ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ಉತ್ತಮ ಆರೋಗ್ಯಕ್ಕಾಗಿ ಬಾದಾಮಿ ತಿನ್ನಿ

ಬೆಂಗಳೂರು, ಜ.12: ಬಾದಾಮಿ ಹೆಚ್ಚು ಆರೋಗ್ಯಕರ ಮತ್ತು ಪೌಷ್ಟಿಕಾಂಶಯುಕ್ತ ಬೀಜಗಳಲ್ಲಿ ಒಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಬಾದಾಮಿ ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಜನಪ್ರಿಯವಾಗಿವೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ದಿನಕ್ಕೆ ಒಂದು ಹಿಡಿ ಬಾದಾಮಿ ತಿನ್ನುವುದು ಒಳಿತು ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಎನ್ನುತ್ತಾರೆ ತಜ್ಞರು.

ಅನಾರೋಗ್ಯಕರ ತಿಂಡಿಗಳ ಜೊತೆಗೆ ಬಾದಾಮಿಯನ್ನು ತಿನ್ನುವುದರಿಂದ ಸಣ್ಣ ಸಣ್ಣ ಹಸಿವನ್ನು ನೀಗಿಸುತ್ತದೆ. ತೂಕ ಇಳಿಸಲು ಯೋಚಿಸುತ್ತಿರುವವರಿಗೆ ಬಾದಾಮಿ ದೇಹದ ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.

ಬಾದಾಮಿ ಆರೋಗ್ಯಕರವಾದ ಅಡಿಕೆಯಾಗಿ ಪ್ರಶಂಸಿಸಲ್ಪಟ್ಟಿದೆ. ಇದು ಏಕಕಾಲದಲ್ಲಿ ಕೊಬ್ಬಿನ ಆಮ್ಲ, ಫೈಬರ್, ವಿಟಮಿನ್ ಇ, ರಿಬೋಫ್ಲಾವಿನ್, ಮೆಗ್ನೀಷಿಯಂ, ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ, ಸೆಲೆನಿಯಮ್ ಮತ್ತು ಇತರ ಅಗತ್ಯ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ.

ಬಾದಾಮಿಯನ್ನು ಸಾಮಾನ್ಯವಾಗಿ ಹಸಿಯಾಗಿಯೇ ತಿನ್ನುತ್ತೇವೆ. ಇದರ ಜೊತೆಗೆ ಸಲಾಡ್ ಮತ್ತು ಯೋಗರ್ಟ್‍ ನಲ್ಲೂ ಸೇರಿಸಿಕೊಳ್ಳಬಹುದು. ಬಾದಾಮಿ ಹಾಲು, ಫ್ಲೇವರ್ಡ್‍ ಮಿಲ್ಕ್‍ ರೂಪದಲ್ಲೂ ಲಭ್ಯವಿದೆ.

ಬಾದಾಮಿಯ ಆರೋಗ್ಯಕರ ಪ್ರಯೋಜನ:

ದಿನನಿತ್ಯ ಬಾದಾಮಿ ತಿನ್ನುವುದರಿಂದ ಕೆಲವು ಆರೋಗ್ಯಕರ ಪ್ರಯೋಜನಗಳಿವೆ:

ತೂಕ ಇಳಿಸಿಕೊಳ್ಳಲು ನೆರವು:

ಬಾದಾಮಿ ಆರೋಗ್ಯವರ್ಧಕ ಬೀಜವಾಗಿದ್ದರೂ ತೂಕ ಹೆಚ್ಚಾಗುತ್ತದೆ ಎಂಬ ಕಾರಣದಿಂದಾಗಿ ಅದನ್ನು ದೂರವಿಡುತ್ತಾರೆ. ಬಾದಾಮಿಯಲ್ಲಿ ಪ್ರೋಟೀನ್ ಮತ್ತು ಫೈಬರ್ ಹೆಚ್ಚಾಗಿದ್ದು, ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ. ಅಂತಾರಾಷ್ಟ್ರೀಯ ಜರ್ನಲ್ ಆಫ್ ಒಬೆಸಿಟಿ ಮತ್ತು ಸಂಬಂಧಿತ ಮೆಟಾಬಾಲಿಕ್ ಡಿಸಾರ್ಡರ್‍ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಾದಾಮಿ-ಸಮೃದ್ಧ ಆಹಾರವಾಗಿದ್ದು, ಕಡಿಮೆ-ಕ್ಯಾಲೋರಿಯನ್ನು ದೇಹಕ್ಕೆ ಒದಗಿಸುತ್ತದೆ.  ಇದು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಗದಿತವಾಗಿ ಆರು ತಿಂಗಳುಗಳ ಕಾಲ ಬಾದಾಮಿ ಸೇವನೆ ಮಾಡಿದವರಲ್ಲಿ ಬಿಎಂಐನಲ್ಲಿ ಶೇ. 62ರಷ್ಟು ಇಳಿಕೆ, ಸೊಂಟದ ಸುತ್ತಳತೆಯಲ್ಲಿ ಶೇ. 50 ಮತ್ತು ದೇಹದ ಕೊಬ್ಬಿನ ಪ್ರಮಾಣದಲ್ಲಿ ಶೇ. 56 ಕಡಿಮೆಯಾಗಿರುವುದು ಸಂಶೋಧನೆಯಿಂದ ಕಂಡುಬಂದಿದೆ.

ಅಹಿತಕರ ತೂಕ ನಷ್ಟದ ಕಟ್ಟುಪಾಡುಗಳ ಮೇಲೆ ಜನರಿಗೆ ಬಾದಾಮಿ ಹಾಲು ಸೂಕ್ತ ಆಯ್ಕೆಯಾಗಿದೆ. ಬಾದಾಮಿಯಲ್ಲಿರುವ ಫೈಬರ್ ಸ್ಥಿರವಾದ ಕರುಳಿನ ಚಲನೆಗೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಬಾದಾಮಿ ಸೇವಿಸುವ ಜನರಿಗೆ ಹೋಲಿಕೆ ಮಾಡಿದರೆ ಅಪರೂಪವಾಗಿ ಅಥವಾ ಬಾದಾಮಿ ಸೇವಿಸಿದವರ ದೇಹದ ತೂಕದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಗುರುತಿಸಬಹುದು.ಮೆದುಳಿನ ಆರೋಗ್ಯ ಸುಧಾರಣೆ:

ಬಾದಾಮಿ ತಿನ್ನುವುದರಿಂದ ಸ್ಮರಣ ಶಕ್ತಿಯನ್ನು ಸುಧಾರಿಸುತ್ತದೆ. ಕಲಿಕೆಯ ಸಾಮರ್ಥ್ಯ ಮತ್ತು ಆರೋಗ್ಯಕರ ಮೆದುಳಿನ ಕ್ರಿಯೆಯನ್ನು ಬೆಂಬಲಿಸುತ್ತದೆ. ಬಾದಾಮಿಯಲ್ಲಿ ರಿಬೋಫ್ಲಾವಿನ್ ಮತ್ತು ಎಲ್-ಕಾರ್ನಿಟೈನ್ ಎರಡು ಪೋಷಕಾಂಶಗಳು ಮಿದುಳಿನ ಚಟುವಟಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಭಾರತೀಯ ಜರ್ನಲ್ ಆಫ್ ಫಾರ್ಮಕಾಲಜಿ (2010) ಯಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಎರಡು ವಾರಗಳವರೆಗೆ ನಿಗದಿತವಾಗಿ ಬಾದಾಮಿ ತಿನ್ನುವುದರಿಂದ 150 ಮಿಗ್ರಾಂ ಕಲಿಕೆ ಮತ್ತು ಸ್ಮರಣೆ ಶಕ್ತಿಯನ್ನು ಸುಧಾರಿಸುತ್ತದೆ. ಮಾದಕವಸ್ತು-ಪ್ರೇರಿತ ಬುದ್ಧಿಮಾಂದ್ಯತೆ ಸ್ವರೂಪವನ್ನು ತಳ್ಳಿಹಾಕುತ್ತದೆ. ಅಲ್ಲದೆ, ಬಾದಾಮಿ ಸೇವನೆಯು ಕಿಣ್ವಗಳ ಮಟ್ಟವನ್ನು ಕಡಿಮೆಗೊಳಿಸಿ, ಅಸೆಟೈಲ್ಕೋಲಿನ್, ನ್ಯೂರೋಟ್ರಾನ್ಸ್ಮಿಟರ್ ನಿಂದ ಏಕಾಗ್ರತೆ ಮತ್ತು ಅರಿವನ್ನು ಹೆಚ್ಚಿಸುತ್ತದೆ.

#almonds #badami #almondsadvantages #healthytips #healthyfoods #balkaninews

Tags