ಆರೋಗ್ಯಆಹಾರಜೀವನ ಶೈಲಿಫ್ಯಾಷನ್

ಗುಲಾಬಿ ಟೀ ಕುಡಿಯಿರಿ, ತೂಕ ಇಳಿಸಿ..!

ಬೆಂಗಳೂರು, ಮಾ.12:

ಸದ್ಯದ ಮಟ್ಟಿಗೆ ಎಲ್ಲರಲ್ಲೂ ಕಾಡುವ ಸಮಸ್ಯೆ ಎಂದರೆ ತೂಕ ಇಳಿಸುವ ಬಗೆ ಹೇಗೆ? ಅದಕ್ಕೆ ಇನ್ನೂ ಕೂಡಾ ಉತ್ತರ ಸಿಕ್ಕಿಲ್ಲ. ಯಾಕೆಂದರೆ ಇಂದಿಗೂ ಹೆಚ್ಚಿನವರು ತೂಕ ಇಳಿಸಲು ಬಹಳಷ್ಟು ಪ್ರಯತ್ನ ಮಾಡುತ್ತಾರೆ. ಹತ್ತು ಹಲವು ವಿಧಾನಗಳ ಮೊರೆ ಹೋಗುತ್ತಾರೆ. ಇದೀಗ ಗುಲಾಬಿ ಟೀ ಯಿಂದ ದೇಹದ ತೂಕ ಕಡಿಮೆ ಮಾಡಬಹುದು ಎಂಬ ವಿಚಾರ ಸಂಶೋಧನೆಯ ಮುಖೇನ ತಿಳಿದು ಬಂದಿದೆ. ಇದರಿಂದ ದೇಹದ ತೂಕ ಇಳಿಯುವುದರ ಜೊತೆಗೆ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ಸಾಧ್ಯ ಎನ್ನುತ್ತದೆ ಸಂಶೋಧನೆ.

ಗುಲಾಬಿ ಚಹಾದ ಸೇವನೆಯಿಂದ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಜೀರ್ಣ ಕ್ರಿಯೆಗೂ, ತೂಕ ಕಡಿಮೆಯಾಗುವುದಕ್ಕೂ ಏನಪ್ಪಾ ಸಂಬಂಧ ಎಂದು ಆಶ್ಚರ್ಯವಾಯಿತೇ? ಹಾಗಿದ್ದರೆ ಇಲ್ಲಿ ಕೇಳಿ. ತೂಕ ನಷ್ಟಕ್ಕೆ ಆರೋಗ್ಯಕರ ಜೀರ್ಣಕಾರಿ ವ್ಯವಸ್ಥೆಯು ಬಹು ಮುಖ್ಯ. ಹೀಗಾಗಿ ನಿತ್ಯ ಒಂದರಿಂದ ಎರಡು ಕಪ್‌ ಗುಲಾಬಿ ಚಹಾ ಕುಡಿಯಬಹುದು.

ಇನ್ನೂ ಗುಲಾಬಿ ಚಹಾವು ದೇಹವನ್ನು ಅನಾರೋಗ್ಯದಿಂದ ದೂರವಿಡುತ್ತದೆ. ಜೊತೆಗೆ ನಿಮ್ಮ ಇಮ್ಯೂನಿಟಿ ಬಲಗೊಳ್ಳಲು ಇದು ಸಹಕಾರಿ. ಇದರಲ್ಲಿರುವ ವಿಟಮಿನ್‌ ಎ ಯು ವಿವಿಧ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಉತ್ತಮ ಇಮ್ಯೂನಿಟಿ ವ್ಯವಸ್ಥೆ ತೂಕವನ್ನು ಕಳೆದುಕೊಳ್ಳುವಲ್ಲಿ ಪರಿಣಾಮಕಾರಿ. ಗುಲಾಬಿ ಚಹಾದಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್‌ ಗಳು ಉರಿಯೂತದ ವಿರುದ್ಧ ಹೋರಾಡುತ್ತದೆ.

ಹಲವಾರು ಸಮಸ್ಯೆಗಳಿಗೆ ಇಲ್ಲಿದೆ ಒಂದೇ ಮನೆ ಮದ್ದು ‘ಮಲ್ಲಿಗೆ ಹೂವಿನ ಕಷಾಯ’

#rosetea #roseteaadvantages #advantagesofrosetea #balkaninews #roseteddybear #roseteddybearblue

 

Tags