ಆರೋಗ್ಯಜೀವನ ಶೈಲಿ

ಮದ್ಯಪಾನ ಮಾಡೋದ್ರಿಂದ ಹೆಚ್ಚಾಗುತ್ತೆ ಲೈಂಗಿಕ ಸಮಸ್ಯೆಗಳು!

ಹೆಚ್ಚು ಮದ್ಯಪಾನ ಮಾಡಬೇಡಿ ಎಂದು ವೈದ್ಯರು, ಮನೆಯವರು ಸಾರಿ ಸಾರಿ ಹೇಳಿದರೂ ಬಹಳಷ್ಟು ಜನ ಪುರುಷರು ಅದನ್ನು ಚಟವಾಗಿ ಮಾಡಿಕೊಂಡಿರುತ್ತಾರೆ. ಆದರೆ ಹೆಚ್ಚು ಮದ್ಯಪಾನ ಮಾಡಿದರೆ ಏನೆಲ್ಲಾ ಆರೋಗ್ಯ ಸಮಸ್ಯೆಗಳುಂಟಾಗುತ್ತವೆ ಗೊತ್ತಾ? ಅದರಲ್ಲೂ ನಿಮ್ಮ ದಾಂಪತ್ಯವೇ ಮುರಿದು ಬೀಳಬಹುದು.ಅಯ್ಯೋ ಅದಕ್ಕೂ ಇದಕ್ಕೂ ಏನು ಸಂಬಂಧ ಅಂತೀರಾ, ಸಂಬಂಧ ಇದೆ. ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಲೈಂಗಿಕ ಜೀವನ ಸುಖಮಯವಾಗಿರಬೇಕು. ಆದರೆ ಹೆಚ್ಚು ಮದ್ಯಪಾನ ಮಾಡಿದರೆ ಲೈಂಗಿಕ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಅಂದಹಾಗೆ ಇಲ್ಲಿ ಮದ್ಯಪಾನ ಮಾಡೋದ್ರಿಂದ ಏನೆಲ್ಲಾ ಲೈಂಗಿಕ ಸಮಸ್ಯೆಗಳು ಉಂಟಾಗಬಹುದು ಎಂಬುದರ ವಿವರವಿದೆ. ಓದಿ, ನಂತರ ಮದ್ಯಪಾನ ಮಾಡಬೇಕೋ, ಬೇಡವೋ ಎಂಬುದನ್ನು ನೀವೇ ಹೇಳಿ….

ಮದ್ಯಪಾನ ಮಾಡಿದಾಗ ಲೈಂಗಿಕ ಆಸಕ್ತಿ ಹೆಚ್ಚಾದ ಹಾಗೆ ಆಗುತ್ತದೆ. ಆದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಮುಂಚೆಯ ತರಹ ಲೈಂಗಿಕ ಕ್ರಿಯೆಯ ಸಾಮರ್ಥ್ಯವಿರುವುದಿಲ್ಲ. ಈ ರೀತಿಯ ತೊಂದರೆಗಳು ಸಮಯ ಕಳೆದ ಹಾಗೆ ಮದ್ಯಪಾನ ಮಾಡುವುದನ್ನು ಬಿಟ್ಟಿದ್ದರೂ ದೀರ್ಘ‌ಕಾಲದ ಸಮಸ್ಯೆಗಳಾಗಿ ಉಳಿದುಕೊಳ್ಳುತ್ತವೆ. ಮದ್ಯಪಾನದಿಂದಾಗುವ ಲೈಂಗಿಕ ಸಮಸ್ಯೆಗಳು ಹೀಗಿರುತ್ತವೆ…

*ಲೈಂಗಿಕ ಆಸಕ್ತಿ ಕಡಿಮೆಯಾಗುವುದು

*ಶಿಶ್ನದ ಸ್ಪರ್ಶಜ್ಞಾನ ಕಡಿಮೆಯಾಗುವುದು

*ಶಿಶ್ನ ನಿಮಿರದಿರುವುದು

*ಶೀಘ್ರ ಸ್ಖಲನವಾಗುವುದು ಅಥವಾ ಸ್ಖಲನವಾಗದಿರುವುದು

Image result for drinks and sexual problems

ನಪುಂಸಕತ್ವ

ಮದ್ಯಪಾನ ಮಾಡುವುದರಿಂದ ದೇಹದಲ್ಲಿನ ಟೆಸ್ಟೊಸ್ಟಿರೋನ್ ಎನ್ನುವ ಹಾರ್ಮೋನು ಕಡಿಮೆಯಾಗುತ್ತದೆ. ಈ ಟೆಸ್ಟೋಸ್ಟಿರೋನ್ ಹಾರ್ಮೋನಿನ ಕೊರತೆಯಿಂದ ವೀರ್ಯಾಣುಗಳ ಉತ್ಪಾದನೆ ಕುಂಠಿತಗೊಂಡು ನಪುಂಸಕತ್ವ ಉಂಟಾಗುತ್ತದೆ. ಇದೇ ರೀತಿ ಮದ್ಯಪಾನ ಮಾಡುವ ಮಹಿಳೆಯರಲ್ಲಿ ಅಂಡಾಣುಗಳ ಉತ್ಪನ್ನ ನಿಂತುಬಿಡುತ್ತದೆ. ಈ ತೊಂದರೆಗಳು ಸಾಮಾನ್ಯವಾಗಿ ದೀರ್ಘ‌ಕಾಲದಿಂದ ನಿಯಮಿತವಾಗಿ ಮದ್ಯಪಾನ ಮಾಡುವವರಲ್ಲಿ ಕಂಡುಬರುತ್ತವೆ. ಕೆಲವೊಮ್ಮೆ ಅಲ್ಪಕಾಲದ ಬಳಕೆಯಿಂದಲೂ ಈ ಸಮಸ್ಯೆಗಳು ಉಲ್ಬಣಗೊಳ್ಳಬಹುದು.

ಮೆದುಳಿನ ಶಕ್ತಿ ಹೆಚ್ಚಲು ಸೇಬು ಹಣ್ಣು ತಿನ್ನಿ

#balkaninews #alcohol #sexlife #sexualproblems

Tags