ಆರೋಗ್ಯಆಹಾರಜೀವನ ಶೈಲಿ

ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸುಲಭ ಪರಿಹಾರ ಬಾದಾಮಿ ಎಣ್ಣೆ

ಬೆಂಗಳೂರು, ಮೇ.23:

ದಿನೇ ದಿನೇ ನಮ್ಮ ಹೆಣ್ಣು ಮಕ್ಕಳು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಬಹಳಷ್ಟು ಕಸರತ್ತನ್ನು ಮಾಡುತ್ತಿರುತ್ತಾರೆ. ಇಷ್ಟೇ ಅಲ್ಲದೇ ಆ ಕ್ರೀಮ್, ಈ ಕ್ರೀಮ್ ಎಂದು ಹೆಚ್ಚಿನ ಹಣ ವ್ಯಯಿಸಿ ಕೊಂಡುಕೊಂಡು ತಮ್ಮ ಸೌಂದರ್ಯವನ್ನು ಇನ್ನಷ್ಟು ಹದಗೆಡಿಸಿಕೊಳ್ಳುತ್ತಾರೆ. ಅದರ ಸಲುವಾಗಿ ನಾವಿಂದು ನಿಮಗೆ ಕಡಿಮೆ ಖರ್ಚಿನಲ್ಲಿ ನಿಮ್ಮ ಅಂದವನ್ನು ದ್ವಿಗುಣಗೊಳಿಸಿಕೊಳ್ಳಲು ಪರಿಹಾರ ನೀಡುತ್ತಿದ್ದೇವೆ.

ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ತೊಂದರೆ ಕೊಡುವುದು, ಅವರ ಮುಖದಲ್ಲಿನ ಮೊಡವೆಗಳು, ಕಲೆಗಳು, ಎಣ್ಣೆಯ ಚರ್ಮ, ಕೂದಲಿನ ಸಮ್ಯಸ್ಯೆಗೆ, ಒಡೆದ ತುಟಿ ಹೀಗೆ ಬಹಳಷ್ಟು ತೊಂದರೆಗಳಿಗೆ ಸುಲಭ ಪರಿಹಾರ  ಬಾದಾಮಿ ಎಣ್ಣೆ. ಹೌದು, ನಾವು ಬಾದಾಮಿಯಿಂದ ತುಂಬಾ ಪ್ರಯೋಜನಗಳಿವೆಯೆಂದು ಕೇಳಿದ್ದೇವೆ. ಆದರೆ ಬಾದಾಮಿ ಎಣ್ಣೆಯಿಂದ ಬಹಳಷ್ಟು ಉಪಯೋಗಳಿವೆ.

ಏನದು ಬಾದಾಮಿ ಎಣ್ಣೆಯ ಉಪಯೋಗಗಳು

ಹೆಣ್ಣು ಮಕ್ಕಳ ಸೌಂದರ್ಯವರ್ಧಕದಲ್ಲಿ ಬಾದಾಮಿ ಎಣ್ಣೆ ಬಹುಮುಖ್ಯ ಪಾತ್ರವಹಿಸುತ್ತದೆ. ಹೌದು, ನಮ್ಮ ಮುಖದಲ್ಲಿನ ಎಣ್ಣೆಯ ಚರ್ಮವನ್ನು ಇದು ತಡೆಗಟ್ಟುತ್ತದೆ.

ಕಣ್ಣಿನ ಕೆಳಗಿರುವ ಡಾರ್ಕ್ ಸಕ್ರಲ್ ಗಳನ್ನು ಮರೆಮಾಚುತ್ತದೆ. ಇಷ್ಟೇ ಅಲ್ಲದೇ ಮುಖದಲ್ಲಿನ ಮೊಡವೆಗಳು ಹಾಗೂ ಮೊಡವೆಗಳಿಂದಾಗಿರುವ ಕಲೆಗಳು, ಅಕಾಲಿಕ ನೆರಿಗೆ ಉಂಟಾಗುವ ಸಮಸ್ಯೆಯನ್ನು ಹೋಗಲಾಡಿಸಿ. ಮುಖದಲ್ಲಿನ ಕಾಂತಿಯನ್ನು ಹೆಚ್ಚಿಸುತ್ತದೆ.

ಬಾದಾಮಿ ಎಣ್ಣೆ ಕೇವಲ ಮುಖಖಷ್ಟೇ ಅಲ್ಲದೇ ಕೂದಲಿಗೂ ಸಹ ಹಾಕಿ ಮಸಾಜ್ ಮಾಡಬಹುದು. ಇದರಿಂದ ತಲೆಯಲ್ಲಿನ ಹೊಟ್ಟನ್ನು ಕಡಿಮೆಮಾಡಬಹುದು ಹಾಗೂ ತುಟಿಗೂ ಸಹ ಇದನ್ನು ಹಚ್ಚುವುದರಿಂದ ಒಡೆದ ತುಟಿಯಿಂದ ಮುಕ್ತಿ ಹೊಂದಬಹುದು.

ಕರ್ಪೂರದಂತೆ ಸುವಾಸನೆ ಬೀರುವ ಕರ್ಪೂರವಲ್ಲಿಯ ವಿಶೇಷತೆ ಬಗ್ಗೆ ನಿಮಗೆಷ್ಟು ತಿಳಿದಿದೆ..!

#almondoil #advantagesofalmondoil #almond

 

Tags