್ ಗಳು ಬರಲ್ಲ.

2. ರಕ್ತದಲ್ಲಿರುವ ಕೆಟ್ಟ ಕೊಲೆಸ್ಟರಾಲ್ ನಿವಾರಣೆಯಾಗಿ ಒಳ್ಳೆಯ ಕೊಲೆಸ್ಟರಾಲ್ ಹೆಚ್ಚುತ್ತದೆ. ಈ ಮೂಲಕ ಹೃದಯ ರೋಗಗಳು ಬರಲ್ಲ.

3. ಸಂತಾನಹೀತನೆಯಿಂದ ಬಳಲುವವರಿಗೆ ದಾಳಿಂಬೆ ಹಣ್ಣು ಒಂದು ರೀತಿ ವರ ಎಂದು ಹೇಳಬಹುದು. ಯಾಕೆಂದರೆ ಈ ಹಣ್ಣನ್ನು ದಂಪತಿಗಳಿಬ್ಬರು ಪ್ರತಿನಿತ್ಯ ತಿಂದರೆ ಅವರ ಲೈಂಗಿಕ ಸಮಸ್ಯೆಗಳು ನಿವಾರಣೆ ಜತೆಗೆ, ಶೃಂಗಾರ ಸಾಮರ್ಥ್ಯ ಸಹ ಹೆಚ್ಚುತ್ತದೆ. ಮಹಿಳೆಯರಲ್ಲಿ ಋತುಚಕ್ರ ಸಕ್ರಮವಾಗಿ ಆಗುತ್ತದೆ. ಈ ಮೂಲಕ ಸಂತಾನಭಾಗ್ಯ ಆಗುವ ಅವಕಾಶಗಳು ಹೆಚ್ಚು.

 

4. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬ್ಯಾಕ್ಟೀರಿಯಾ, ವೈರಸ್ ಸೋಂಕುಗಳು ಬಾರದಂತೆ ಇರುತ್ತವೆ. ರೋಗಗಳಿಂದ ರಕ್ಷಣೆ ಲಭಿಸುತ್ತದೆ.

5. ಮೂಳೆಗಳು ದೃಢವಾಗಿರುತ್ತವೆ, ರಕ್ತನಾಳಗಳ್ಳಿನ ಅಡ್ಡಿಗಳು ನಿವಾರಣೆಯಾಗುತ್ತವೆ. ಬಿಪಿ ಕಡಿಮೆಯಾಗುತ್ತದೆ. ರಕ್ತ ಹೆಚ್ಚುತ್ತದೆ. ರಕ್ತ ಸಂಚಲನೆ ಸಹ ಚೆನ್ನಾಗಿ ಆಗುತ್ತದೆ.

6. ದಂತ ಸಮಸ್ಯೆಗಳು ಬರಲ್ಲ. ವಸಡಿನ ಊತ, ನೋವು ನಿವಾರಣೆಯಾಗುತ್ತದೆ. ಬಾಯಿಯ ದುರ್ವಾಸನೆ ಹೋಗುತ್ತದೆ.

7. ಡಯೇರಿಯಾ ಸಮಸ್ಯೆಯಿಂದ ಉಪಶಮನ ಲಭಿಸುತ್ತದೆ. ಚರ್ಮ ಕಾಂತಿಯುತವಾಗಿ, ಮೃದುವಾಗಿ ಬದಲಾಗುತ್ತದೆ. ಕೂದಲು ಸೊಂಪಾಗಿ, ದೃಢವಾಗಿ ಬೆಳೆಯುತ್ತದೆ.

Tags