ಆರೋಗ್ಯಆಹಾರಜೀವನ ಶೈಲಿ

ಹೃದ್ರೋಗಗಳಿಗೆ ರಾಮಬಾಣ ‘ಬಾದಾಮಿ’

ಬೆಂಗಳೂರು, ಸೆ.12: ಡ್ರೈ ಫ್ರೂಟ್ ಎಂದರೆ ಮೊದಲು ನೆನಪಾಗುವುದು ಬಾದಾಮಿ. ಇದರಿಂದ ಅನೇಕ ಲಾಭಗಳನ್ನು ಪಡೆಯಬಹುದು. ಅದರಲ್ಲೂ ಹೃದ್ರೋಗಗಳನ್ನು ತಡೆಯುವ ಸಾಮರ್ಥ್ಯ ಇದರಲ್ಲಿ ಹೆಚ್ಚಾಗಿ ಇದೆ. ಕೊಲೆಸ್ಟ್ರಾಲ್ ಎನ್ನುವುದು ಇತ್ತೀಚೆಗೆ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸಲು ಆಹಾರಕ್ರಮ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ತರಲೇಬೇಕು.

ಕೊಲೆಸ್ಟ್ರಾಲ್ ನಲ್ಲಿ ಎರಡು ವಿಧ 1. ಎಚ್ಡಿಎಲ್ (ಒಳ್ಳೆಯ) ಕೊಲೆಸ್ಟ್ರಾಲ್ 2. ಎಲ್ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್.ಬಾದಾಮಿಯ ಪ್ರಯೋಜನಗಳು

ನಾವು ಆರೋಗ್ಯವಾಗಿರಲು ಒಳ್ಳೆಯ ಕೊಲೆಸ್ಟ್ರಾಲ್ ಬೇಕೇ ಬೇಕು. ಇವುಗಳು ಕಮ್ಮಿಯಾದರೆ ಹಲವಾರು ಆರೋಗ್ಯ ಸಮಸ್ಯೆಗಳು ಕಂಡು ಬರುವುದು. ಒಳ್ಳೆಯ ಕೊಲೆಸ್ಟ್ರಾಲ್ ಇರುವ ಆಹಾರಗಳನ್ನು ತಿನ್ನುವುದರ ಮುಖಾಂತರ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನೋಡಿಕೊಳ್ಳಬಹುದು.

ಒಳ್ಳೆಯ ಕೊಲೆಸ್ಟ್ರಾಲ್ ಅಂಶ ಹೊಂದಿರುವ ಆಹಾರಗಳಲ್ಲಿ ಬಾದಾಮಿಯೂ ಒಂದು. ಇದು ನಿಮ್ಮ ಉತ್ತಮ ಎಚ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಅಂತೆಯೇ ನಿಮ್ಮ ಕೆಟ್ಟ ಎಲ್ಡಿಎಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.ಪ್ರತೀದಿನ 5-6 ಬಾದಾಮಿ ತಿಂದರೆ ನಿಮ್ಮ ಉತ್ತಮ ಎಚ್ಡಿಎಲ್ ಕೊಲೆಸ್ಟ್ರಾಲ್ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಬಹುದು ಎನ್ನಲಾಗಿದೆ. ಬಾದಾಮಿಯನ್ನು ಒಂದು ತಿನಿಸಿನಂತೆ ಆಯ್ಕೆ ಮಾಡುವುದರಿಂದ ಹೃದಯಾಘಾತದ ವಿರುದ್ಧ ಅತ್ಯಂತ ಸುರಕ್ಷಿತವೆಂದು ಕರೆಯಲ್ಪಡುವ ಉತ್ತಮ ಎಚ್ಡಿಎಲ್ ಕೊಲೆಸ್ಟ್ರಾಲಿನ ಬಗೆಯನ್ನು ವೃದ್ಧಿಸಲು ಸಹಾಯಕ ಎಂಬುದನ್ನು ಪೆನ್ನ್ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧನೆ ಕಂಡು ಹಿಡಿದಿದೆ. ಅದಕ್ಕೆ ಕ್ಯಾಲಿಫೋರ್ನಿಯಾದ ಬಾದಾಮಿ ಮಂಡಳಿಯು ಜತೆ ನಡೆದ ಈ ಸಂಶೋಧನೆಯಲ್ಲಿ ಹಲವಾರು ಸಂಗತಿಗಳು ಬಹಿರಂಗಗೊಂಡಿವೆ.ಬಾದಾಮಿಯ ಸೇವನೆ ಮಾಡುವವರಿಗೆ, ಕೆಟ್ಟ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವು ಇಳಿಮುಖವಾಯಿತು. ಆದರೆ ಉತ್ತಮ ಎಚ್ಡಿಎಲ್ ಕೊಲೆಸ್ಟ್ರಾಲ್ ಮಟ್ಟಗಳು ಬದಲಾಗದೆ ಉಳಿದವು. ಇದು ಹೃದಯ, ಆರೋಗ್ಯವಂತ ಆಹಾರ ಪದ್ಧತಿಯಲ್ಲಿ ಬಾದಾಮಿಯನ್ನು ಜೊತೆಗೂಡಿಸಿದಾಗ ಕಾಣುವ ಸಹಜವಾದ ಬದಲಾವಣೆ ಅದನ್ನು ಇಲ್ಲಿಯೂ ಕಾಣಬಹುದು.

Tags