ಜೀವನ ಶೈಲಿಸೌಂದರ್ಯ

ಮುಖ ದೇಹಾರೋಗ್ಯದ ಕನ್ನಡಿಯಂತೆ !

ದೇಹದ ಮೇಲಾಗುವ ಬದಲಾವಣೆಗಳು ಸುಲಭವಾಗಿ ಗೋತ್ತಾಗುತ್ತದೆ. ಆದರೆ ದೇಹದ ಒಳಗಾಗುವ ಅನಾರೋಗ್ಯಗಳು ನಮ್ಮ ಮುಖದ ಮೂಲಕ ಗೋಚರವಾಗುತ್ತದೆಯಂತೆ. ಹೀಗಾಗಿ ವದನ ಆರೋಗ್ಯದ ಕನ್ನಡಿಯೂ ಹೌದು ಎನ್ನುತ್ತಾರೆ ವೈದ್ಯರು.

ಬಾಯಿ ಒಣಗಿದಂತೆ ಬಾಸವಾದರೆಈ ಸಮಸ್ಯೆ ಉಂಟಾದರೆ ಇದನ್ನು ನಿರ್ಲಕ್ಷಿಸಬೇಡಿ. ಯಾಕೆಂದರೆ ಬಾಯಿಒಣಗುವುದು ವಿಟಮಿನ್ ಬಿ , ಜಿಂಕ್ ಅಥವಾ ಕಬ್ಬಿಣದ ಅಂಶದ ಕೊರತೆಯ ಲಕ್ಷಣಗಳು.

ಇನ್ನೂ ತುಟಿಯ ಒಂದು ಭಾಗ ಒಡೆಯುವುದು.  ದೇಹದಲ್ಲಿ ಅಗತ್ಯ ಪ್ರೋಟಿನ್ ಅಂಶ ಇಲ್ಲದಾಗ ಇಂತಹ ಸಮಸ್ಯೆಗಳು ಉದ್ಭವವಾಗುತ್ತದೆ.

ಕೂದಲು ಉದುರುವಿಕೆ  ವಿಟಮಿನ್  ಬಿ 7 ಮತ್ತು ವಿಟಮಿನ್  ಸಿ ಕೊರತೆಯಿಂದಾಗಿ ಹೆಚ್ಚಾಗಿ ಕೂದಲ ಉದುರುವಿಕೆ ಕಂಡು ಬರುತ್ತದೆ.

ಕೈ ಮತ್ತು ಕಾಲುಗಳು ಬಿಗಿಯಾದ ಅನುಭವ ವಿಟಮಿನ್ ಬಿ ಅಂಶವುಳ್ಳ ಆಹಾರ ಸೇವನೆಯಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಅಷ್ಟೇ ಅಲ್ಲದೆ ವಿಟಮಿನ್  ಬಿ-9,  ಬಿ-6,  ಮತ್ತು ಬಿ-12 ಹೆಚ್ಚು ಪ್ರಮಾಣದಲ್ಲಿ ಸೇವನೆ ಅಗತ್ಯ.

ಸಂಧಿನೋವು  ಕಾಣಿಸಿಕೊಳ್ಳುವುದು ಮ್ಯಾಗ್ನೇಷಿಯಂ, ಕ್ಯಾಲ್ಸಿಯಂ, ಪೋಟಾಷಿಯಂ ಕೊರತೆಯಿಂದ. ಸೂಕ್ತ ಆಹಾರಗಳನ್ನು ಸೇವಿಸುವುದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನಿರ್ಲಕ್ಷಿಸಿದರೆ ಮುಂದೆ ದೊಡ್ಡ ಪ್ರಮಾಣದ ಬೆಲೆ ತೇರಬೇಕಾದಿತು .

Tags

Related Articles

Leave a Reply

Your email address will not be published. Required fields are marked *