ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ಆರೋಗ್ಯದ ಆಗರ ಬಾಳೆಹಣ್ಣಿನ ಸಿಪ್ಪೆ!

ಬೆಂಗಳೂರು, ಮೇ.23:

ಬಾಳೆಹಣ್ಣು ತಿಂದ ಬಳಿಕ ಅದರ ಸಿಪ್ಪೆಯನ್ನು ಎಸೆಯುವುದು ಸರ್ವೇಸಾಮಾನ್ಯ. ಬಾಳೆಹಣ್ಣಿನ ಸಿಪ್ಪೆಯೂ ಕೂಡಾ ಹಣ್ಣಿನಷ್ಟೇ ಆರೋಗ್ಯಕರ ಎಂಬ ವಿಚಾರ ಹಲವರಿಗೆ ತಿಳಿದಿಲ್ಲ. ಬಾಳೆಹಣ್ಣಿನ ಸಿಪ್ಪೆಯೂ ಕೂಡಾ ಪೋಷಕಾಂಶಗಳ ಆಗರ ಎಂದರೆ ನಂಬಲು ಸಾಧ್ಯವೇ? ಆಶ್ಚರ್ಯ ಎಂದೆನಿಸಿದರೂ ಹೌದು. ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೆಗ್ನಿಶಿಯಂ, ಪೊಟಾಶಿಯಂ, ನಾರಿನಾಂಶ ಮತ್ತು ಪ್ರೋಟೀನ್ ಹೇರಳವಾಗಿದೆ.

ಹದಿಹರೆಯದಲ್ಲಿ ಕಾಡುವ ಮೊಡವೆಗಳಿವೆ ಇದು ಉತ್ತಮ ಪರಿಹಾರ. ಮೊಡವೆಗಳು ಮೂಡಿದಾಗ ಅದರ ಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚಬೇಕು. ಹಚ್ಚಿದ ನಂತರ ಅರ್ಧ ಗಂಟೆ ಕಾಲ ಹಾಗೇ ಬಿಡಬೇಕು. ಇದರಿಂದ ಮೊಡವೆಯಿಂದ ಉಂಟಾಗುವ ನೋವು ಕಡಿಮೆಯಾಗುತ್ತದೆ.

ಎಲ್ಲದಕ್ಕಿಂತಲೂ ಮುಖ್ಯವಾಗಿ ಬಾಳೆಹಣ್ಣು ಸಿಪ್ಪೆ ಅತ್ಯುತ್ತಮ ನೋವು ನಿವಾರಕವೂ ಹೌದು‌. ನೋವಾಗುತ್ತಿರುವ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಲೇಪಿಸಿ. ನಂತರ ಇದನ್ನು ಅರ್ಧ ನಿಮಿಷ ಹಾಗೆ ಬಿಡಿ. ಇದರಿಂದ ನೋವು ನಿವಾರಣೆಯಾಗುತ್ತದೆ.

ಸೋರಿಯಾಸಿಸ್ ಗೆ ಇದು ಉತ್ತಮ ಮದ್ದು. ಸೋರಿಯಾಸಿಸ್ ಉಂಟಾದ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚಿ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಅಧಿಕ ಪ್ರಮಾಣದ ಮೊಯಿಶ್ಚರೈಸರ್ ಗುಣಗಳಿವೆ. ಇವು ತುರಿಕೆಯನ್ನು ನಿವಾರಿಸುತ್ತವೆ. ಮಾತ್ರವಲ್ಲ ಸೋರಿಯಾಸಿಸ್‍ನಿಂದ ತಕ್ಷಣ ಉಪಶಮನವನ್ನು ಒದಗಿಸುತ್ತದೆ.

Related image

ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸುಲಭ ಪರಿಹಾರ ಬಾದಾಮಿ ಎಣ್ಣೆ

#bananapeel #bananapeelusefull #bananapeeladvantages #bananapeelbeautytips

 

Tags