ಆರೋಗ್ಯಆಹಾರಜೀವನ ಶೈಲಿ

ಕರ್ಪೂರದಂತೆ ಸುವಾಸನೆ ಬೀರುವ ಕರ್ಪೂರವಲ್ಲಿಯ ವಿಶೇಷತೆ ಬಗ್ಗೆ ನಿಮಗೆಷ್ಟು ತಿಳಿದಿದೆ..!

ಬೆಂಗಳೂರು, ಮೇ.13:

ಸ್ನೇಹಿತರೇ ಈ ಕರ್ಪೂರವಲ್ಲಿ ಅಂದರೆ ನಿಮಗೆಲ್ಲಾ ತಿಳಿದಿರುವಂತಹ ದೊಡ್ಡಪತ್ರೆ ಗಿಡ. ಇದೊಂದು ಔಷಧೀಯ ಸಸ್ಯ. ಇದರ ಉಪಯೋಗ ಬಹಳ. ಮಕ್ಕಳಿಂದ ದೊಡ್ಡವರ ತನಕ ಇದರ ಪ್ರಯೋಜನ ಪಡೆಯಬಹುದು. ಪ್ರತಿಯೊಂದು ಮನೆಯಲ್ಲೂ ಸಹ ಇದು ಇರಲೇಬೇಕು.

ಏಕೆಂದರೆ ಚಿಕ್ಕಪುಟ್ಟ ಜ್ವರ ಚರ್ಮದ ಅಲರ್ಜಿಯಂತಹ ಸಮಸ್ಯೆಗಳಿಗೆ ಇದೊಂದು ರಾಮಬಾಣವಾಗಿದೆ. ಹಾಗಾದರೆ ದೊಡ್ಡಪತ್ರೆಯ ಔಷಧೀಯ ಗುಣಗಳು ಯಾವುವು ಯಾವ ಖಾಯಿಲೆಗಳಿಗೆಲ್ಲಾ ಇದು ಉಪಯೋಗ ಎಂದು ತಿಳಿಯೋಣ. ದೊಡ್ಡಪತ್ರೆ ಗಿಡದ ಎಲೆಗಳನ್ನು ಪ್ರತಿನಿತ್ಯ ತಿನ್ನುತ್ತಾ ಇದ್ದರೆ ಶೀತ ಕೆಮ್ಮುಗಳು ಬರುವುದಿಲ್ಲ. ಮೂಗು  ಕಟ್ಟಿದ್ದರೆ ಇದರ ಎಲೆಯನ್ನು ಜಜ್ಜಿ ವಾಸನೆ ತಗೊಂಡರೂ ಸಾಕು ಸರಾಗವಾಗಿ ಉಸಿರಾಡಬಹುದು.

Image result for ದೊಡ್ಡಪತ್ರೆ

ಚಿಕ್ಕ ಮಕ್ಕಳಿಗೆ ಇದರ ಅರ್ಧ ಎಲೆಗೆ ಸ್ವಲ್ಪ ಜೇನು ಸೇರಿಸಿ ತಿನ್ನಿಸಿದರೆ ಸಾಕು ಪದೇ ಪದೇ ಬರುವ ನೆಗಡಿ ಕೆಮ್ಮು ವಾಸಿಯಾಗುತ್ತದೆ. ಜೇನುನೊಣ ಅಥವಾ ಬೇರೆ ಕೀಟಗಳು ಕಚ್ಚಿದರೆ ಇದರ ಎಲೆಯನ್ನು ಜಜ್ಜಿ ಕಚ್ಚಿದ ಜಾಗದಲ್ಲಿ ಹಚ್ಚಿದರೆ ನೋವು ನಿವಾರಣೆಯಾಗುತ್ತದೆ. ಮಕ್ಕಳಿಗೆ ಆಗಲಿ ದೊಡ್ಡವರಿಗೆಯಾಗಲಿ ಗಂಟಲು ಕಿರಿಕಿರಿಯಾಗುತ್ತಿದ್ದರೆ ಇದರ ಎಲೆಗೆ ಸ್ವಲ್ಪ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ಸಮಸ್ಯೆ ವಾಸಿಯಾಗುವುದು. ನರದೌರ್ಬಲ್ಯ ಇರುವವರು ಇದರ ಎಲೆಯನ್ನು ತಿನ್ನುವುದರಿಂದ ತುಂಬಾ ಒಳ್ಳೆಯದು ಹಾಗೂ ಮೂಳೆಯು ಸಹ ತುಂಬಾ ಗಟ್ಟಿಯಾಗಿ ಆರೋಗ್ಯಯುತವಾಗುತ್ತದೆ. ಅಲ್ಲದೆ ದೇಹದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಶ್ವಾಸಕೋಶದ ಸಮಸ್ಯೆ ಯಾವುದೇ ಇದ್ದರೂ ಸಹ ಇದು ವಾಸಿ ಮಾಡುತ್ತದೆ. ಚಿಕ್ಕಮಕ್ಕಳ ಅಜೀರ್ಣ ಸಮಸ್ಯೆಗೆ ಇದು ಒಂದು ಉತ್ತಮ ಔಷಧಿಯಾಗಿದೆ. ಇದಕ್ಕೆ ಸ್ವಲ್ಪ ತುಪ್ಪ ಸೇರಿಸಿ ತಿನ್ನುವುದರಿಂದ ಅಜೀರ್ಣ ಸಮಸ್ಯೆ ದೂರ ಮಾಡುತ್ತದೆ. ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಚರ್ಮದ ಅಲರ್ಜಿ ಧೂಳಿನ ಅಲರ್ಜಿಯಂತಹ ಸಮಸ್ಯೆಯನ್ನು ದೂರ ಮಾಡುತ್ತದೆ. ರಕ್ತವನ್ನು ಶುದ್ಧಿಮಾಡುತ್ತದೆ.

Image result for ದೊಡ್ಡಪತ್ರೆ

ಈ ವಾರದ ವೀಕೆಂಡ್ ವಿತ್ ರಮೇಶ್ ಸೀಸನ್ 4ನ ಸಾಧಕರ ಸೀಟ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿ…!!!

#balkaninews #doddapathre #doddapathreplant #healthytips

Tags