18+ಜೀವನ ಶೈಲಿಸಂಬಂಧಗಳು

ಗಂಡ ಹೆಂಡತಿ ಮಲಗುವ ಕೋಣೆ ಹೀಗಿದ್ದರೆ ವೈವಾಹಿಕ ಸಮಸ್ಯೆಗಳು ದೂರವಾಗುತ್ತವೆ…?

ಬೆಂಗಳೂರು, ಅ.12: ವೈವಾಹಿಕ ಜೀವನದಲ್ಲಿ ಏಳುಬೀಳುಗಳು ಸಹಜ. ಆದರೆ, ಅವುಗಳನ್ನು ಹಾಗೆಯೇ ಬಿಡದೆ ಸರಿಪಡಿಸಿಕೊಂಡಾಗಷ್ಟೇ ಸಂಬಂಧಗಳು ಸುಧಾರಿಸುತ್ತವೆ. ಅಹಂ ಪಕ್ಕಕ್ಕಿಟ್ಟು ಸಂಬಂಧಗಳನ್ನು ಸುಧಾರಿಸಿಕೊಳ್ಳುವ ಕಡೆ ಗಮನ ಹರಿಸಿದರೆ ತಪ್ಪದೆ ಒಳ್ಳೆಯದಾಗುತ್ತದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲು ಫೆಂಗ್‌ಷುಯ್ ಸಲಹೆಗಳಿವೆ. ಫೆಂಗ್‍ಷುಯ್ ಪ್ರಕಾರ ಮಲಗುವ ಕೋಣೆಯಲ್ಲಿನ ವಾತಾವರಣ ಮಂಚದ ಸ್ಥಾನವನ್ನು ಅವಲಂಭಿಸಿ ವೈವಾಹಿತ ಜೀವನ ಆಧಾರ ಪಟ್ಟಿರುತ್ತದೆ ಎಂದು ನಂಬುತ್ತಾರೆ. ವೈವಾಹಿಕ ಜೀವನದ ಏಳುಬೀಳುಗಳಿಂದ ಮುಕ್ತಿ ಪಡೆಯಲು ಕೆಲವು ಸಲಹೆಗಳಿವೆ.

* ಫೆಂಗ್‌ಷುಯ್ ಪ್ರಕಾರ ನಿಮ್ಮ ಮಲಗುವ ಕೋಣೆ ಸೂಕ್ತ ಸ್ಥಾನದಲ್ಲಿರಬೇಕು. ಒಂದು ವೇಳೆ ಆ ರೀತಿ ಇಲ್ಲ ಎಂದರೆ ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಹ್ಯಾಂಗ್ ಮಾಡಬೇಕು ಎಂದು ಸೂಚಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕೋಣೆಯ ಹೊರಗೆ ಕ್ರಿಸ್ಟಲ್ಸ್ ಹ್ಯಾಂಗ್ ಮಾಡಿದರೂ ಉತ್ತಮ ಫಲಿತಾಂಶ ಸಿಗುತ್ತದಂತೆ.

* ಹಾಸಿಗೆ ಮೇಲೆ ಹಾಸುವ ಹಚ್ಚಡ ಸಹ ವೈವಾಹಿಕ ಜೀವನದ ಮೇಲೆ ಆಧಾರಪಟ್ಟಿರುತ್ತದೆ ಎಂದು ಫೆಂಗ್‌ಷುಯ್ ಹೇಳುತ್ತದೆ. ಬಿಳಿ ಅಥವಾ ಪ್ರಕಾಶಮಾನವಾದ ಎಲೆಹಸಿರು ಪ್ರೇಮದ ಬಣ್ಣವಾಗಿ ಗುರುತಿಸುತ್ತಾರೆ. ಅಷ್ಟೇ ಅಲ್ಲದೆ ಕೆಂಪು ಬಣ್ಣದ ಹಚ್ಚಡ ಬಳಸಿದರೂ ಒಳ್ಳೆಯ ಫಲಿತಾಂಶ ಸಿಗುತ್ತದೆ.

* ಮಂಚವನ್ನು ಕಿಟಕಿಗಳು ಇರುವ ದಿಕ್ಕಿಗೆ ಹಾಕಿಕೊಳ್ಳಬಾರದು. ಒಂದು ವೇಳೆ ಆ ರೀತಿ ಮಾಡಲು ಸಾಧ್ಯವಾಗದಿದ್ದರೆ ಮಂಚದಿಂದ ಸ್ವಲ್ಪ ದೂರದಲ್ಲಿರಬೇಕೆನ್ನುತ್ತದೆ ಫೆಂಗ್‌ಷುಯ್.

* ಸಾಧ್ಯವಾದಷ್ಟು ಮಟ್ಟಿಗೆ ಮಂಚದ ಕೆಳಗೆ ಯಾವುದೇ ರೀತಿಯ ವಸ್ತುಗಳನ್ನು ಇಡದಿರುವುದೇ ಒಳ್ಳೆಯದು. ಆ ರೀತಿ ವಸ್ತುಗಳನ್ನು ಇಡುವುದರಿಂದ ದಂಪತಿಗಳ ನಡುವೆ ಗಲಾಟೆ ನಡೆಯುವ ಸಾಧ್ಯತೆಗಳಿವೆ.

* ಮಲಗುವ ಕೋಣೆಯಲ್ಲಿ ಟಿವಿ ಅಥವಾ ಕಂಪ್ಯೂಟರ್‌ ಇಲ್ಲದಿರುವುದೇ ಉತ್ತಮ. ಇವುಗಳಿಂದ ನೆಗಟೀವ್ ಎನರ್ಜಿ ಬರುತ್ತದೆಂದು ಫೆಂಗ್‍ಷುಯ್ ಹೇಳುತ್ತದೆ. ಒಂದು ವೇಳೆ ಇದ್ದರೂ ಅವುಗಳಿಗೆ ಕ್ಯಾಬಿನೆಟ್ ತರಹವು ಇರಬೇಕು.

* ಮಲಗುವ ಕೋಣೆಯ ಗೋಡೆಗಳಿಗೆ ತಿಳಿಯಾದ ಬಣ್ಣಗಳನ್ನು ಹಾಕುವುದು ಉತ್ತಮ. ಕಪ್ಪು ಅಥವಾ ಕೆಂಪು ಬಣ್ಣವನ್ನು ಯಾವುದೇ ಕಾರಣಕ್ಕೂ ಹಾಕಬಾರದು.

Tags