ಜೀವನ ಶೈಲಿಸೌಂದರ್ಯ

ಮಾಂತ್ರಿಕ ಸಸ್ಯ ಅಲೋವಿರಾ

ಅಲೋ ವೆರಾವನ್ನು ಮಾಂತ್ರಿಕ ಸಸ್ಯವೆಂದು ಕರೆಯಲಾಗುತ್ತದೆ. ಆಂತರಿಕವಾಗಿ ಅಥವಾ ಆಚರಣೆಯಲ್ಲಿ ಅನ್ವಯಿಸಿದಾಗ ದೇಹಕ್ಕೆ ಅನುಕೂಲಕರವಾಗಿರುತ್ತದೆ. ಆಂತರಿಕವಾಗಿ ತೆಗೆದುಕೊಂಡಾಗ, ಇದು ಅನೇಕ ಕಾಯಿಲೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಮುಖ್ಯವಾಗಿ, ಕಣ್ಣುಗಳು, ತುಟಿಗಳು, ಚರ್ಮ ಇತ್ಯಾದಿಗಳಿಗೆ ಇದು ಒಳ್ಳೆಯದು. ಚರ್ಮದ ಮೇಲೆ ನೈಸರ್ಗಿಕ ಅಲೋ ವೆರಾ ನಿಯಮಿತವಾದ ಬಳಕೆಯು ಚರ್ಮದ ಸಮಸ್ಯೆಗಳಿಂದ ವಿಕಿರಣ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ. ಅಲೋ ವೆರಾ ನೈಸರ್ಗಿಕ ಮತ್ತು ಅತ್ಯುತ್ತಮವಾದ ಮಧುರವಾಹಕವಾಗಿದ್ದು ಇದು ಹೈಡ್ರೇಟ್ಸ್ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ಇದು ಚರ್ಮದ ಉರಿಯೂತವನ್ನು ಕಡಿಮೆಗೊಳಿಸುತ್ತದೆ ಮತ್ತು ಸುಟ್ಟ ಕಡಿತ, ಬರ್ನ್ಸ್. ಅಲೋ ವೆರಾ ಬ್ಯಾಕ್ಟೀರಿಯಾ ಮತ್ತು ವಿರೋಧಿ ಶಿಲೀಂಧ್ರ ಗುಣಗಳನ್ನು ಹೊಂದಿದೆ. ಅಲೋ ಜೆಲ್ ಚರ್ಮ ಪುನಶ್ಚೇತನಗೊಳಿಸುತ್ತದೆ ಮತ್ತು ರಿಫ್ರೆಶ್ ಮಾಡುತ್ತದೆ. ಇದು ಕಲೆಗಳು, ಮೊಡವೆಗಳು ಮತ್ತು ಚರ್ಮದ ಕಣಗಳ ಮೇಲೆ ಸಹ ಕಾರ್ಯನಿರ್ವಹಿಸುತ್ತದೆ. ಅಲೋ ವೆರಾ ವ್ಯಾಪಕವಾಗಿ ಚರ್ಮದ ಉತ್ಪನ್ನಗಳಲ್ಲಿ ಅದರ ಪ್ರಯೋಜನಕ್ಕಾಗಿ ಬಳಸಲಾಗುತ್ತದೆ. ಕೂದಲು ಬೆಳವಣಿಗೆಗೆ ಸಹಾಯ ಮಾಡಲು ಕೂದಲು ತೈಲಗಳಲ್ಲಿ ಇದನ್ನು ಬಳಸಲಾಗುತ್ತದೆ. ಅಲೋ ವೆರಾ ಜೀವಸತ್ವಗಳು, ಮತ್ತು ಖನಿಜಾಂಶಗಳಲ್ಲಿ ಸಮೃದ್ಧವಾಗಿದೆ.   ಮನೆಯಲ್ಲಿ ಅಲೋ ವೆರಾ ಬೆಳೆಯಲು ಸುಲಭ ಏಕೆಂದರೆ ಇದು ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ ಮತ್ತು ಎಲ್ಲಾ ಹವಾಮಾನದ ಮೂಲಕ ಬೆಳೆಯುತ್ತದೆ.

ಅಲೋವೆರಾ ಹಾಗೂ ಅರಿಶಿನ

ಅಲೋವೆರಾ ರಸವನ್ನು ಸ್ವಲ್ಪ ಅರಿಶಿನ ಹಾಕಿ ಕಲೆಸಿ ಮುಖಕ್ಕೆ ಹಚ್ಚಬೇಕು. ಇದರಿಂದ ಅರಿಶಿನ ಹಾಗೂ ಅಲೋವೆರಾ ಎರಡರ ಪೋಷಕಾಂಶಗಳು ಚರ್ಮಕ್ಕೆ ಶಮನಕಾರಿ ಗುಣವನ್ನು ನೀಡುತ್ತವೆ.

ಕಪ್ಪು ಕಲೆಗಳ ನಿವಾರಣೆಗೆ

ಅಲೋವೆರಾ ರಸವನ್ನು ಒಂದು ಚಮಚ ಜೇನು ತುಪ್ಪ ಹಾಗೂ ಅರ್ಧ ನಿಂಬೆ ಹಣ್ಣಿನ ರಸಕ್ಕೆ ಕಲೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ದೂರ ಆಗುತ್ತವೆ.
ಅಲೋವೆರಾದ ಐಸ್ ಗಡ್ಡೆಗಳು

ನಿಮ್ಮ ರೆಫ್ರಿಜರೇಟರ್ ನ ಐಸ್ ಟ್ರೆ ಯನ್ನು ಚೆನ್ನಾಗಿ ತೊಳೆದು ಅದರಲ್ಲಿ ಅರ್ಧ ಭಾಗಕ್ಕೆ ಶುದ್ಧವಾದ ನೀರನ್ನು ತುಂಬಿ. ಇನ್ನೂ ಅರ್ಧಕ್ಕೆ ಅಲೊವೆರ ರಸವನ್ನು ಹಾಗೆಯೇ ಮೇಲೆ ಹಾಕಿ ಫ್ರೀಜ಼ರ್ ನಲ್ಲಿ ಇಡಿ. ಇದು ಗಡ್ಡೆ ಕಟ್ಟಿಕೊಂಡ ನಂತರ ಚೆನ್ನಾಗಿ ಮುಖ ತೊಳೆದು ಈ ಮಂಜುಗಡ್ಡೆ ಇಂದ ಹಾನಿಗೊಳಗಾದ ಚರ್ಮದ ಮೇಲೆ ಮೆತ್ತಗೆ ಉಜ್ಜಿ. ಇದರಿಂದ ಚರ್ಮಕ್ಕೆ ತಣ್ಣಗೆ ಹಾಯ್ ಎನಿಸುವುದೇ ಅಲ್ಲದೆ ಹಾಗೆಯೇ ಚರ್ಮವು ಕಾಂತಿಯುತವಾಗಿ ಕಾಣುತ್ತದೆ.
ಅಲೋವೆರಾ ಮತ್ತು ವಿಟಮಿನ್ ಇ

ಎರಡು ವಿಟಮಿನ್ ಈ ಕ್ಯಾಪ್ಸೂಲ್ ಗಳನ್ನು ಸಣ್ಣಗೆ ಕತ್ತರಿಸಿ ಅಥವಾ ಚುಚ್ಚಿ ತೂತು ಮಾಡಿ ಅದರಲ್ಲಿರುವ ಎಣ್ಣೆಯನ್ನು ಹೊರಗೆ ತೆಗೆಯಿರಿ. ಇದಕ್ಕೆ ಸ್ವಲ್ಪ ಅಲೋವೆರಾ ರಸವನ್ನು ಸೇರಿಸಿ ಕಲೆಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಚರ್ಮವು ಯವ್ವನ ಭರಿತವಾಗಿ ಕಾಣುತ್ತದೆ.

ಅಲೋವೆರಾ ಮತ್ತು ಸೌತೆಕಾಯಿ

ಸೌತೆ ಕಾಯಿಯನ್ನು ತೊಳೆದು ಒಂದು ಚಿಕ್ಕ ತುಂಡು ಕತ್ತರಿಸಿಕೊಳ್ಳಿ. ಇದನ್ನು ಅಲೋವೆರಾ ರಸದೊಂದಿಗೆ ಮಿಕ್ಸಿಯಲ್ಲಿ ಆಡಿಸಿ ರಸ ಮಾಡಿಕೊಳ್ಳಿ. ಈ ರಸವನ್ನು ಕ್ರಮವಾಗಿ ವಾರಕ್ಕೆ ಎರಡು ಅಥವಾ ಮೂರು ಸಾರಿ ಹಚ್ಚಿ ಹದಿನೈದು ನಿಮಿಷಗಳ ಕಾಲ ಬಿಡುವುದರಿಂದ ಕಲೆಗಳು ಕೂಡ ಮಾಯಾ ವಾಗುತ್ತವೆ.
ಅಲೋವೆರಾ ಹಾಗೂ ಮುಲ್ತಾನಿ ಮಿಟ್ಟಿ

ಮುಲ್ತಾನಿ ಮಿಟ್ಟಿ ಯನ್ನು ಅಲೊವೆರ ರಸದ ಜೊತೆ ಕಲೆಸಿ ಮುಖಕ್ಕೆ ಹಚ್ಚಬೇಕು. ಇದನ್ನು ಕಲೆಸಲು ಬೇಕಾದರೆ ಸ್ವಲ್ಪ ಗುಲಾಬಿ ನೀರನ್ನು ಕೂಡ ಸೇರಿಸಬಹುದು. ಇವು ಏನು ಇಲ್ಲದೆ ನಾವು ಬರಿ ಅಲೊವೆರ ರಸವನ್ನು ಕೂಡ ಮುಖಕ್ಕೆ ಹಚ್ಚಬಹುದು. ಈ ಪದಾರ್ಥವು ನಮಗೆ ಎಲ್ಲಾ ತರಹದ ಚರ್ಮದ ತೊಂದರೆಯಿಂದ ವಿಮುಕ್ತಿ ನೀಡಬಲ್ಲುದಾಗಿದೆ.

   ಸುಹಾನಿ ಬಡೆಕ್ಕಿಲ.

 

Tags

Related Articles

Leave a Reply

Your email address will not be published. Required fields are marked *