ಆರೋಗ್ಯಆಹಾರಜೀವನ ಶೈಲಿ

ದಾಳಿಂಬೆಯಲ್ಲಿದೆ ಆರೋಗ್ಯದ ಗುಟ್ಟು

ಬೆಂಗಳೂರು, ಮಾ.25:

ಸವಿದರೆ ಮತ್ತೊಮ್ಮೆ ಸವಿಯಬೇಕೆಂದ ರುಚಿ, ಕೆಂಪು ಬಣ್ಣದಿಂದ ಮನ ಸೆಳೆಯುವ ದಾಳಿಂಬೆ ಹಲವು ಪೋಷಕಾಂಶಗಳ ಆಗರ. ಅಗಾಧವಾದ ಪ್ರೋಟೀನ್ ಮತ್ತು ವಿಟಮಿನ್ ಗಳಿಂದ ದಾಳಿಂಬೆಯಲ್ಲಿ ಹೆಚ್ಚಿನ ನ್ಯೂಟ್ರೀನ್ ಅಂಶವಿದೆ. ಪೋಮೋಗ್ರನೇಟ್ ಎಂದು ಇಂಗ್ಲೀಷ್ ನಲ್ಲಿ ಕರೆಯಲ್ಪಡುವ ಇದು ಲೀತ್ರೇಸಿ ಕುಟುಂಬಕ್ಕೆ ಸೇರಿದುದಾಗಿದೆ. ಔಷಧಿಯ ಗುಣಗಳನ್ನು ಹೊಂದಿರುವ ದಾಳಿಂಬೆ ಹಿಮೋಗ್ಲೋಬಿನ್ ಅಂಶ ಹೆಚ್ಚಿಸುವಲ್ಲಿ ಸಹಕಾರಿ. ಅಲ್ಲದೇ ಇದರಲ್ಲಿ ವಿಟಮಿನ್ ಸಿ, ಈ, ಪೋಟಾಶಿಯಮ್, ಪಾಸ್ಫರಸ್, ಪ್ರೋಟಿನ್ ಗಳು ಹೇರಳವಾಗಿವೆ.

ಮಕ್ಕಳಲ್ಲಿ ಸಾಮಾನ್ಯವಾಗಿ ಜಂತು ಹುಳುಗಳ ತೊಂದರೆ ಕಾಣಿಸುತ್ತದೆ. ಇದರಿಂದ ಅವರ ದೇಹದಲ್ಲಿರುವ ಪೌಷ್ಟಿಕಾಂಶಗಳು ಕಡಿಮೆಯಾಗುತ್ತದೆ. ದಾಳಿಂಬೆ ತಿನ್ನುವುದರಿಂದ ಜಂತು ಹುಳಗಳು ನಾಶವಾಗುತ್ತದೆ. ಬರೀ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರು ಕೂಡ ಇದನ್ನು ಸೇವಿಸಿದರೆ ಒಳ್ಳೆಯದು. ಯಾಕೆಂದರೆ ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಶರೀರದ ಶಕ್ತಿ ಹೆಚ್ಚಾಗುತ್ತದೆ. ನಿಶ್ಯಕ್ತತೆ, ಕೊಲೆಸ್ಟ್ರಾಲ್, ರಕ್ತದೊತ್ತಡ ಇವೆಲ್ಲವನ್ನು ಕಡಿಮ ಮಾಡುವ ಶಕ್ತಿ ಇದಕ್ಕಿದೆ. ಇದರ ಎಲೆ ಸೇವಿಸುವುದರಿಂದ ಕೆಮ್ಮು ದೂರಾಗುವುದು. ಸುಟ್ಟ ಗಾಯಗಳು ಏನಾದರಿದ್ದರೆ ಇದರ ಎಲೆಯನ್ನು ಜಜ್ಜಿ ಹಚ್ಚಿದರೆ ಗಾಯ ಕಡಿಮೆಯಾಗುತ್ತದೆ.

ಆರ್ಯುವೇದದಲ್ಲಿ ತನ್ನದೇ ಆದ ಸ್ಥಾನಮಾನ ಹೊಂದಿದ ದಾಳಿಂಬೆ ಸೌಂದರ್ಯವರ್ಧಕವೂ ಹೌದು. ಹಲವು ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿರುವ ದಾಳಿಂಬೆಯ ಸಿಪ್ಪೆಯಲ್ಲಿ ಸೌಂದರ್ಯ ವೃದ್ಧಿಸುವ ಶಕ್ತಿ ಇದೆ ಎಂದು ಹಲವರಿಗೆ ತಿಳಿದಿಲ್ಲ. ದಾಳಿಂಬೆ ತಿಂದ ಬಳಿಕ ಅದರ ಸಿಪ್ಪೆಯನ್ನು ಎಸೆದು ಬಿಡುತ್ತಾರೆ. ಆದರೆ ಅದೇ ಸಿಪ್ಪೆಯನ್ನು ನೈಸರ್ಗಿಕ ಸೌಂದರ್ಯವರ್ಧಕವನ್ನಾಗಿ ಉಪಯೋಗಿಸಬಹುದು.

ದಾಳಿಂಬೆ ಸಿಪ್ಪೆಯಿಂದ ಮುಖದಲ್ಲಿ ಮೂಡುವ ಮೊಡವೆಗಳಿಗೆ ಪರಿಹಾರ ಪಡೆಯಬಹುದು. ಇದರಲ್ಲಿ ಅಧಿಕವಾಗಿರುವ ಆಂಟಿ ಆಕ್ಸಿಡೆಂಟ್ ಗಳಿಗೆ ಮೊಡವೆಗಳನ್ನು ಹೊಡೆದೋಡಿಸುವ ಶಕ್ತಿಯಿದೆ. ಸೂರ್ಯನಿಂದ ಬರುವ ಅಪಾಯಕಾರಿ ಯುವಿ ಕಿರಣಗಳನ್ನು ತಡೆಯುವ ಸಾಮರ್ಥ್ಯವಿರುವ ದಾಳಿಂಬೆಯನ್ನು ಸನ್ ಸ್ಕ್ರೀನ್ ಲೋಶನ್ ಆಗಿ ಉಪಯೋಗಿಸಬಹುದು. ಕೂದಲು ಸೊಂಪಾಗಿ ಬೆಳೆಯಲು, ಕೂದಲು ಉದುರುವುದನ್ನು ತಡೆಗಟ್ಟಲು, ತಲೆ ಹೊಟ್ಟಿನ ನಿವಾರಣೆಗೆ ಇದು ಉತ್ತಮ ಮದ್ದು. ಇನ್ನು ಇದರ ಸಿಪ್ಪೆಯನ್ನು ಒಣಗಿಸಿ ಮಜ್ಜಿಗೆಯಲ್ಲಿ ಅರೆದು ಕುಡಿದರೆ ಭೇದಿ ನಿವಾರಣೆಯಾಗುತ್ತದೆ. ದಾಳಿಂಬೆಯ ಕುಡಿಗಳನ್ನು ಅಗಿಯುವುದರಿಂದ ವಸಡಿನಲ್ಲಿ ಆಗುವ ರಕ್ತಸ್ರಾವವನ್ನು ನಿವಾರಿಸಬಹುದು.

ದಾಳಿಂಬೆಯ ಸಿಪ್ಪೆಯಿಂದ ತಯಾರಿಸುವ ತಂಬುಳಿ ಬಾಯಿಗೆ ರುಚಿ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಒಣಗಿಸಿಟ್ಟ ದಾಳಿಂಬೆ ಸಿಪ್ಪೆನ್ನು ತುಪ್ಪದಲ್ಲಿ ಹುರಿಯಬೇಕು. ನಂತರ ಅದನ್ನು ತೆಂಗಿನ ತುರಿಯ ಜೊತೆ ಚೆನ್ನಾಗಿ ರುಬ್ಬಬೇಕು. ನಂತರ ಅಗತ್ಯವಿರುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಡಿ. ಗಮನವಿಟ್ಟುಕೊಳ್ಳಬೇಕಾದ ಅಂಶವೆಂದರೆ ದಾಳಿಂಬೆ ಸಿಪ್ಪೆಯನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಬಳಸಿ. ಇಲ್ಲದಿದ್ದರೆ ಅದು ಒಗರಾಗುತ್ತದೆ.

ಇನ್ನೇಕೆ ತಡ? ದಾಳಿಂಬೆ ಸೇವಿಸಿ, ಆರೋಗ್ಯವಂತರಾಗಿರಿ.

–  ಅನಿತಾ ಬನಾರಿ

ಸ್ಲೀಪಿಂಗ್ ವಿತ್ ಮೇಕಪ್ ಒಂದು ದುರಭ್ಯಾಸ

#pomegranate #pomegranatetips #balkaninews #healthytips #beautytips #benifitsofpomegranate

Tags