ಆರೋಗ್ಯಜೀವನ ಶೈಲಿಸೌಂದರ್ಯ

ಸನ್ ಸ್ಕ್ರೀನ್ ಬಳಸುವ ಮುನ್ನ ಜಾಗರೂಕರಾಗಿರಿ…!

ಬೆಂಗಳೂರು, ಮೇ.14:

ದಿನದಿಂದ ದಿನಕ್ಕೆ ಬಿಸಿಲಿನ ಝಳ ಜಾಸ್ತಿಯಾಗುತ್ತಿದೆ. ಸೂರ್ಯನ ಬಿಸಿ ಕಿರಣಗಳಿಂದ ತಪ್ಪಿಸುವುದಕ್ಕಾಗಿ ಬಹಳಷ್ಟು ಹರಸಾಹಸ ಮಾಡುತ್ತಿದ್ದಾರೆ. ಬಿಸಿಲಿನ ಝಳದಿಂದ ಚರ್ಮವನ್ನು ಕಾಪಾಡಲು ಸನ್ ಸ್ಕ್ರೀನ್ ಲೋಷನ್ ಹಚ್ಚುತ್ತಿದ್ದಾರೆ. ಆದರೆ ಅದೇ ಸನ್ ಸ್ಕ್ರೀನ್ ಗಳಲ್ಲಿ ಪ್ರಬಲವಾದ ರಾಸಾಯನಿಕ ಅಂಶಗಳಿವೆ.

ಚರ್ಮದ ರಕ್ಷಣೆಗಾಗಿ ಹಚ್ಚುವ ಸನ್ ಸ್ಕ್ರೀನ್ ಲೋಷನ್ ಗಳಿಂದ ತ್ವಚೆಗೆ ಅಲರ್ಜಿಯಾಗುವಂತೆ ಮಾಡಬಹುದು. ಅಲರ್ಜಿ ಎಂದರೆ ಸನ್ ಸ್ಕ್ರೀನ್ ಹಚ್ಚಿದ್ದರ ಪರಿಣಾಮವಾಗಿ ಚರ್ಮ ಕೆಂಪಗಾಗುವುದು, ತುರಿಕೆ, ಊತ ಉಂಟಾಗಬಹುದು.  ಅದಕ್ಕೆ ಮುಖ್ಯವಾದ ಕಾರಣ ಸನ್‌ ಸ್ಕ್ರೀನ್‌ನಲ್ಲಿರುವ ಪ್ರಿಸರ್ವೇಟಿವ್ ಮತ್ತು ಸುಗಂಧ ದ್ರವ್ಯ ಇಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಎಂದಿಗೂ ಅವಸರದಿಂದ ಸನ್ ಸ್ಕ್ರೀನ್ ಲೋಶನ್ ಹಚ್ಚಲು ಹೋಗಬೇಡಿ. ಯಾಕೆಂದರೆ ಇಂತಹ ಸಂದರ್ಭದಲ್ಲಿ ಅದು ಲೋಶನ್ ಕಣ್ಣಿಗೆ ತಾಗುವ ಅವಕಾಶ ಹೆಚ್ಚಿರುತ್ತದೆ. ಇದರಿಂದ ಕಣ್ಣು ಕೆಂಪಾಗುವುದು ಮತ್ತು ಉರಿ ಉಂಟಾಗಬಹುದು. ಇದರಿಂದ ಶಾಶ್ವತವಾಗಿ ಕಣ್ಣನ್ನು ಕಳೆದುಕೊಳ್ಳಬೇಕಾದಿತು.

ಹದಿಹರೆಯದ ಒಡವೆ ಮೊಡವೆ ಸಮಸ್ಯೆ ಇರುವವರು ಬಹುತೇಕ ಜನರಲ್ಲಿ ಸನ್‌ಸ್ಕ್ರೀನ್ ಬಳಸುವಾಗ ಜಾಗ್ರತೆ ಬೇಕು. ಯಾಕೆಂದರೆ ಲೋಶನ್ ಬಳಸುವುದರಿಂದ ಮೊಡವೆ ಸಮಸ್ಯೆಯ  ಉಲ್ಭಣಗೊಳ್ಳಲು ಬಹುದು. ಒಟ್ಟಿನಲ್ಲಿ ಲೋಶನ್ ಬಳಸುವಾಗ ಜಾಗ್ರತೆ ವಹಿಸಿ.

ಭೃಂಗದ ಬೆನ್ನೇರಿ ನಾಲ್ಕುತಂತಿ ಮೀಟಿದ ಸುಜಾತಾ

#balkaninews #beautytips #foods #sunscreen

Tags