ಆರೋಗ್ಯಆಹಾರಜೀವನ ಶೈಲಿ

ಮಜ್ಜಿಗೆ ದಿನನಿತ್ಯ ಬಳಸುವವರ ಪಾಲಿನ ಸಜ್ಜಿಗೆ

ಮಲಗುವ ಮುಂಚೆ ಹಾಲು ಕುಡಿದರೆ, ಬೆಳಿಗ್ಗೆ ಎದ್ದಾಗ ನೀರು ಕುಡಿದರೆ, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿದರೆ ವೈದ್ಯನಿಗೇನು ಕೆಲಸ? ಎಂದು ಆಯುರ್ವೇದ ಹೇಳುತ್ತದೆ.

ಹಾಲು ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಹಾಲಿಗೆ ಹೋಲಿಸಿದರೆ ಮಜ್ಜಿಗೆಯಲ್ಲಿ ಅರ್ಧದಷ್ಟು ಕ್ಯಾಲೋರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬು ಇರುತ್ತದೆ. ಮೊಸರಿನಲ್ಲಿ ಅಧಿಕ ಪ್ರಮಾಣದ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡಿದರೆ ಕ್ಯಾಲೋರಿ ಮತ್ತು ಕೊಬ್ಬು ತೀರ ಕಡಿಮೆ ಇರುತ್ತದೆ.

ಮಜ್ಜಿಗೆಯಲ್ಲಿ ಕಷಾಯ ಮತ್ತು ಆಮ್ಲರಸ ಹೊಂದಿರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ.

Image result for ಮಜ್ಜಿಗೆ

ಅಂತಹ ಅತ್ಯುಪಕಾರಿ ಮಜ್ಜಿಗೆಯ ಮಹಿಮೆ ಇಲ್ಲಿದೆ.

  1. ಆಯುರ್ವೇದ ಚಿಕಿತ್ಸೆಯಲ್ಲಿ ಚರ್ಮ ರೋಗದಿಂದ ಬಳಲುತ್ತಿರುವವರಿಗೆ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆ ಬಳಸಲಾಗುತ್ತದೆ.
  2. ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಖನಿಜಾಂಶ ಅಧಿಕವಿದೆ. ಅನಿಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆಳವಣಿಗೆಗೆ ಬೇಕಾದ ವಿಟಮಿನ್ ಬಿ12 ಹೇರಳವಾಗಿದೆ.
  3. ಮಜ್ಜಿಗೆಯಲ್ಲಿನ ಪೊಟಾಷಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
  4. ಮೂಳೆಗಳಿಗೆ ಅಗತ್ಯ ಶಕ್ತಿಯನ್ನು ಮಜ್ಜಿಗೆಯಲ್ಲಿನ ಕ್ಯಾಲ್ಸಿಯಂ ಮತ್ತು ಪಾಸ್ಪರಸ್ ಅಂಶ ನೀಡುತ್ತದೆ.
  5. ರಕ್ತನಾಳಗಳಲ್ಲಿ ಅಂಟಿರುವ ಕೊಬ್ಬಿನ ಅಂಶವನ್ನು ತೆಗೆಯುತ್ತದೆ.
  6. ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಉರಿ, ಎದೆಉರಿ ನಿವಾರಿಸುತ್ತದೆ.
  7. ಜಠರದ ಹಲವು ಸಮಸ್ಯೆಗೆ ಮಜ್ಜಿಗೆ ರಾಮಬಾಣ. ಬೇಧಿ, ರಕ್ತಬೇಧಿ, ಕರುಳನಲ್ಲಿ ಆಗುವ ವಿಪರೀತ ಒತ್ತಡ ಕಡಿಮೆ ಮಾಡಿ. ಅಗತ್ಯವಿರುವ ನೀರಿನಾಂಶ ಹಾಗೂ ಖನಿಜಾಂಶ ಒದಗಿಸುತ್ತದೆ.
  8. ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದ ಜೊತೆ ಕುಡಿದರೆ ರಕ್ತದೊತ್ತಡ ಮತ್ತು ತಲೆನೋವು ಕಡಿಮೆಯಾಗುತ್ತದೆ.
  9. ಮಜ್ಜಿಗೆಗೆ ಸೈಂಧವ ಲವಣ ಮತ್ತು ಹಸಿಶುಂಠಿ ರಸ ಬೆರೆಸಿ ಕುಡಿದರೆ ವಾಂತಿ ನಿಲ್ಲುತ್ತದೆ.
  10. ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ತಲೆಕೂದಲಿನ ಬುಡಕ್ಕೆ ಹಚ್ಚಿ 2 ಗಂಟೆ ನೆನೆದು, ಸ್ನಾನ ಮಾಡಿದರೆ ತಲೆಹೊಟ್ಟು ಮಾಯವಾಗುತ್ತದೆ.

ಮಜ್ಜಿಗೆಯನ್ನು  ಪ್ರತಿದಿನ ಬಳಸುವ ಮೂಲಕ ಆರೋಗ್ಯಕರ ಜೀವನ ನಿಮ್ಮದಾಗಿಸಿ.

Image result for ಮಜ್ಜಿಗೆ

ಹೂವಂಥ ಉದರಕ್ಕೆ ಅಪ್ಪಳಿಸದಿರಲಿ ಅಪೆಂಡಿಸೈಟಿಸ್!

 

#balkaninews #food #healthytips #advantagesofbuttermilk #buttermilk

Tags