ಆರೋಗ್ಯಆಹಾರಜೀವನ ಶೈಲಿ

ಬಹುಉಪಯೋಗಿ ಮುಟ್ಟಿದರೆ ಮುನಿ ಸೊಪ್ಪು

ಬೆಂಗಳೂರು, ಫೆ.20:

ಸಂಸ್ಕೃತದಲ್ಲಿ ಲಚ್ಚಾಕು, ಇಂಗ್ಲಿಷ್‍ ನಲ್ಲಿ ಟಚ್ ಮಿ ನಾಟ್, ಲಮನ್ ಚೋ ತೋ ಎಂದೂ ಹಿಂದಿಯಲ್ಲಿ ಕರೆಯುವ ಮುಟ್ಟಿದರೆ ಮುನಿ ಸೊಪ್ಪು ಆಯುರ್ವೇದದಲ್ಲಿ ಸುಪ್ರಸಿದ್ಧ ಔಷಧೀಯ ಮೂಲಿಕೆಯಾಗಿದೆ.

ಇದರ ಉಪಯೋಗಗಳು ಹೀಗಿದೆ:

ಕೊಬ್ಬರಿ ಎಣ್ಣೆಯ ಜೊತೆ ಲಚ್ಚಾಕು ಸೊಪ್ಪಿನ ಎಲೆ ರಸವನ್ನು ಬೆರೆಸಿ ಮಂಡಿನೋವಿಗೆ ಹಚ್ಚಿದರೆ ನೋವು ಮಾಯವಾಗುತ್ತದೆ.

ಈ ಗಿಡದ ಚಿಗುರನ್ನು ತಾಟಿ ಬೆಲ್ಲದ ಜೊತೆ ತಿಂದರೆ ಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ.

ಅರಿಶಿನವನ್ನು ಮುಟ್ಟಿದರೆ ಮುನಿ ಎಲೆಯ ಜೊತೆ ಬೆರೆಸಿ ಗಾಯ ಇಲ್ಲವೇ ಕಲೆಗಳ ಮೇಲೆ ಹಚ್ಚಿದರೆ ಕಲೆಗಳು ಮಾಯವಾಗುತ್ತವೆ.

ಪಿತ್ತ, ಋತುರಕ್ತ ಶೋಧಕ, ಸ್ತ್ರೀ ರೋಗ ಸಮಸ್ಯೆಗೆ, ಮಧುಮೇಹ, ಕುಷ್ಟ, ಜ್ವರ, ಹೃದಯ ಸಂಬಂಧಿ ಕಾಯಿಲೆಗೆ ಇದರ ಎಲೆಯ ರಸ ಅಮೃತವೇ ಸರಿ.

ನಮ್ಮ ಸುತ್ತಮುತ್ತ ಇರುವ ಹಲವು ಸೊಪ್ಪುಗಳ ವೈಶಿಷ್ಟತೆ ಬಗ್ಗೆ ಅರಿವಿರುವುದಿಲ್ಲ. ಹಾಗಾಗಿಯೇ ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಇಂದಿಗೂ ಪ್ರಚಲಿತದಲ್ಲಿರುವುದು.

ಎಲ್ಲರನ್ನು ಕಣ್ಣೀರಿಳಿಸುವ ಈರುಳ್ಳಿಯಿಂದ ಇಷ್ಟೊಂದು ಲಾಭವಿದೆಯೇ??

#muttidaremuni #muttidaremunisoppu #balkaninews #advantagesofmuttidaremunisoppu

 

Tags

Related Articles