ಆರೋಗ್ಯಜೀವನ ಶೈಲಿ

ಮೂಲವ್ಯಾಧಿಗೆ ರಾಮಬಾಣ ಉದ್ದ ಬದನೆಕಾಯಿ

ಬದನೆಕಾಯಿ ಎಂದರೆ ಅಯ್ಯೋ ಅದರಲ್ಲೇನಿದೆ ಬದನೆಕಾಯಿ ಪಲ್ಯ ಎನ್ನುವವರೇ ಅಧಿಕ. ಹೌದು ಬದನೆಕಾಯಿ ಕೇವಲ ತರಕಾರಿ ಅಷ್ಟೇ ಅಲ್ಲ ಅದರಲ್ಲಿ ಅನೇಕ ಔಷಧೀಯ ಗುಣಗಳು ಇವೆ.

ಬದನೆಯ ಬೇರು, ಎಲೆ ಮತ್ತು ಎಳೆಯ ಕಾಯಿ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ.

* ಬದನೆಯ ಎಲೆಗಳನ್ನು ಅರೆದು ಅದಕ್ಕೆ ಸಕ್ಕರೆ ಸೇರಿಸಿ. ಈ ಮಿಶ್ರಣವನ್ನು ನವೆ ಅಥವಾ ತುರಿಕೆ ಇರುವ ಜಾಗಕ್ಕೆ ಹಚ್ಚಿ 1 ಗಂಟೆಯ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ತುರಿಕೆ ನಿವಾರಣೆಯಾಗುತ್ತದೆ .

* ಮೂಲವ್ಯಾಧಿಯಿಂದ ಬಳಲುತ್ತಿದ್ದಲ್ಲಿ , ಉದ್ದವಾದ ನೇರಳೆ ಬಣ್ಣದ ಬದನೆಯನ್ನು ಬೇಯಿಸಿ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ, ಪ್ರತಿದಿನ ಬೆಳಗ್ಗೆ ಸೇವಿಸಿದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ .

* ಎಳೆಯ ಬದನೆಯನ್ನು ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ, ಕಣ್ಣಿನ ಸಮಸ್ಯೆ ದೂರವಾಗುತ್ತದೆ ಮತ್ತು ದೃಷ್ಟಿ ಹೆಚ್ಚುತ್ತದೆ.

* ಯಾವಾಗಲು ಅಂಗೈ ಮತ್ತು ಅಂಗಾಲು ಬೆವರುತ್ತಿದ್ದರೆ, ಬದನೆಯನ್ನು ಸಣ್ಣಗೆ ಹೆಚ್ಚಿ ನೀರಿಗೆ ಹಾಕಿ. ಸ್ವಲ್ಪ ಸಮಯದ ನಂತರ, ಬದನೆಯನ್ನು ತೆಗೆದು ಆ ನೀರಿನಲ್ಲಿ ದಿನವೂ ಕೈ-ಕಾಲುಗಳನ್ನು 30 ನಿಮಿಷ ಮುಳುಗಿಸಿಡಬೇಕು ಹೀಗೆ ಮಾಡುವುದರಿಂದ ಬೆವರುವುದು ನಿಲ್ಲುತ್ತದೆ.

* ಬದನೆ ಎಲೆಗಳನ್ನು ಕೆಂಡದಲ್ಲಿ ಬಿಸಿ ಮಾಡಿ, ಏಟುಬಿದ್ದ ಗಾಯದ ಮೇಲೆ ಕಟ್ಟಿದರೆ, ನೋವು ಬೇಗ ಗುಣವಾಗುತ್ತದೆ.

* ಪಿತ್ತದ ತೊಂದರೆಯಿಂದ ಬಳಲುತ್ತಿದ್ದರೆ ಬದನೆಯನ್ನು ಹೆಚ್ಚಾಗಿ ಸೇವಿಸಬಾರದು. ಬಲಿತ ಬದನೆಯನ್ನು ಉಪಯೋಗಿಸದೆ ಇರುವುದು ಉತ್ತಮ.

Tags