ಜೀವನ ಶೈಲಿಫ್ಯಾಷನ್ಸೌಂದರ್ಯ

ಮೊಡವೆಗೆ ಬೆಸ್ಟ್ ಮದ್ದು ಅಡುಗೆ ಸೋಡಾ

ಹೆಣ್ಣು… ಸೌಂದರ್ಯಕ್ಕೆ ಇನ್ನೊಂದು ಹೆಸರೇ ಹೆಣ್ಣು. ಸದಾ ಕಾಲ ತನ್ನ ಸೌಂದರ್ಯದ ಬಗ್ಗೆಯೇ ಆಲೋಚಿಸುವ ಆಕೆ ಸೌಂದರ್ಯಕ್ಕಾಗಿ ಏನೆಲ್ಲಾ ಹರಸಾಹಸ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಸಾಲು ಸಾಲು ಕ್ರೀಮುಗಳನ್ನು ಹಚ್ಚುತ್ತಾರೆ ಮಾತ್ರವಲ್ಲ ಸೌಂದರ್ಯವರ್ಧಕಗಳನ್ನು ಹಚ್ಚುತ್ತಾರೆ. ಅದರಲ್ಲೂ ಮೊಡವೆ ಬಂತೆಂದರೆ ಸಾಕು, ಅವಳಿಗೆ ಆಗುವ ಬಿಸಿ ಅಷ್ಟಿಷ್ಟಲ್ಲ.

ಅಡುಗೆ ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ ಮೊಡವೆಯನ್ನು ನಿವಾರಿಸುವ ಬಗೆ ನಮಗೆಲ್ಲಾ ತಿಳಿದೇ ಇದೆ. ಆದರೆ ಅಡುಗೆಗೆ ಬಳಸುವ ಸೋಡಾವನ್ನು ಉಪಯೋಗಿಸಿ ಮೊಡವೆಯನ್ನು ನಿವಾರಿಸುವುದು ಹೇಗೆ ಎಂಬುದನ್ನು ನಾವೀಗ ತಿಳಿಯೋಣ‌.

Image result for  pimples

ಆ್ಯಂಟಿ ಇನ್‌ಫ್ಲಾಮೇಟರಿ ಅಂಶಗಳನ್ನು ಒಳಗೊಂಡಿರುವ ಅಡುಗೆ ಸೋಡಾ ಮೊಡವೆ, ಕಲೆಗಳು, ದದ್ದುಗಳನ್ನು ಹೋಗಲಾಡಿಸುತ್ತದೆ. ಮಾತ್ರವಲ್ಲ ಇದರ ಜೊತೆಗೆ ನೈಸರ್ಗಿಕ ಎಕ್ಸ್‌ಫೋಲಿಯೇಂಟ್‌ ನಂತೆ ಕೆಲಸ ಮಾಡುವ ಅಡುಗೆ ಸೋಡಾ ಮೃತಕೋಶಗಳನ್ನು ನಿವಾರಿಸುತ್ತದೆ. ಇದರಿಂದ ಆರೋಗ್ಯಪೂರ್ಣ ತ್ವಚೆಯನ್ನು ನೀವು ಪಡೆಯಬಹುದು.

ಬೇಕಿಂಗ್ ಸೋಡಾ, ಒಂದು ಚಮಚ ಲಿಂಬೆ ರಸ, ಎರಡು ಚಮಚ ನೀರು ಇದ್ದರೆ ಮೊಡವೆಯನ್ನು ದೂರ ಮಾಡಬಹುದು. ಮೊದಲಿಗೆ ಬೇಕಿಂಗ್ ಸೋಡಾ ಮತ್ತು ಲಿಂಬೆ ರಸವನ್ನು ಮಿಶ್ರ ಮಾಡಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ನಂತರ ನಿಮ್ಮ ಮುಖಕ್ಕೆ ಈ ಪೇಸ್ಟ್ ಹಚ್ಚಿ. ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅದನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಮುಖ ತೊಳೆದಾದ ಬಳಿಕ ಮಾಯಿಶ್ಚರೈಸರ್ ಹಚ್ಚಿ ಮತ್ತು ಮಸಾಜ್ ಮಾಡಿ.

ವಾರದಲ್ಲಿ 2-3 ಬಾರಿ ಇದನ್ನು ಮಾಡುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.

Image result for aduge soda

ಟ್ರೆಂಡ್ ಆಯ್ತು ಬಣ್ಣದ ಬಣ್ಣದ ಗುಲಾಬಿ ಹೂವಿನ ಜಡೆ

ಇಂದು ಮಧ್ಯರಾತ್ರಿ 12ಕ್ಕೆ ಶಿವಣ್ಣ …!!?!!

#balkaninews #beautytips #healthytips #adugesoda

Tags