ಜೀವನ ಶೈಲಿಸೌಂದರ್ಯ

ಕಣ್ಣಿನ ಸುತ್ತ ಕಪ್ಪು ಕಲೆ ಇದೆಯೇ? ಹಾಗಾದರೆ ಚಿಂತೆ ಬಿಡಿ..

ಕಪ್ಪು ಕಲೆಗಳನ್ನು ಮರೆಮಾಚಲು ಸರಳ ಉಪಾಯ

ಹೆಣ‍್ಣಿಗೆ ಸೌಂದರ್ಯವೇ ಭೂಷಣ. ಪ್ರತಿಯೊಂದು ಹೆಣ‍್ಣು ಕೂಡ ತಾನು ಸುಂದರಳಾಗಿ ಕಾಣಬೇಕು ಎಂದು ಹಲವಾರು ಕಸರತ್ತುಗಳನ್ನು ನಡೆಸುತ್ತಾಳೆ. ಮುಖದಲ್ಲಿ ಮೊಡವೆ ಕಲೆಗಳು ಇರಬಾರದು, ಕಣ‍್ಣಸುತ್ತ ಕಪ್ಪು ಕಲೆ ಇರಬಾರದು…,ಈ ಮುಂತಾದ ಆಶಯಗಳನ್ನು ತಮ್ಮ ಮನಸಿನಲ್ಲೇ ಬೆಳೆಸಿಕೊಳ್ಳುತ್ತಾರೆ. ತಮ್ಮಮುಖದ ಸೌಂದರ್ಯಕ್ಕೆ ಪ್ರಮುಖ ಆದ್ಯತೆಯನ್ನು ನೀಡುತ್ತಾರೆ. ಹೆಚ್ಚಿನ ಮಹಿಳೆಯರು ತಮ್ಮ ಕಣ‍್ಣಿನ ಸುತ್ತಲು ಮೂಡುವ ಕಪ್ಪು ವರ್ತುಲದ ಬಗ್ಗೆ ಚಿಂತೆ ಮಾಡುತ್ತಲೇ ಇರುತ್ತಾರೆ.

ಆನುವಂಶಿಕತೆ, ಅನಾರೋಗ್ಯಕರ ಜೀವನಶೈಲಿ, ಹಾರ್ಮೋನುಗಳ ಬದಲಾವಣೆಗಳು, ಒತ್ತಡ ಅಥವಾ ಋತುಮಾನದ ಬದಲಾವಣೆಗಳಂತಹ ಕಾರಣಗಳಿಂದಾಗಿ ಕಪ್ಪು ಕಲೆ ಕಾಣಿಸಿಕೊಳ‍್ಳಬಹುದು. ಕಣ‍್ಣಿನ ಸುತ್ತ ಕಪ್ಪು ಕಲೆ ಹೊಂದಿರುವ ನೀವು ಮಂದ ಮತಿಗಳಂತೆಯೂ, ಬಾಡಿದ ಮೊಗ ಹೊಂದಿದವರಾಗಿ ದಣಿದಂತೆಯೂ ಕಾಣುವಿರಿ. ನೀವು ಹೊರಹೋದಾಗ, ಕಪ್ಪು ಕಲೆಯ ವಲಯಗಳನ್ನು ಮರೆಮಾಚಲು ಮತ್ತು ನಿಮ್ಮ ಮುಖದ ತಾಜಾತನ ಉಳಿಯುವಂತೆ ಮೇಕಪ್  ಮಾಡಿಕೊಳ್ಳಲು ಪ್ರಯತ್ನಿಸಬಹುದು. ಕಪ್ಪು ಕಲೆಗಳನ್ನು ಮರೆಮಾಚಲು ಕಣ್ಣಿನ ಮೇಕಪ್ ಸುಳುಹುಗಳನ್ನು ಈಗ ನೋಡೋಣ.

ಕಪ್ಪು ವಲಯಗಳನ್ನು ಮರೆಮಾಚಲು ಕಣ್ಣಿನ ಮೇಕಪ್ ಸಲಹೆಗಳು:

  • ಮುಖವನ್ನು ಚೆನ್ನಾಗಿ ತೊಳೆಯಿರಿ. ಕಣ್ಣುಗಳ ಕೆಳಗೆ ಲೋಶನ್ ಹಚ್ಚಿರಿ. ಚರ್ಮದ ತೇವಾಂಶವನ್ನು ಹೀರಿಕೊಳ್ಳಲು ಒಂದು ನಿಮಿಷ ಕಾಯಿರಿ. ಇದು ಸರಾಗವಾಗಿ ಮೇಕಪ್ ಗ್ಲೈಡ್ಗೆ ಸಹಾಯ ಮಾಡುತ್ತದೆ . ಈ ರೀತಿ ಮಾಡಿದಾಗ ಮುಖದ ಸಾಲುಗಳ ಸುಕ್ಕುಗಳನ್ನು ಸಹ ಮರೆಯಾಗುತ್ತವೆ.
  • ನಿಮ್ಮ ಚರ್ಮದ ಬಣ್ಣಕ್ಕೆ ಹೊಂದಿಕೆಯಾಗುವ ಕಂನ್ಸಿಲಿಯರ್ ಖರೀದಿಸಿ ಹಾಗೂ ಅದನ್ನು ಹಚ್ಚಿರಿ. ನಿಮ್ಮ ಚರ್ಮದ ಬಣ್ಣಕ್ಕಿಂತ ಹಗುರವಾದ ಕಂನ್ಸಿಲಿಯರ್ ಛಾಯೆಯ ಖರೀದಿಸುವುದು ಉತ್ತಮ. ಮುಖದ ತ್ವಚೆಯೂ ಹೊಳಪಿಲ್ಲದೆ ಒಣಗಿದಾಗ ಲಿಕ್ವಿಡ್ ಕಂನ್ಸಿಲಿಯರ್ ಹೆಚ್ಚು ಪರಿಣಾಮಕಾರಿ. ನಿಮ್ಮ ಚರ್ಮದೊಂದಿಗೆ  ಸಂಪೂರ್ಣವಾಗಿ ಮಿಶ್ರಣಗೊಳ್ಳುವವರೆಗೆ  ನಿಮ್ಮ ಬೆರಳಿನಲ್ಲಿ ಕಂನ್ಸಿಲಿಯರ್ ಡ್ರಾಪ್ ತೆಗೆದುಕೊಂಡು ಕಣ್ಣಿನ ಒಳಗಿನ ಮೂಲೆಯಿಂದ ಹೊರಗಡೆಗೆ ಹಚ್ಚಿ. ಅತಿಯಾದ ಕಂನ್ಸಿಲಿಯರ್ ಅನ್ನು ಹಚ್ಚಿದಲ್ಲಿ ಅಸಹ್ಯವಾಗಿ ಕಾಣುವ ಸಾಧ್ಯತೆ ಇದೆ.
  • ನಿಮ್ಮ ಮುಖದ ಮೇಲೆ ಸ್ವಲ್ಪ ಫೌಂಡೇಶನ್ ಹಚ್ಚಿ ಕಣ್ಣುಗಳ ಅಡಿ ಭಾಗದಲ್ಲಿ ಹೆಚ್ಚು ಗಮನ ಹರಿಸಿ. ಮಿಶ್ರಣವಾಗುವವರೆಗೂ ಇದನ್ನು ಕಂನ್ಸಿಲಿಯರ್ ನೊಂದಿಗೆ  ವೃತ್ತಾಕಾರದ ಚಲನೆಯಲ್ಲಿ ಅನ್ವಯಿಸಿ.
  • ಮೂಗಿನ ಬದಿಯ ಕಣ‍್ಣುಗಳ ಮೂಲೆಯನ್ನು ಕೂಡಾ ಮುಚ್ಚಿ. ಈ ಕಣ್ಣಿನ ಮೇಕಪ್ ಮಾದರಿಯು ಮತ್ತು ಸ್ಪಷ್ಟ ನೋಟವನ್ನು ಪಡೆಯಲು ಸಹಾಯ ಮಾಡುತ್ತದೆ.
  • Image result for black circle eye
  • ತೆಳುವಾದ ಪೌಡರ್ ಲೇಪನ ಮಾಡಿ ಅಥವಾ ಕಾಂಪ್ಯಾಕ್ಟ್ ಬಳಸಿ. ಇದು ನುಣುಪಾದ ನೋಟವನ್ನು ನೀಡುತ್ತದೆ. ವಿಶೇಷವಾಗಿ ಮೇಕಪ್ ಸಮಯದಲ್ಲಿ ಕಣ್ಣುಗಳ ಅಡಿಯಲ್ಲಿ ಹಾಗೂ ಕೆನ್ನೆಗಳ ಮೇಲೆ ಸ್ವಲ್ಪ ಅನ್ವಯಿಸಿ.
  • ಮೇಕಪ್ನೊಂದಿಗೆ ಕಪ್ಪು ವಲಯಗಳನ್ನು ಮರೆಮಾಚಲು ನೀವು ಕಣ್ಣಿನ ಸೀರಮ್ ಅನ್ನು ಸಹ ಬಳಸಬಹುದು
  • ನಿಮ್ಮ ಕಣ್ಣಿನ ಕೆಳಭಾಗಕ್ಕೆ ಮಸ್ಕರಾ ಹಾಕುವಿಕೆಯನ್ನು ತಪ್ಪಿಸಿ. ಕಪ್ಪು ವಲಯಗಳನ್ನು ಮರೆಮಾಚಲು ಇದು ಕಣ್ಣಿನ ಮೇಕಪ್ ಸುಳುಹುಗಳಲ್ಲಿ ಒಂದಾಗಿದೆ.
  • ಕಣ್ಣಿಗೆ ಹೊಡೆಯುವಂತೆ ಕಾಣುವಂತೆ ಮೇಕಪ್ ಮಾಡಿದಾಗ ಹೆಚ್ಚು ಎಲ್ಲರ ಗಮನವನ್ನು ಸೆಳೆಯುತ್ತದೆ ಹಾಗೂ ಕಣ್ಣುಗಳ ಸುತ್ತಲೂ ಚರ್ಮವನ್ನು ಗಾಢಗೊಳಿಸುತ್ತದೆ.
  • ನೀವು ಕಾಜಲ್ ಅನ್ನು ಅನ್ವಯಿಸಿದಲ್ಲಿ, ದಪ್ಪನೆ ರೇಖೆಯ ಬದಲು ತೆಳುವಾದ ರೇಖೆಯನ್ನು ಎಳೆಯಿರಿ. ಕೆಳಭಾಗದಲ್ಲಿ ರಾಡಿಯಾದಲ್ಲಿ ಕಾಜಲ್ ಮಂದವಾಗಿ ಕಪ್ಪು ವಲಯಗಳನ್ನು ತೋರಿಸುತ್ತದೆ.
  • ತುಂಬಾ ಗಾಢವಾದ ಕಣ್ಣಿನ ಮೇಕಪ್ ತಪ್ಪಿಸಿ. ಕಪ್ಪು ವೃತ್ತಗಳನ್ನು ಮರೆಮಾಚಲು ಅದನ್ನು ತೆಳುವಾಗಿ ಇರಿಸಿ. ಕಪ್ಪು ವಲಯಗಳಿಗೆ ಮರೆಮಾಚಲು ಮತ್ತು ಕಣ್ಣುಗಳನ್ನು ಸುಂದರ ಹಾಗೂ ಆಕರ್ಷವಾಗಿಸಲು ಈ ಮೇಕಪ್ ಸುಳುಹುಗಳನ್ನು ಬಳಸಿ. ಪಾರ್ಟಿ, ಮದುವೆ ಸಮಾರಂಭಗಳಲ್ಲಿ ಸುಂದರವಾಗಿ ಕಂಗೊಳಿಸಿರಿ

 

Tags

Related Articles