ಆರೋಗ್ಯಆಹಾರಜೀವನ ಶೈಲಿ

ರುಚಿರುಚಿಯಾದ ಕಾಫಿಯಲ್ಲಿದೆ ಆರೋಗ್ಯ

ಬೆಂಗಳೂರು, ಮೇ.14:

ಕಾಫಿ! ರುಚಿ ರುಚಿಯಾದ ಕಾಫಿಯ ರುಚಿಗೆ ಮನ ಸೋಲದವರಿಲ್ಲ. ಒಂದು ಕಫ್ ಕಾಫಿ ಕುಡಿದರೆ ಸಾಕು, ಮನಸ್ಸಿಗೆ ಹಿತ ಎನಿಸುತ್ತದೆ. ಮಾತ್ರವಲ್ಲ ಒಂದು ಕಪ್ ಕಾಫಿಯಿಂದ ಮನಸ್ಸು ಉಲ್ಲಾಸವಾಗಿರುತ್ತದೆ. ಇದರ ಜೊತೆಗೆ  ಸದಾ ಕಾಲ ರಿಫ್ರೆಶ್ ಆದ ಮೂಡು ಇರುತ್ತದೆ.

ಆಫ್ರಿಕಾ ಮೂಲದ ಕಾಫಿಯಿಂದ ಆರೋಗ್ಯಕ್ಕೆ ಆಗುವ ಉಪಯೋಗಗಳನ್ನು ನಾವಿಂದು ತಿಳಿಯೋಣ.

ನೀವು ಕುಡಿಯುವ ಒಂದು ಕಪ್ ಕಾಫಿ ಮಾನಸಿಕ ಆರೋಗ್ಯ ಕಾಪಾಡಲಿದೆ. ಕಾಫಿಯಲ್ಲಿರುವ ಕೆಫೀನ್ ಅಂಶವು ಕೇಂದ್ರ ನರಮಂಡಲವನ್ನು ಚುರುಕುಗೊಳಿಸುತ್ತದೆ. ಕಾಫಿ ಕುಡಿಯುವ ಕಾರಣ ಮೆದುಳಿನಲ್ಲಿ ಚಯಾಪಚಯ ಶಕ್ತಿ ಹೆಚ್ಚಾಗುತ್ತದೆ. ಒಂದು ಕಪ್ ಕಾಫಿಯು ಮನಸ್ಥಿತಿ ಮಾತ್ರವಲ್ಲ ಮೆದುಳಿನ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಕಾಫಿ ಸೇವನೆಯಿಂದ ಖಿನ್ನತೆಯು ಕಡಿಮೆಯಾಗುತ್ತದೆ.

ಕಾಫಿ ಕುಡಿಯುವುದರಿಂದ ಟೈಪ್ 2 ಡಯಾಬಿಟಿಸ್ ಬರುವ ಅಪಾಯ ಕಡಿಮೆಯಾಗಲು ನೆರವಾಗಬಲ್ಲದು. ಜೊತೆಗೆ ಕಾಫಿ ಸೇವನೆಯಿಂದ ಯಕೃತ್ತು ಅನ್ನು ಸುರಕ್ಷಿತವಾಗಿಡಲು ಸಾಧ್ಯ. ಅದು ಹೇಗೆ ಎಂದರೆ ಕಾಫಿಯು ಯಕೃತ್ತು ಕ್ಯಾನ್ಸರ್ ಹಾಗೂ ಯಕೃತ್ತು ಸಿರೋಸಿಸ್ ಕಾಯಿಲೆ ಬರುವ ಅಪಾಯವನ್ನು ತಡೆಯುತ್ತದೆ.

ಒಂದು ಕಪ್ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನವಿದೆ ನಿಜ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬ ನಾಣ್ನುಡಿಯಂತೆ ಹೆಚ್ಚಾಗಿ ಕಾಫಿ ಕುಡಿಯಲು ಬಾರದು! ಇದು ನಿಮಗೆ ನೆನಪಿದ್ದರೆ ಸಾಕು!

Image result for coffee

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟ ರಘು ಹಾಗೂ ನಟಿ ಅಮೃತ ರಾಮಮೂರ್ತಿ..!!!

#coffee #advantagesofcoffee #coffeeandtea #usefullofcoffee #balkaninews

Tags