ಆರೋಗ್ಯಆಹಾರಜೀವನ ಶೈಲಿ

ತೂಕ ಇಳಿಕೆಗೆ ಸಹಕಾರಿ ಅಡುಗೆ ಮನೆಯ ಪುಟ್ಟ ಬೆಳ್ಳುಳ್ಳಿ!

ತೂಕ ಇಳಿಸುವುದು ಹೇಗೆ ಎಂಬುದೇ ಈಗಿನ ಬಹು ದೊಡ್ಡ ಸಮಸ್ಯೆ ಹೌದು. ತೂಕ ಇಳಿಸುವುದಕ್ಕಾಗಿ ಮುಂಜಾನೆ ವಾಕಿಂಗ್ ಹೋಗಲಾಗಲಿ ಅಥವಾ ಒಂದಷ್ಟು ವ್ಯಾಯಾಮಗಳನ್ನು ಮಾಡುವುದಕ್ಕಾಗಲೀ ನಮ್ಮ ಬಳಿ ಸಮಯವಿಲ್ಲ! ಅದು ಬಿಟ್ಟು ತೂಕ ಇಳಿಸುವಿಸುವುದಕ್ಕಾಗಿ ಒಂದು ಗುಳಿಗೆ ಅಥವಾ ಟಾನಿಕ್ ಮ ಮೊರೆ ಹೋಗುವವರಿಗೆನೂ ಕಡಿಮೆ ಇಲ್ಲ. ಅದು ಕೂಡಾ ತಾವು ನೋಡುವ ನ್ಯೂಸ್ ಪೇಪರ್ ನಲ್ಲೋ, ಟಿವಿಯಲ್ಲಿ ಬಂದಿರುವ ಸಣ್ಣ ಜಾಹೀರಾತನ್ನು ನೋಡಿ! ಆದರೆ ಮುಂದೆ ಅದೇ ನಿಮಗೆ ಮುಳುವಾಗಿ ಕಾಡಬಹುದು, ಎಚ್ಚರಿಕೆ.

Image result for ಬೆಳ್ಳುಳ್ಳಿ

ಅಡುಗೆ ಮನೆಯಲ್ಲಿನ ಪ್ರತಿಯೊಂದು ಆಹಾರ ಪದಾರ್ಥಗಳು ಕೂಡಾ ನಮ್ಮ ಆರೋಗ್ಯ ವೃದ್ಧಿಗೆ ಒಳ್ಳೆಯದೇ! ಅಂತೆಯೇ ಅಡುಗೆ ಮನೆಯ ಪುಟ್ಟ ಆಹಾರ ಪದಾರ್ಥ ಬೆಳ್ಳುಳ್ಳಿಯಿಂದಲೂ ನೀವು ತೂಕ ಇಳಿಸಿಕೊಳ್ಳಬಹುದು.

Image result for ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ6 ಮತ್ತು ಸಿ, ನಾರಿನಂಶ, ಕ್ಯಾಲ್ಸಿಯಂ, ಮ್ಯಾಂಗನೀಸ್,ಸೋಡಿಯಂ, ಕಾರ್ಬೋಹೈಡ್ರೇಟ್, ಪ್ರೊಟೀನ್, ಕಬ್ಬಿಣದಂಶ, ಕೊಬ್ಬಿನಂಶ ಇದೆ. ಇದು ಉತ್ತಮ ಆರೋಗ್ಯ ವೃದ್ದಿಸುವಲ್ಲಿ ಸಹಕಾರಿ. ಬೆಳ್ಳುಳ್ಳಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಪ್ರತಿದಿನ ಬೆಳಗ್ಗೆ 2-3 ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಇಡಬೇಕು. ಹತ್ತು ನಿಮಿಷಗಳ ನಂತರ ಅದನ್ನು ಹಾಗೇ ಇಡಬೇಕು. ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ನಂತರ ಒಂದು ಲೋಟ ಬಿಸಿ ನೀರು ಕುಡಿಯಿರಿ.

ಇದರ ಜೊತೆಗೆ 2-3 ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಇಟ್ಟುಕೊಳ್ಳಬೇಕು. ನಂತರ ಆ ಮಿಶ್ರಣವನ್ನು ಒಂದು ಚಮಚ ಜೇನು ಜತೆ ಮಿಶ್ರ ಮಾಡಿ ಸೇವಿಸಿ. ಇದರಿಂದ ತೂಕ ಇಳಿಯುತ್ತದೆ.

ಹಾಗೆ ಅಂದ ಮಾತ್ರಕ್ಕೆ ಹೆಚ್ಚಾಗಿ ಬೆಳ್ಳುಳ್ಳಿಯನ್ನು ಸೇವಿಸದರೂ ಅಪಾಯ. ದಿನಕ್ಕೆ ಎರಡರಿಂದ ಮೂರು ಬೆಳ್ಳುಳ್ಳಿ ಯಷ್ಟೇ ಸೇವಿಸಿ. ಜಾಸ್ತಿ ಸೇವಿಸಿದರೆ ಒಳ್ಳೆಯದಲ್ಲ.

ಚಂದನವನದಲ್ಲೊಂದು ಹಿತವಚನ…!

#bellulli, #heath, #tips, #balkaninews

Tags