ಆರೋಗ್ಯಜೀವನ ಶೈಲಿಸೌಂದರ್ಯ

ತುಳಸಿ..!? ತಲೆಹೊಟ್ಟು ನಿವಾರಣೆ ಮಾಡಲು, ಕೂದಲಿಗೆ ತುಳಸಿ..?!

ತುಳಸಿಯಿಂದ ನೀವು ಆರೋಗ್ಯಕರ ಮತ್ತು ಕಾಂತಿಯುತ ಕೂದಲು ಪಡೆಯಲು...

ಕೂದಲಿನ ಆರೈಕೆ ಮಾಡುವ ವೇಳೆ ನೀವು ಪ್ರಮುಖವಾಗಿ ಗಮನಹರಿಸಲೇಬೇಕಾದ ವಿಷಯವೆಂದರೆ ಅದು ತಲೆಹೊಟ್ಟು. ಯಾಕೆಂದರೆ ಕೂದಲು ಉದುರುವಿಕೆಗೆ ತಲೆಹೊಟ್ಟು ಪ್ರಮುಖ ಕಾರಣವಾಗಿದೆ. ತಲೆಹೊಟ್ಟು ನಿವಾರಣೆ ಮಾಡಲು ನೀವು ಮನೆಯಲ್ಲೇ ಹಲವಾರು ರೀತಿಯ ಮನೆಮದ್ದನ್ನು ತಯಾರಿಸಿಕೊಳ್ಳಬಹುದು. ಇದಕ್ಕೆ ಮೊದಲು ತಲೆಹೊಟ್ಟು ಬರಲು ಮೂಲ ಕಾರಣವೇನೆಂದು ತಿಳಿಯುವುದು ಅಗತ್ಯ.

ತಲೆಹೊಟ್ಟಿಗೆ ಕಾರಣವೇನು?

ತಲೆಬುರುಡೆಯ ತೀವ್ರವಾಗಿರುವ ಸಮಸ್ಯೆಯೇ ತಲೆಹೊಟ್ಟು ಮತ್ತು ಇದು ಯಾವುದೇ ಹಾನಿಯುಂಟು ಮಾಡದೆ ಇದ್ದರೂ ಕಿರಿಕಿರಿ, ತುರಿಕೆ ಉಂಟುಮಾಡುವುದು. ಇದರಿಂದ ಕೂದಲು ಉದುರುವುದು. ತಲೆಬುರುಡೆಯು ತುಂಬಾ ಒಣಗಿದಾಗ ಮತ್ತು ಜಿಡ್ಡಿನಾಂಶವು ಹೆಚ್ಚಾಗಿದ್ದಾಗ ತಲೆಹೊಟ್ಟು ಕಾಣಿಸಿಕೊಳ್ಳುವುದು. ಇದರಿಂದಾಗಿ ಸತ್ತಚರ್ಮದ ತಲೆಯಲ್ಲಿ ಬಿಳಿ ತೊಗಲು ಕಾಣಿಸಿಕೊಳ್ಳುವುದು. ಇದು ನಿಮ್ಮ ಭುಜದ ಮೇಲೆ ಬೀಳಬಹುದು. ಚರ್ಮದ ಹೊಸ ಕೋಶಗಳು ಇಲ್ಲಿ ನಿರಂತರವಾಗಿ ರೂಪುಗೊಳ್ಳುತ್ತಾ ಇರುವುದು ಮತ್ತು ಸತ್ತ ಚರ್ಮದ ಕೋಶಗಳು ಕಿತ್ತುಹೋಗುತ್ತಲಿರುವುದು. ಸಾಮಾನ್ಯಕ್ಕಿಂತ ವೇಗವಾಗಿ ಸತ್ತ ಚರ್ಮದ ಕೋಶಗಳು ವೇಗವಾಗಿ ಹೋದಾಗ ಚರ್ಮದ ಕೋಶದಲ್ಲಿನ ಎಣ್ಣೆಯು ಗುಂಪಾಗಿ ಬಿಳಿ ತೊಗಲು ಕಾಣಿಸುವುದು. ಒಣ, ಜಿಡ್ಡಿನಾಂಶವಿರುವ, ಕೂದಲಿನ ಉತ್ಪನ್ನಗಳಿಗೆ ಸೂಕ್ಷ್ಮತೆ, ಕೆಲವೊಂದು ತಲೆಯ ಪರಿಸ್ಥಿತಿಗಳಾದ ಇಸುಬು, ಸೆಬೊರ್ಹೆಕ್ ಡರ್ಮಟೈಟಿಸ್ ಮತ್ತು ಯೀಸ್ಟ್ ನಂತಹ ಶಿಲೀಂಧ್ರಗಳು ಅತಿಯಾಗಿ ಬೆಳವಣಿಗೆಯಾಗುವುದರಿಂದ ತಲೆಹೊಟ್ಟು ಉಂಟಾಗಬಹುದು. ಹಾರ್ಮೋನು ಅಸಮತೋಲನ, ಒತ್ತಡ ಅಥವಾ ಪ್ರತಿರೋಧಕ ಸಮಸ್ಯೆಯ ಸಮಸ್ಯೆಯು ತಲೆಹೊಟ್ಟಿಗೆ ಕಾರಣವಾಗಿರಬಹುದು.

 ಮನೆಮದ್ದು ತಲೆಹೊಟ್ಟಿನ ನಿವಾರಣೆಗೆ  ತುಳಸಿ ನೆರವಾಗುವುದೇ? 

ತುಳಸಿಯಿಂದ ನೀವು ಆರೋಗ್ಯಕರ ಮತ್ತು ಕಾಂತಿಯುತ ಕೂದಲು ಪಡೆಯಬಹುದು. ಇದು ತಲೆಹೊಟ್ಟು, ತುರಿಕೆ ಉಂಟುಮಾಡುವ ತಲೆಬುರುಡೆ ನಿವಾರಣೆ ಮತ್ತು ಕೂದಲಿನ ಚೀಲಗಳನ್ನು ಬಲಗೊಳಿಸಲು ನೆರವಾಗುವುದು. ಇದು ಕೂದಲಿಗೆ ತೇವಾಂಶ ನೀಡಿ, ರಕ್ತಸಂಚಾರವನ್ನು ಸುಧಾರಣೆ ಮಾಡುವುದು. ತಲೆಹೊಟ್ಟಿನ ನಿವಾರಣೆ ಮಾಡುವಲ್ಲಿ ತುಳಸಿಯು ತುಂಬಾ ಪರಿಣಾಮಕಾರಿಯಾಗಿದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಈ ಗುಣಗಳಿಂದಾಗಿ ಇದು ತಲೆಬುರುಡೆಯಲ್ಲಿ ಇರುವ ಎಲ್ಲಾ ಕಲ್ಮಷಗಳನ್ನು ನಿವಾರಣೆ ಮಾಡುವುದು. ಬಿಳಿತೊಗಲನ್ನು ನಿವಾರಿಸುವುದು ಮತ್ತು ತಲೆಬುರುಡೆಯಲ್ಲಿ ಪಿಎಚ್ ಮಟ್ಟ ಕಾಪಾಡುವುದು. ಸೋಂಕು ಉಂಟು ಮಾಡುವಂತಹ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದು.

ಕೂದಲಿಗೆ ತುಳಸಿ ಲಾಭಗಳು ತಲೆಹೊಟ್ಟು ಸಮಸ್ಯೆ ನಿವಾರಣೆ ಮಾಡುವುದರೊಂದಿಗೆ ತುಳಸಿಯು ಕೂದಲು ಉದುರದಂತೆ ತಡೆಯುವುದು. ಯಾಕೆಂದರೆ ತುಳಸಿಯಲ್ಲಿ ವಿಟಮಿನ್ ಎ, ಸಿ, ಕೆ ಮತ್ತು ಇ ಶಕ್ತಿಶಾಲಿ ವಿಟಮಿನ್ ಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಹಾನಿಗೊಳಗಾಗಿರುವಂತಹ ಕೂದಲಿನ ಚೀಲಗಳನ್ನು ಇದು ಸರಿಪಡಿಸುವುದು. ಕೂದಲನ್ನು ಬುಡದಿಂದ ಬಲಪಡಿಸಿ, ಕೂದಲು ಉದುರದಂತೆ ತಡೆಯುವುದು.

Tags