ಫ್ಯಾಷನ್ಬಾಲ್ಕನಿಯಿಂದಮಹಿಳೆಸುದ್ದಿಗಳುಸೌಂದರ್ಯ

“ವೀರಮಹಾದೇವಿ” ಸನ್ನಿಲಿಯೋನ್ ಗೆ ಪೊಲೀಸರ ಅಭಯ

ಪ್ರಜಾಪ್ರಭುತ್ವ ದೇಶದಲ್ಲಿ ಯಾರು ಯಾವ ಸಿನಿಮಾವನ್ನಾದರೂ ಮಾಡಬಹುದು... ತಡೆಯುವ ಶಕ್ತಿ ಯಾರಿಗೂ ಇಲ್ಲ.

ಪ್ರಜಾಪ್ರಭುತ್ವ ದೇಶದಲ್ಲಿ ಯಾರು ಯಾವ ಸಿನಿಮಾವನ್ನಾದರೂ ಮಾಡಬಹುದು… ತಡೆಯುವ ಶಕ್ತಿ ಯಾರಿಗೂ ಇಲ್ಲ.

ಬೆಂಗಳೂರು. ಅ-29: ಸನ್ನಿಲಿಯೋನ್ ಸಿನಿಮಾ “ವೀರಮಹಾದೇವಿ” ಬಿಡುಗಡೆಗೆ ಅಡ್ಡಿ ಮಾಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಸನ್ನಿ ಲಿಯೋನ್ ಸಿನಿಮಾ ಬೆಂಗಳೂರಿನಲ್ಲಿ ಬಿಡುಗಡೆಯಾಗಬಾರದೆಂದು ಪ್ರತಿಭಟನೆಗಳು ನಡೆಯುತ್ತಿವೆ. ಅಷ್ಟೆ ಅಲ್ಲ ಬೆಂಗಳೂರಿನಲ್ಲಿ ಬಿಡುಗಡೆಯಾದರೆ ಉಗ್ರ ಹೋರಾಟ ಮಾಡುವುದಾಗಿ ಈಗಾಗಲೆ ಕನ್ನಡ ಸಂಘಟನೆಗಳೂ, ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದರು. ಈಗಾಗಲೇ ಸಿನಿಮಾ ಬಿಡುಗಡೆಗೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸನ್ನಿ ಲಿಯೋನ್‌ಗೆ ಬೆಂಗಳೂರು ಪೊಲೀಸರು ಅಭಯ ಹಸ್ತ ನೀಡಿದ್ದಾರೆ.

“ವೀರಮಹಾದೇವಿ” ಸಿನಿಮಾಗೆ ವಿರೋಧ

ಹೌದು, ನಟಿ ಸನ್ನಿಲಿಯೋನ್ ಸದ್ಯ “ವೀರಮಹಾದೇವಿ” ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಚಿತ್ರವಾಗಿದೆ. ಈಗಾಗಲೇ ಸಿನಿಮಾ ಪೋಸ್ಟರ್ ಗಳಿಂದ ಸಾಕಷ್ಟು ನಿರೀಕ್ಷೆ ಮಾಡಿರುವ ಈ ಸಿನಿಮಾ ಸದ್ಯ ಬಿಡುಗಡೆಗೂ ರೆಡಿಯಾಗಿದೆ. ಇದೀಗ ಈ ಸಿನಿಮಾ ಬೆಂಗಳೂರಲ್ಲಿ ಬಿಡುಗಡೆಯಾಗಬಾರದೆಂದು ಅಡ್ಡಿಪಡಿಸಲಾಗುತ್ತಿದೆ. ಈ ಸಿನಿಮಾದಲ್ಲಿ ಸನ್ನಿ ನಟಿಸಿದರೆ ಸಂಸಕೃತಿ ಹಾಳಾಗುತ್ತಿದೆ. ಅಷ್ಟೆ ಅಲ್ಲ ಇವರೊಬ್ಬ ನೀಲಿ ನಟಿ ಹಾಗಾಗಿ ಈ ಸಿನಿಮಾದಲ್ಲಿ ನಟಿಸುವುದು ಉತ್ತಮ ಅಲ್ಲ ಎಂಬ ಅಂಶವನ್ನಿಟ್ಟಕೊಂಡು ಇದೀಗ ಸಿನಿಮಾಗೆ ಅಡ್ಡಿಪಡಿಸಲಾಗಿದೆ.

ಪ್ರತಿಭಟನೆ ಮಾಡುವವರ ವಿರುದ್ಧ ಕ್ರಮ

ಆದರೆ ಈ ಸಿನಿಮಾ ಬಿಡುಗಡೆಗೆ ಪೊಲೀಸರು ಅಭಯ ನೀಡಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಯಾರು ಯಾವ ಸಿನಿಮಾವನ್ನಾದರೂ ಮಾಡಬಹುದು. ಅದನ್ನು ತಡೆಯುವ ಶಕ್ತಿ ಯಾರಲ್ಲೂ ಇಲ್ಲ. ಎಲ್ಲರಿಗೂ ಅವರದ್ದೇ ಆದಂತಹ ಸ್ವತಂತ್ರವಿದೆ. ಹಾಗಾಗಿ ಈ ಸಿನಿಮಾ ಮಾಡುತ್ತಿರುವುದು ತಪ್ಪಿಲ್ಲ ಅಂತಾ ಹೇಳಿದ್ದಾರೆ. ಇನ್ನು, ಈ ಸಿನಿಮಾ ಬಿಡುಗಡೆಗೆ ಅಥವಾ ಪ್ರತಿಭಟನೆಗಳನ್ನೇನಾದರೂ ಮಾಡಿದ್ದಲ್ಲ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಅಂತ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್  ತಿಳಿಸಿದ್ದಾರೆ.

Tags