ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ತ್ರಿವಿಧ ಸಮಸ್ಯೆಯ ಪರಿಹಾರಿ ಈ “ಮೆಣಸು”

ಬೆಂಗಳೂರು, ಫೆ.13:

ನೋಡಲು ಗುಂಡಾದ, ರುಚಿಯಲ್ಲಿ ಖಾರವಾದ, ಸಾಂಬಾರಿನ ಡಬ್ಬಿಯಲ್ಲಿ ಇರಲೇಬೇಕಾದ, ಪರಕೀಯರನ್ನು ಭಾರತಕ್ಕೆ ಸೆಳೆದ ಸಾಂಬಾರ ಪದಾರ್ಥ ಮೆಣಸು.

ಮೆಣಸಿನ ಸಾರು ಎಂದೊಡನೆ ಚಳಿಯೇ ಓಡಿ ಹೋಗತ್ತೆ. ಇದು ರುಚಿಕರ ಮಾತ್ರವಲ್ಲದೆ ಔಷಧಿಯೂ ಹೌದು. ಸದ್ಯಕ್ಕೆ ತ್ರಿವಿಧ ಪರಿಹಾರಕ ಹೇಗೆ ಎಂಬುದರ ಬಗ್ಗೆ ಕಿರು ನೋಟ ಇಲ್ಲಿದೆ.

ಉತ್ತಮ ಜೀರ್ಣೋದ್ಧಾರಕ: ಮೆಣಸನ್ನು ಚೆನ್ನಾಗಿ ಪುಡಿ ಮಾಡಿ, ಶುಂಠಿಯ ರಸದೊಡನೆ ಸೇವಿಸುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ.

ಕಲೆ ನಿವಾರಕ: ಕೆಲ ಮೆಣಸಿನ ಕಾಳುಗಳನ್ನು ನೀರಿನಲ್ಲಿ ತೇಯ್ದು ಮೊಡವೆಗಳಿರುವ ಜಾಗಕ್ಕೆ ಹಚ್ಚುವುದರಿಂದ ವಾಸಿಯಾಗುತ್ತದೆ.

ಜಂತುಹುಳು ನಿವಾರಕ: ಹೊಟ್ಟೆಯಲ್ಲಿ ಜಂತುಹುಳುಗಳ ಉಪಟಳ ಜಾಸ್ತಿಯಾದಾಗ ಬೆಳಗ್ಗೆ ಮತ್ತು ರಾತ್ರಿ ಹೊತ್ತು ಮೆಣಸಿನ ಕಷಾಯ ಕುಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ಮನೆಯಲ್ಲಿಯೇ ಮಾಡಿರಿ ನಿಮ್ಮ ನೆಚ್ಚಿನ ಗರಿ ಗರಿ ಗೋಬಿ ಕುರ್ಮಾ

#Pepper #Pepperadavantages #Pepperusefull #Peppersamber #Pepperbeautytips #balkaninews #healthytips

Tags

Related Articles