ಆರೋಗ್ಯಆಹಾರಜೀವನ ಶೈಲಿ

ಕರಿಬೇವನ್ನು ನಿತ್ಯ ಸೇವಿಸಿ, ಹತ್ತು ಹಲವು ಉಪಯೋಗ ನಿಮ್ಮದಾಗಿಸಿ

ಕರಿಬೇವಿನ ಸೊಪ್ಪು ಹಾಕದೆ ಮಾಡಿದ ಅಡುಗೆಯ ರುಚಿ ಮತ್ತು ಅಂದ ಎರಡೂ ಕಡಿಮೆನೇ. ಆದ್ರೆ ಹೆಚ್ಚು ಮಂದಿ ಕರಿಬೇವನ್ನು ಬಿಸಾಡಿ ಉಳಿದ ತಿಂಡಿ ತಿನ್ನುವ ರೂಢಿ ಮಾಡಿಕೊಂಡಿರುತ್ತಾರೆ. ಆದರೆ ಇದರಲ್ಲಿ ಹಲವಾರು ಔಷಧೀಯ ಗುಣಗಳು ಇದೆ.

ಕರಿಬೇವಿನಲ್ಲಿ ವಿಟಮಿನ್ ಎ, ಸಿ, ಇ, ಬಿ ಮಾತ್ರ ಅಲ್ಲದೇ ಆ್ಯಂಟಿ ಆಕ್ಸಿಡೆಂಟ್, ಅಮೈನೋ ಆಸಿಡ್, ಕ್ಯಾಲ್ಸಿಯಂ, ಐರನ್‍ ನಂತಹ ಹಲವಾರು ಉತ್ತಮ ಅಂಶಗಳಿವೆ.

ಉಪಯೋಗ:

  1. ಪ್ರತಿದಿನ ಬೆಳಗ್ಗೆ ಹಲ್ಲು ಉಜ್ಜಿ 10-12 ಕರಿಬೇವಿನ ಎಲೆ ಜೊತೆ ಜೀರಿಗೆ ಹಾಕಿ ಅಗಿದು ನುಂಗಿದರೆ ಎಷ್ಟೇ ವಯಸ್ಸಾದರೂ, ಚಿಕ್ಕ ವಯಸ್ಸಿನವರಂತೆ ಕಾಣುತ್ತೇವೆ.
  2. ಕಿಡ್ನಿ ಸ್ಟೋನ್, ಲಿವರ್ ಪ್ರಾಬ್ಲಮ್, ಆಸಿಡಿಟಿ, ಬಿಪಿ, ಶುಗರ್ ಕಂಟ್ರೋಲ್ ಮಾಡುತ್ತದೆ.
  3. ಅಜೀರ್ಣವಾದಾಗ ಮಜ್ಜಿಗೆಯಲ್ಲಿ ಕರಿಬೇವು ಹಾಕಿ ಕುಡಿದರೆ ನಿವಾರಣೆ ಆಗುತ್ತದೆ.
  4. ಕರಿಬೇವನ್ನು ತೆಂಗಿನಎಣ್ಣೆಯಲ್ಲಿ ಹಾಕಿ, ಕುದಿಸಿ, ಆರಿಸಿದ ಮೇಲೆ ಹಚ್ಚುತ್ತಾ ಬಂದರೆ ಕೂದಲು ಉದುರುವ ಮತ್ತು ಬಿಳಿ ಕೂದಲ ಸಮಸ್ಯೆ ನಿವಾರಣೆ ಆಗುತ್ತದೆ.
  5. ಚರ್ಮದ ಮೇಲೆ ಆಗುವ ಯಾವುದೇ ರೀತಿಯ ಉರಿಯೂತ, ನೋವಿಗೆ ಕರಿಬೇವಿನ ಪೇಸ್ಟ್ ಉತ್ತಮ ಮನೆ ಮದ್ದು.

ಇಷ್ಟೆಲ್ಲಾ ಉಪಕಾರಿ ಆಗಿರುವ ಕರಿಬೇವನ್ನು ಬಿಸಾಡದೆ, ದೇಹಕ್ಕೆ ಸೇರಿಸಿ ಆರೋಗ್ಯವಂತರಾಗಿ.

‘ಗ್ರೀನ್ ಟೀ’ ಯಿಂದ ತ್ವಚೆಗಾಗುವ ಲಾಭವೆಷ್ಟು ಗೊತ್ತಾ?

 

#balkaninews #curryleaves #curryleavesbenefits

Tags