18+ಜೀವನ ಶೈಲಿ

ರತಿಕ್ರೀಡೆಯಲ್ಲಿ ರೊಚ್ಚಿಗೇಳಲು ವಯಾಗ್ರಾ ಬಳಸುತ್ತಿದ್ದೀರಾ? ಅದೆಷ್ಟು ಅಪಾಯಕಾರಿ ಅಂತ ನೋಡಿ

ಶೃಂಗಾರದಲ್ಲಿ ಹಿಡಿತ ಸಾಧಿಸಲು ಬಹಳಷ್ಟು ಮಂದಿ ಪುರುಷರು ವಯಾಗ್ರಾ, ಟಾಡಾಲ್ ಫಿಲ್‌ ನಂತಹ ಗುಳಿಗೆಗಳಿಗೆ ಮೊರೆ ಹೋಗುತ್ತಿದ್ದಾರೆ. ಇವು ಹಾಕಿಕೊಂಡ ಬಳಿಕ ತಮ್ಮ ಬಾಳಸಂಗಾತಿ ಜತೆಗೆ ರತಿಕ್ರೀಡೆಯಲ್ಲಿ ಸಂಪೂರ್ಣ ಅನುಭವ ಪಡೆಯಬಹುದು ಎಂದು ಭಾವಿಸುತ್ತಿದ್ದಾರೆ.

ಇಂತಹ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಹೆಚ್ಚು ಸಮಯ ರತಿಯಲ್ಲಿ ಪಾಲ್ಗೊಳ್ಳಬಹುದು ಎಂದು ಕೆಲವು ವೈದ್ಯರು ಸಹ ಸಲಹೆ ನೀಡುತ್ತಿದ್ದಾರೆ. ಆದರೆ ಇಂತಹವನ್ನು ಬಳಸಿದರೆ ಹೃದ್ರೋಗದ ಜತೆಗೆ ಪಾರ್ಶ್ವವಾಯು ಬರುವ ಸಾಧ್ಯತೆಗಳಿವೆ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ನೋಡೋಣ.

ಸಾಮಾನ್ಯವಾಗಿ ಶೃಂಗಾರದಲ್ಲಿ ಪಾಲ್ಗೊಳ್ಳುವ ಪುರುಷರು ವಯಾಗ್ರಾ ಬಳಸುವುದು ಸಹಜ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಆದರೆ ವಯಾಗ್ರಾ ಬಳಸುವುದರಿಂದ ಅವು ಕೇವಲ ಪುರುಷಾಂಗಕ್ಕೆ ರಕ್ತವನ್ನಷ್ಟೇ ಪಂಪ್ ಮಾಡುತ್ತವೆ. ಆದರೆ ಬಯಕೆಗಳು, ಹಾರ್ಮೊನ್‌ ನ್ನು ಹೆಚ್ಚಿಸಲ್ಲ ಎಂದು ತಿಳಿಸಿದ್ದಾರೆ. ಆ ಔಷಧಿಗಳಿಂದ ರಕ್ತದ ಪಂಪ್ ವೇಗ ಹೆಚ್ಚುತ್ತದೆ ಆದ್ದರಿಂದ ರತಿಯಲ್ಲಿ ಪಾಲ್ಗೊಳ್ಳಬೇಕೆಂದ ಆವೇಶ ಹೆಚ್ಚುತ್ತದೆ ಅಷ್ಟೇ ಎಂದಿದ್ದಾರೆ.

ವಯಾಗ್ರಾ, ಟಾಡಾಲ್ ಫಿಲ್ ನಂತಹ ಔಷಧಿಗಳಿಂದ ಒಮ್ಮೊಮ್ಮೆ ಎದೆನೋವು, ಬಿಪಿ ಹೆಚ್ಚಾಗಿ ಪಾರ್ಶ್ವವಾಯು ಬರುವ ಸಾಧ್ಯತೆಗಳಿವೆ. ಬಿಪಿ ಕಡಿಮೆಯಾಗಿ ಕೋಮಾಗೆ ಹೋಗುವಂತಹವೂ ನಡೆಯುತ್ತವೆ ಎಂದು ವೈದ್ಯರು ಪ್ರಾಯೋಗಿಕವಾಗಿ ಸಂಶೋಧನೆಗಳ ಮೂಲಕ ತಿಳಿಸಿದ್ದಾರೆ.

ಇದಿಷ್ಟೇ ಅಲ್ಲದೆ ಕಣ್ಣಿನ ದೃಷ್ಟಿ, ಕಿವುಡು, ಕಿಡ್ನಿಗಳಿಗೆ ಹಾನಿಯಂತಹವೂ ನಡೆಯಬಹುದು ಎನ್ನುತ್ತಿದ್ದಾರೆ. ಮುಖ್ಯವಾಗಿ ವಯಾಗ್ರಾ ಬಳಸುವುದರಿಂದ ಪುರುಷಾಂಗ 24 ಗಂಟೆಗಳ ಕಾಲ ನಿಮಿರುಕೊಂಡೇ ಇದ್ದು ರಕ್ತ ಗಡ್ಡೆಕಟ್ಟುವ ಸಾಧ್ಯತೆಗೆಳೂ ಇವೆ. ಇದರಿಂದ ಶಾಶ್ವತ ಅಂಗಕ್ಕೆ ಊನವೂ ಆಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಹಾಗಾಗಿ ವಯಾಗ್ರಾ ಬಳಸುವ ಮುನ್ನ ಎಚ್ಚರದಿಂದಿರಿ.

 

 

 

 

Tags