ಆರೋಗ್ಯಆಹಾರಜೀವನ ಶೈಲಿ

ಹೆಚ್ಚುತ್ತಿರುವ ಆಹಾರದ ಕೊರತೆ, ಬೇಳೆಯಂತಹ ಪದಾರ್ಥ ನಮ್ಮನ್ನು ಉಳಿಸುತ್ತದೆ ಎನ್ನುತ್ತದೆ ಅಧ್ಯಯನ

ಬೆಂಗಳೂರು, ಫೆ.04:

ದಿ ಲ್ಯಾನ್ಸೆಟ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಇಡೀ ವಿಶ್ವವೇ ಆಹಾರದ ಬಿಕ್ಕಟ್ಟಿನಿಂದ ಬಳಲುತ್ತಿದೆ. ಜಗತ್ತಿನಲ್ಲಿ ಮೂರು ಬಿಲಿಯನ್ ಗಿಂತಲೂ ಅಧಿಕ ಜನರಿಗೆ ಆಹಾರದ ಕೊರತೆ ಉಂಟಾಗಿದೆ ಎಂದು ಹೇಳಲಾಗಿದೆ.

ಆದರೂ ಕೂಡ ತೊಗರಿ ಬೇಳೆ ಅಥವಾ ಅನ್ನದಂತಹ ಪ್ರಮುಖ ಭಾರತೀಯ ಆಹಾರವನ್ನು ಆಶ್ರಯಿಸುತ್ತಿರುವುದು ನಮ್ಮನ್ನು ಹಸಿವಿನಿಂದ ರಕ್ಷಿಸುತ್ತಿದೆ.

ಒಂದು ವರದಿಯ ಪ್ರಕಾರ, “ಪ್ರಪಂಚದ ಹಸಿವನ್ನು ನೀಗಿಸುವ ಆಹಾರ ಕ್ರಮ ಈ ರೀತಿ ಇದೆ- ಉಪಾಹಾರಕ್ಕಾಗಿ ಗಂಜಿ; ಊಟ ಮತ್ತು ಭೋಜನಕ್ಕೆ ಅಕ್ಕಿ, ಬೇಳೆ ಮತ್ತು ತರಕಾರಿಗಳು; ಮತ್ತು ಪ್ರತಿ ವಾರದಲ್ಲಿ ಒಂದು ದಿನ ಅಥವಾ ಹೊತ್ತು ಉಪವಾಸ ಮಾಡುವ ಮೂಲಕ ಆಹಾರವನ್ನು ಉಳಿಸಬಹುದು.”ಅಧಿಕೃತ ಸೈಟ್ ಪ್ರಕಾರ, ಸಾರ್ವತ್ರಿಕ ಆರೋಗ್ಯದ ಆಯೋಗ ಹೇಳುವಂತೆ ಆರೋಗ್ಯಕರ ಆಹಾರ ಸೇವನೆಯ ಪ್ರಮಾಣದ ಹೆಚ್ಚಳದಿಂದಾಗಿ (ತರಕಾರಿಗಳು, ಹಣ್ಣುಗಳು, ಧಾನ್ಯಗಳು, ದ್ವಿದಳ ಧಾನ್ಯಗಳು, ಮತ್ತು ಬೀಜಗಳು) ಮತ್ತು ಅನಾರೋಗ್ಯಕರ ಆಹಾರ ಸೇವನೆ ಪ್ರಮಾಣ ಕಡಿಮೆಯಾಗುತ್ತಿರುವ ಆಧಾರದ ಮೇಲೆ ಪರಿಮಾಣಾತ್ಮಕವಾಗಿ ವಿವರಿಸುತ್ತದೆ.

ಕೆಂಪು ಮಾಂಸ, ಸಕ್ಕರೆ ಮತ್ತು ಸಂಸ್ಕರಿಸಿದ ಧಾನ್ಯಗಳು ಪ್ರಮುಖ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಧಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

2050ರ ವೇಳೆಗೆ ಮಾಂಸ ಮತ್ತು ಸಕ್ಕರೆಗಳಂತಹ ಆಹಾರ ಸೇವನೆಯ ಪ್ರಮಾಣ ಅರ್ಧದಷ್ಟು ಕಡಿಮೆಯಾಗಬೇಕಿದೆ. ಭೂಮಿಯ ಮೇಲೆ ಮೂರು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಜನರು ಹೊಂದಿರುವ ಜಾಗತಿಕ ಹೊರೆಯನ್ನು ಕಡಿಮೆಗೊಳಿಸಬೇಕು. ಶ್ರೀಮಂತ ರಾಷ್ಟ್ರಗಳು ತಮ್ಮ ಮಾಂಸದ ಸೇವನೆಯನ್ನು ತೀವ್ರವಾಗಿ ಕಡಿತಗೊಳಿಸಬೇಕಾಗಿದ್ದರೂ, ದಕ್ಷಿಣ ಏಷ್ಯಾ ಮುಂತಾದ ಪ್ರದೇಶಗಳಲ್ಲಿ ಕೆಂಪು ಮಾಂಸದ ಕೊರತೆಯಿಂದಾಗಿ ಕ್ಯಾಲೋರಿಗಳು ಮತ್ತು ಪ್ರೋಟೀನ್ಗಳ ಕೊರತೆಯುಂಟಾಗುತ್ತದೆ.ಇಂದು ಜಾನುವಾರುಗಳು ಕೃಷಿ ಪರಿಸರಕ್ಕೆ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತಿದೆ. ಜಾಗತಿಕವಾಗಿ ಸುಮಾರು ಶೇ. 18ರಷ್ಟು ಅನಿಲಗಳು ಹಸಿರುಮನೆಯನ್ನು ಉತ್ಪಾದಿಸುತ್ತಿದೆ. ಅಲ್ಲದೇ ಇದು ಅರಣ್ಯನಾಶ ಮತ್ತು ನೀರಿನ ಕೊರತೆಗಳಿಗೆ ಕಾರಣವಾಗಿದೆ” ಎಂದು ಅಧ್ಯಯನವು ಹೇಳುತ್ತದೆ.

“ಕೆಂಪು ಮಾಂಸದ ಸೇವನೆವನ್ನು ಕಡಿಮೆ ಮಾಡುವುದು. ಈ ನಿಟ್ಟಿನಲ್ಲಿ ಮಾನವನ ವರ್ತನೆಯನ್ನು ಬದಲಿಸುವುದು ಒಂದು ಸವಾಲಾಗಿದೆ. ಆದರೆ ಸಾಂಪ್ರದಾಯಿಕವಾಗಿ ಏಕದಳ ಮತ್ತು ಗೆಡ್ಡೆಗಳ ಬಳಕೆ ಕಡಿಮೆ ಮಾಡುವುದು ಮತ್ತು ಬೀಜ, ಹಣ್ಣು, ತರಕಾರಿ ಮತ್ತು ಬೀನ್ಸ್  ನಂತಹ ಪದಾರ್ಥಗಳು ಪೌಷ್ಟಿಕಾಂಶದ ಮುಖ್ಯ ಮೂಲವಾಗಿ ಪರಿವರ್ತನೆ ಮಾಡುವ ಸಾಧ್ಯತೆ ಬಹುತೇಕ ಕಡಿಮೆ” ಎಂದು ಪಾಟ್ಸ್ಡ್ಯಾಮ್ ಇನ್ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಚೇಂಜ್ ಇಂಪ್ಯಾಕ್ಟ್ನ ನಿರ್ದೇಶಕ ಜೋಹಾನ್ ರಾಕ್ಸ್ಟ್ರೋಮ್ ಹೇಳಿದ್ದಾರೆ.

ಹೊಸಬರ ತಂಡದ ವಿಭಿನ್ನ ಪ್ರಯೋಗವನ್ನು ಮೆಚ್ಚಿದ ಪ್ರೇಕ್ಷಕರಿಗೆ ಧನ್ಯವಾದಗಳು: ‘ಅನುಕ್ತ’ ಚಿತ್ರತಂಡ

#pulses #togaribele #dal #advantageslegum #legum #balkaninews

Tags