ಆರೋಗ್ಯಜೀವನ ಶೈಲಿಸೌಂದರ್ಯ

ನೈಸರ್ಗಿಕ ಮಾಯ್ಚಿರೈಸರ್ ತೆಂಗಿನೆಣ್ಣೆ

ಬೆಂಗಳೂರು, ಮಾ.12:

ಸುಕೋಮಲವಾದ ತ್ವಚೆಗೆ ಅದೆಷ್ಟು ಆರೈಕೆ ಮಾಡಿದರೂ ಕಡಿಮೆಯೇ.. ಅದರಲ್ಲೂ ಒಣ ತ್ವಚೆಗಂತೂ ಪ್ರತಿದಿನ ಆರೈಕೆ ಬೇಕೇ ಬೇಕು. ಒಣ ತ್ಚಚೆಯ ಸಮಸ್ಯೆಗೆ ವೈದ್ಯರ ಬಳಿ ಪರಿಹಾರಕ್ಕೆ ಹೋದರೆ ಮಾಯಿಶ್ವರೈಸರ್ ಬಳಸಿ ಎಂದೇ ಹೇಳುತ್ತಾರೆ.  ಮಾಯಿಶ್ಚರೈಸರ್ ಬಳಸುವುದಕ್ಕಿಂತ ನೈಸರ್ಗಿಕವಾಗಿ ದೊರೆಯುವ ತೆಂಗಿನಣ್ಣೆಯ ಬಳಕೆಯೇ ತ್ವಚೆಗೆ ಬೆಸ್ಟ್.

ಬಹುಪಯೋಗಿ ತೆಂಗಿನೆಣ್ಣೆ

ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿದರೆ ತುಂಬಾ ಒಳ್ಳೆಯದು. ಕೂದಲಿನ ಆರೈಕೆಗೂ ಇದು ಉತ್ತಮ. ಅಡುಗೆಯ ಜೊತೆ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇಂತಿಪ್ಪ ಬಹುಪಯೋಗಿ ತೆಂಗಿನೆಣ್ಣೆ ಮೈಗೆ ಹಚ್ಚಿಕೊಂಡರೆ ಸಾಕು, ಯಾವ ಮಾಯಿಶ್ಚರೈಸರ್‌ ಮಾಡದ ಚಮತ್ಕಾರವನ್ನು ತೆಂಗಿನೆಣ್ಣೆ ಮಾಡುತ್ತದೆ.

ಒಣ ತ್ವಚೆಯೇ ಹೀಗೆ ಮಾಡಿ

ಒಣ ತ್ವಚೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೆಂಗಿನೆಣ್ಣೆ ರಾಮಬಾಣ‌. ಮೈಗೆ ತೆಂಗಿನೆಣ್ಣೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಪ್ರತಿದಿನ ಹೀಗೆ ಮಾಡುವುದರಿಂದ ಒಣ ತ್ವಚೆಯ ಕಿರಿಕಿರಿಯಿಂದ ಪಾರಾಗಬಹುದು.

ಮೊಡವೆಗಿದು ರಾಮಬಾಣ

ಮುಖದಲ್ಲಿ ಜಿಡ್ಡಿನಂಶ ಅಧಿಕವಿದ್ದರೆ ಮೊಡವೆ ಬರುವುದು. ತೆಂಗಿನೆಣ್ಣೆ ಬಳಕೆಯಿಂದ ಮೊಡವೆ ಬರುವುದನ್ನು ತಪ್ಪಿಸಬಹುದು. ಎಲ್ಲದಕ್ಕಿಂತಲೂ ಮುಖ್ಯವಾಗಿ ತೆಂಗಿನೆಣ್ಣೆಯು ತ್ವಚೆಯನ್ನು ಕೋಮಲವಾಗಿ ಇರುವಂತೆ ನೋಡಿಕೊಳ್ಳುತ್ತದೆ.

ಎಲ್ಲದಕ್ಕಿಂತಲೂ ಮುಖ್ಯವಾದ ಸಂಗತಿಯೆಂದರೆ ಇದೊಂದು ಅದ್ಭುತ ನೈಸರ್ಗಿಕವಾದ ಸನ್‌ ಸ್ಕ್ರೀನ್ ಹೌದು. ಬಿಸಿಲಿನ ಝಳಕ್ಕೆ ಹೊರಗೆ  ಹೋಗುವಾಗ ತ್ವಚೆಗೆ ತೆಂಗಿನೆಣ್ಣೆ ಹಚ್ಚಿದರೆ ತ್ವಚೆ ಆಕರ್ಷಕವಾಗಿರುತ್ತದೆ. ಜೊತೆಗೆ ಬೇರೆ ಯಾವ ಮಾಯ್ಚಿರೈಸರ್ ಬೇಕಾಗಿಲ್ಲ.

ಇಂದಿನ ಫ್ಯಾಷನ್ ಯುಗದಲ್ಲಿ ಮೇಕಪ್ ನದ್ದೇ ಕಾರುಬಾರು. ಮೇಕಪ್ ಇಲ್ಲದೇ ಇರಲು ಸಾಧ್ಯವೇ ಇಲ್ಲ. ಮುಖದ ಮೇಕಪ್‌ ತೆಗೆಯಲು ಕೂಡಾ ಈ ತೆಂಗಿನೆಣ್ಣೆಯನ್ನು ಬಳಸಬಹುದು. ಇದರಿಂದ ಸುಲಭವಾಗಿ ಮೇಕಪ್‌ ತೆಗೆಯಬಹುದು. ಬಹು ಮುಖ್ಯವಾಗಿ ಮೇಕಪ್‌ ಬಳಕೆಯಿಂದ ತ್ವಚೆ ಮೇಲೆ ಆಗುವ ಕೆಟ್ಟ ಪರಿಣಾಮವನ್ನು ಇದು ತಡೆಯುತ್ತದೆ.

ನೀಳಕೇಶ ನಿರ್ವಹಣೆಗೆ ಒಂದಷ್ಟು ಟಿಪ್ಸ್!

#balkaninews #beautytips #coconut #coconutoil #advantagesofcoconutoil #healthytips

Tags

Related Articles