ಆರೋಗ್ಯಆಹಾರಜೀವನ ಶೈಲಿ

ಕರಿಮೆಣಸಿನ ಆರೋಗ್ಯ ಪುರಾಣ

ಬೆಂಗಳೂರು, ಮೇ.12:

ಹಿಂದಿನ ಕಾಲದಿಂದಲೂ ಮಸಾಲೆ ಪದಾರ್ಥಗಳಿಗೆ ಅದರದೇ ಆದ ಸ್ಥಾನ ನೀಡಲಾಗುತ್ತಿತ್ತು. ಮಸಾಲೆ ಅಂದ ಕೂಡಲೇ ತತ್ ಕ್ಷಣ ನೆನಪಾಗುವುದು ಕರಿಮೆಣಸು. ಕರಿ ಮೆಣಸು ಅರ್ಥಾತ್ ಕಾಳು ಮೆಣಸು ಹಲವು ರೋಗಗಳಿಗೆ ರಾಮಬಾಣ.

ಕೆಮ್ಮು, ಗಂಟಲು ನೋವು ಕರಿಮೆಣಸಿನ ಕಷಾಯ ಉತ್ತಮ ಮದ್ದು. ಆಹಾರದ ರುಚಿಯನ್ನು ಹೆಚ್ಚಿಸುವುದಕ್ಕಾಗಿ ಕರಿಮೆಣಸನ್ನು ಅಡುಗೆಯಲ್ಲೂ ಬಳಸಲಾಗುತ್ತದೆ.

ಕರಿಮೆಣಸಿನಲ್ಲಿ ಸೋಡಿಯಂ, ಪೊಟ್ಯಾಷಿಯಂ, ವಿಟಮಿನ್‌ ಎ, ಕೆ, ಸಿ, ಕ್ಯಾಲ್ಸಿಯಂ ಹಾಗೂ ಇನ್ನಿತರ ಖನಿಜಾಂಶಗಳನ್ನು ಒಳಗೊಂಡಿವೆ. ಎಲ್ಲದಕ್ಕಿಂತಲೂ ಮುಖ್ಯವಾದ ಸಂಗತಿಯೆಂದರೆ ಇದೊಂದು “ಅತ್ಯಂತ ಉತ್ತಮ ಫ್ಯಾಟ್‌ ಬರ್ನರ್‌ ” ಹೌದು! ಆದುದರಿಂದ ಡಯಟ್ ನಲ್ಲಿ ಇದನ್ನು ನಿರಾಂತಕವಾಗಿ ಬಳಸಬಹುದು.

Image result for ಕರಿಮೆಣಸು

ಕರಿಮೆಣಸಿನಲ್ಲಿರುವ ಪೆಪರಿನ್ ಅಂಶ ಜೀರ್ಣಕ್ರಿಯೆಯನ್ನು ಉತ್ತಮ ಪಡಿಸುತ್ತದೆ. ಕರಿಮೆಣಸು ಜಗಿದಾಗ ಖಾರವಾಗುವುದು ನಿಜ, ಆದರೆ ಇದರಿಂದ ಲಾಭವೂ ಇದೆ. ಅದೆನೆಂದರೆ ಜೀರ್ಣಕ್ರಿಯೆಗೆ ಅನುಕೂಲವಾಗುವಂತಹ ಅಂಶಗಳನ್ನು ಇದು ಬಿಡುಗಡೆ ಮಾಡುತ್ತದೆ. ಇದರ ಜೊತೆಗೆ ದೇಹದಲ್ಲಿ ಉತ್ತಮ ಕೊಬ್ಬಿನಾಂಶವನ್ನು ಹೆಚ್ಚಿಸಲೂ ಸಹಕಾರಿಯಾಗುತ್ತದೆ.

ಡಯಟ್ ಮಾಡಬೇಕು ಎಂದಿರುವವರು ಬೆಳಗ್ಗೆ ಜೇನು ಹಾಗೂ ಕರಿಮೆಣಸಿನ ಮಿಶ್ರಣವನ್ನು ಮಿಕ್ಸ್ ಮಾಡಿ ಸೇವಿಸಿದರೆ ಒಳ್ಳೆಯದು. ಮೊದಲಿಗೆ ಒಂದು ಕಪ್ ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಒಂದು ಚಮಚದಷ್ಟು ಜೇನು ಮತ್ತು ಅರ್ಧ ಚಮಚ ಕರಿಮೆಣಸನ್ನು ಹಾಕಿ ಕಲಸಬೇಕು‌. ಉಗುರು ಬಿಸಿಯಿರುವಾಗಲೇ ಕುಡಿದರೆ ಆಯಿತು.

ಬ್ಲಾಕ್ ಟೀ ಪರಿಚಯ ಇಲ್ಲದವರೇ ಇಲ್ಲ! ಅದೇ ವಿಧಾನದಲ್ಲಿ ಕರಿಮೆಣಸಿನ ಟೀ ತಯಾರು ಮಾಡಬಹುದು. ಸ್ವಲ್ಪ ಶುಂಠಿಪುಡಿಯನ್ನು ಒಂದು ಗ್ಲಾಸ್‌ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೆಲ ಸಮಯ ಹಾಗೆ ಬಿಟ್ಟು ಆರಿಸಿ, ಇದಕ್ಕೆ ಅರ್ಧ ಚಮಚದಷ್ಟು ಕರಿಮೆಣಸು ಹಾಕಿ ಚೆನ್ನಾಗಿ ಬೆರೆಸಿ ಕುಡಿಯಿರಿ. ಹೂ ಬಿಸಿಯ ಈ ಕಷಾಯ ನಿಮ್ಮ ಗಂಟಲಿನ ತೊಂದರೆಗೂ ಒಳ್ಳೆಯದು!

ಇನ್ನೂ ನಿಂಬೆಹುಳಿ ಜ್ಯೂಸ್, ಕಲ್ಲಂಗಡಿ ಜ್ಯೂಸ್ ಗಳಿಗೆಲ್ಲಾ ಕರಿಮೆಣಸಿನ ಪುಡಿ ಸೇರಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ನೆನಪಿರಲಿ!  ಅತಿಯಾಗಿ ಕಾಳುಮೆಣಸು ತಿನ್ನುವುದರಿಂದ ಹೊಟ್ಟೆ ಉರಿ ಸಮಸ್ಯೆ ಬರುತ್ತದೆ. ಇನ್ನೂ ಗರ್ಭಿಣಿಯರು ಕಾಳುಮೆಣಸು ತಿನ್ನುವುದು ಒಳ್ಳೆಯದಲ್ಲ.‌ ಜಾಗ್ರತೆ ವಹಿಸಿರಿ. ಎಲ್ಲದಕ್ಕಿಂತಲೂ ಮುಖ್ಯವಾಗಿ ಕಾಳುಮೆಣಸು ತಿಂದ ಬಳಿಕ ಅರ್ಧ ಲೋಟ ನೀರು ಕುಡಿಯುವುದು ಮರೆಯದಿರಿ.

Image result for ಕರಿಮೆಣಸು

ರಂಗಮಂದಿರ ಉಳಿಸಿ, ರಂಗಭೂಮಿ ಬೆಳೆಸಿ

#balkaninews #Blackpepper #Blackpepperadvantages #Blackpepperusefull #Blackpepperfoods

Tags