ಜೀವನ ಶೈಲಿಸೌಂದರ್ಯ

ಸುಳ್ಳಾಗಿದೆ, ನಿಜವೆಂದು ನಂಬಿದ ಸೌಂದರ್ಯದ ಟಿಪ್ಸ್ ಗಳು

ಬೆಂಗಳೂರು, ಫೆ.01:

ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಪ್ರಾಥಮಿಕ ಅಭಿಲಾಷೆ. (ಸೌಂದರ್ಯ ಎನ್ನುವುದು ಹೊರಗಿನಿಂದ ಕೊಂಡು ಕಾಣುವುದಲ್ಲ. ನಮ್ಮಲ್ಲಿ ಏನಿದೆಯೋ ಅದನ್ನು ಅಚ್ಚುಕಟ್ಟಾಗಿ ವ್ಯಕ್ತಪಡಿಸುವುದು ಇದು ನನ್ನ ನಂಬಿಕೆ.)

ಸುಂದರವಾಗಿ  ಕಾಣಲು ನಾವು ಹಳೆಯ 5 ಟಿಪ್ಸ್ ಗಳನ್ನು ಪಾಲಿಸುತ್ತಿದ್ದೇವೆ. ಆದರೆ, ಆ ಟಿಪ್ಸ್ ಗಳೇ ನಮಗೆ ಮಾರಕವಾಗಿದೆ. ಅವುಗಳ ಬಗ್ಗೆ ತಿಳಿಯೋಣ. ಮತ್ತು ಕೆಲವನ್ನು ತಿದ್ದಿಕೊಂಡು ಅನುಸರಿಸದರೆ ಉತ್ತಮ ಎಂಬುದಕ್ಕಾಗಿಯೇ ಈ ಲೇಖನ.

ನಿಂಬೆಹಣ್ಣಿನ ಬಳಕೆ:  ಪಿಂಪಲ್ ಪ್ರೀಯಾಗಲು ನಾವು ಈ ಮೆಥೆಡ್ ಬಳಸುತ್ತಿವೆ. ನಿಂಬೆಹಣ್ಣಿನಲ್ಲಿ  ಸಿಟ್ರಿಕ್ ಆಸಿಡ್ ಇದ್ದು, ಅದನ್ನು ತ್ವಚ್ಛೆಯ ಮೇಲೆ ನೇರವಾಗಿ ಉಜ್ಜುವುದರಿಂದ ತ್ವಚೆ ಹಾನಿಗೊಳಗಾಗುತ್ತದೆ. ಆದ್ದರಿಂದ ಇದಕ್ಕೆ ಬದಲಾಗಿ , ಗ್ಲಿಸರಿನ್ ಅಥವಾ ಫೇಸ್ ಪ್ಯಾಕ್ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದು ಉತ್ತಮ.

ಮೊಡವೆ ಮಾಯವಾಗಿಸಲು ಪದೇ ಪದೇ ನೀರಿನಿಂದ ಮುಖ ತೊಳೆಯುವುದು: ಪದೇ ಪದೇ ನೀರಿನಿಂದ ಮುಖ ತೊಳೆದರೆ ಮೊಡವೆ ಮಾಯವಾಗುತ್ತದೆ. ಎಂದು ತುಂಬಾ ಜನ ನಂಬಿದ್ದಾರೆ. ಆದರೆ ಇದು ಸುಳ್ಳು. ಇದರಿಂದ ಸ್ಕಿನ್ ತನಗೆ ಬೇಕಾದ ಆಯಿಲ್ ಕಂಟೆಟ್ ಕಳೆದುಕೊಂಡು ಡ್ರೈ ಆಗುವುದರಿಂದ ಮೊಡವೆ ಜಾಸ್ತಿ ಆಗುತ್ತದೆ. ಇದಕ್ಕೆ ಬದಲಿಗೆ ದಿನಕ್ಕೆ 2 – 3 ಸಲ ಮಾತ್ರ ಫೇಸ್ ವಾಶ್ ಮಾಡುವುದು ಒಳಿತು.

ಬೆಳ್ಳಗೆ ಕಾಣಲು ಫೇರ್ ನೆಸ್ ಕ್ರೀಂ:  ಈ ಹೇಳಿಕೆ ಕೇವಲ ಕಂಪೆನಿಗಳು ಪ್ರಾಡೆಕ್ಟ್ ಸೇಲ್ ಮಾಡಲು ಬಳಸುವ ತಂತ್ರ. ಫೇರ್ ನೆಸ್ ಕ್ರೀಂ ನಿಮ್ಮ ತ್ವಚ್ಛೆಯ ಪಿಗ್ಮೆಂಟೇಶನ್ ನನ್ನು ತೆಗೆಯುತ್ತದೆ. ಅಷ್ಟೇ ಅದಕ್ಕೆ ಬದಲಿಗೆ ಆತ್ಮ ವಿಶ್ವಾಸವನ್ನು ವೃದ್ದಿಸಿಕೊಳ್ಳಿ. ದೇವರು ನಮಗೆ ನೀಡಿರುವ ಸೌಂದರ್ಯವನ್ನು ಕಾಪಾಡಿ. ಇದಕ್ಕಾಗಿ ಯೋಗ, ಧ್ಯಾನ, ಪ್ರಾಣಾಯಾಮ ಉತ್ತಮ.

ಮೋಡವಿರುವ ವಾತಾವರಣದಲ್ಲಿ ಸನ್ ಸ್ರ್ಕೀನ್ ಬಳಸಬಾರದು:  ಸನ್ ಸ್ರ್ಕೀನ್ ಲೋಷನ್ ನಮ್ಮನ್ನು ಅಲ್ಟ್ರಾವೈಲೆಟ್ ಕಿರಣದಿಂದ ಕಾಪಾಡುತ್ತದೆ. ಬಿಸಿಲು ಇದ್ದಾಗ ಮಾತ್ರ ಸನ್ ಸ್ರ್ಕೀನ್ ಬಳಸಬೇಕು. ಕ್ಲೌಡಿ ಡೇನಲ್ಲಿ ಅಗತ್ಯವಿಲ್ಲ ಎಂದು ನಂಬಿದ್ದೇವೆ. ಆದರೆ ಮೋಡ ಕವಿದ ದಿನವೂ ಕೂಡ ಸೂರ್ಯನ ಬೆಳಕು ಸುಲಭವಾಗಿ ನಮ್ಮ ಮೇಲೆ ಬೀಳುತ್ತದೆ. ಹೀಗಾಗಿ ತ್ವಚ್ಛೆಯ ರಕ್ಷಣೆಗೆ ಎಲ್ಲಾ ಕಾಲದಲ್ಲೂ ಸನ್ ಸ್ರ್ಕೀನ್ ಅಗತ್ಯವಿದೆ.

ಪಿಂಪಲ್ ಫ್ರೀ ತ್ವಚೆಗೆ ಸ್ಕ್ರಬ್ ಮತ್ತು ಫೇಶಿಯಲ್ ಅಗತ್ಯ: ಹೀಗೆ ನಂಬಿ ನಾವು ಪದೇ ಪದೇ ಸ್ಕ್ರಬ್ ಮಾಡಿಸುವುದರಿಂದ, ನಿಮ್ಮ ತ್ವಚ್ಛೆಯು ಫೇರ್ ಒಪನ್ ಆಗಿ, ಸ್ಕಿನ್ ಸೆನ್ ಸಿಟೀವ್ ಆಗುತ್ತದೆ. ಹಾಗಾಗಿ ಸ್ಕ್ರಬ್ ಮತ್ತು ಫೇಶಿಯಲ್  ಮಾಡಿಸುವುದರಿಂದ ಹಣವ್ಯಯದ ಜೊತೆಗೆ ಪಿಂಪಲ್ ಜಾಸ್ತಿಯಾಗುವ ಸಾಧ್ಯತೆಯೇ ಹೆಚ್ಚು.

ಈ ಮೇಲೆ ತಿಳಿಸಿದ ಸುಂದರ ತ್ವಚ್ಛೆಗಾಗಿ ನಾವು ಅನುಸರಿಸುತ್ತಿದ್ದ 5 ಟಿಪ್ಸ್ ಗಳನ್ನು ಸುಧಾರಣೆ ತಂದುಕೊಳ್ಳಿ. ಅದರ ಜೊತೆಗೆ ಪೌಷ್ಟಿಕಾಂಶ ಆಹಾರ, ಧ್ಯಾನ, ಯೋಗ, ಪ್ರಾಣಯಾಮದ ಜೊತೆಗೆ ನೈಸರ್ಗಿಕ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ.

ಸಂಜೆಯ ರಂಗನ್ನು ಹೆಚ್ಚಿಸುವ ಬಿಸಿ ಬಿಸಿ ಪಕೋಡಾವನ್ನು ಇಂದೇ ಟ್ರೈ ಮಾಡಿ

#beautytips #balkaninews #beautytipsforfacepack #facepack #facepacktreatment

Tags