18+ಜೀವನ ಶೈಲಿ

ಭಾರತದಲ್ಲಿ 2020ರ ವೇಳೆಗೆ ಕ್ಯಾನ್ಸರ್ ಗೆ 8.8 ಲಕ್ಷ ಮಂದಿ ಬಲಿ..!

50 ವರ್ಷದೊಳಿಗಿನ ಶೇ.46ರಷ್ಟು ಮಹಿಳೆಯರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ

ಬೆಂಗಳೂರು, ಅ. 13: ಭಾರತದಲ್ಲಿ 20-30 ರ ಹರೆಯದ ಶೇ. 20ರಷ್ಟು, 30-40ರ ವಯಸ್ಸಿನ ಶೇ. 16ರಷ್ಟು ಮತ್ತು 40-50ರ ವಯಸ್ಸಿನ ಶೇ.28ರಷ್ಟು ಭಾರತೀಯ ಮಹಿಳೆಯರು ಕ್ಯಾನ್ಸರ್ ಗೆ ಗುರಿಯಾಗುತ್ತಿದ್ದಾರೆ. ಮುಂದಿನ 20 ವರ್ಷಗಳಲ್ಲಿ ಮಹಿಳೆಯರು ಮಾರಕ ಕ್ಯಾನ್ಸರ್ ಗೆ ಒಳಗಾಗುವ ಗಂಡಾಂತರ ಆರು ಪಟ್ಟು ಹೆಚ್ಚಾಗಲಿದೆ ಎಂಬ ಆತಂಕಕಾರಿ ಸಂಗತಿಯನ್ನು ಬ್ರಿಟನ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಬಹಿರಂಗಗೊಳಿಸಿದೆ.

ಸ್ತನ ಕ್ಯಾನ್ಸರ್

ಸ್ತನ ಕ್ಯಾನ್ಸರ್ ಜೊತೆಗೆ, ಅಂಡಾಶಯ, ಗರ್ಭಕೊರಳು, ಮತ್ತು ಬಾಯಿ ಕ್ಯಾನ್ಸರ್ ನಂಥವು ಅತ್ಯಧಿಕವಾಗುವ ಸಾಧ್ಯತೆ ಇದೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ವಿವರಿಸಲಾಗಿದೆ. ಭಾರತದಲ್ಲಿ 2020ರ ವೇಳೆ 17.3 ಲಕ್ಷ ಮಂದಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಾರೆ ಹಾಗೂ 8.8 ಲಕ್ಷ ಮಂದಿ ಕ್ಯಾನ್ಸರ್ ನಿಂದ ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಮುಖ್ಯ ಕಾರಣವಾಗುವ ಸ್ಥೂಲಕಾಯ

ಈ ಪ್ರಮಾಣ ಮುಂದಿನ ಎರಡು ದಶಕಗಳಲ್ಲಿ ಆರು ಪಟ್ಟು ಹೆಚ್ಚಾಗಲಿದೆ. ಧೂಮಪಾನ ಮಾಡುವ ಮಹಿಳೆಯರಲ್ಲೂ ಕ್ಯಾನ್ಸರ್ ಸಾಧ್ಯತೆ ತೀವ್ರ ಪ್ರಮಾಣದಲ್ಲಿ ವೃದ್ದಿಯಾಗಲಿದೆ. ಬೊಜ್ಜು ಮತ್ತು ಸ್ಥೂಲಕಾಯವೇ ಇದಕ್ಕೆ ಮುಖ್ಯ ಕಾರಣ. ಬಹಳಷ್ಟು ಮಹಿಳೆಯರು ಬೊಜ್ಜು ಸಂಬಂಧಿ ಕ್ಯಾನ್ಸರ್ ಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ. ಜೀವನಶೈಲಿ ಮತ್ತು ಆಹಾರ ಪದ್ದತಿ, ಮಿತಿ ಮೀರಿದ ದೇಹ ತೂಕ, ಹಣ್ಣು ಮತ್ತು ತರಕಾರಿಗಳ ಕಡಿಮೆ ಸೇವನೆ, ವ್ಯಾಯಾಮ ಕೊರತೆ, ಧೂಮಪಾನ ಮತ್ತು ಮದ್ಯಪಾನ ಸೇವನೆ ಇದಕ್ಕೆ ಮುಖ್ಯ ಕಾರಣ ಎಂದು ತಿಳಿಸಲಾಗಿದೆ.

ಶೇ . 46 % ಮಹಿಳೆಯರಿಗೆ

ಭಾರತೀಯ ಮಹಿಳೆಯರಿಗೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ. 50 ವರ್ಷದೊಳಿಗಿನ ಶೇ.46ರಷ್ಟು ಮಹಿಳೆಯರು ಕ್ಯಾನ್ಸರ್ ರೋಗದಿಂದ ಬಳತ್ತಿದ್ದಾರೆ ಎಂಬ ಮಾಹಿತಿಯನ್ನು ಭಾರತೀಯ ವೈದ್ಯರು ಹೊರಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಯಸ್ಸಾದ ಮಹಿಳೆಯರಿಗಿಂತ ಹೆಚ್ಚಾಗಿ ತರುಣಿಯರೇ ಹೆಚ್ಚಾಗಿ ಕ್ಯಾನ್ಸರ್ ಗೆ ಗುರಿಯಾಗುತ್ತಿದ್ದಾರೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Tags