18+ಜೀವನ ಶೈಲಿ

ಹೆಚ್ಚಿನವರು ಕಾರಿನಲ್ಲಿ ಸೆಕ್ಸ್ ಮಾಡಲು ಇಷ್ಟಪಡುತ್ತಾರಂತೆ!

ಇದೊಂದು ರೋಮಾಂಚನ ನೀಡುವ ಕ್ರಿಯೆ

ಹೆಚ್ಚಿನವರು ಕಾರಿನಲ್ಲಿ ಸೆಕ್ಸ್ ಮಾಡಲು ಇಷ್ಟಪಡುತ್ತಾರಂತೆ!

ನಮ್ಮಲ್ಲಿ ಕೆಲವರಿಗೆ ಕಾರಿನಲ್ಲಿ ಲೈಂಗಿಕ ಕ್ರಿಯೆ ಮಾಡಬೇಕೆನ್ನುವ ವಿಚಿತ್ರ ಆಲೋಚನೆ ಇರುತ್ತದೆ. ಕೆಲವರಿಗೆ ಇದನ್ನು ಕೇಳಿದರೆ ಛೀ, ಥೂ ಎನಿಸಬಹುದಾದರೂ, ಕೆಲವರಿಗೆ ಇದು ರೋಮಾಂಚಕಾರಿ ಆಲೋಚನೆಯಾಗಿರುತ್ತದೆ. ಆದರೆ ಕೆಲವರು ಮಾತ್ರ ಈ ಅನುಭವವನ್ನು ಈಗಾಗಲೇ ಪಡೆದಿದ್ದಾರೆ. ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಇತರರಿಗೆ ಗೊತ್ತಾಗುವುದಿಲ್ಲ ಎಂಬ ಅಭಿಪ್ರಾಯ, ಅನುಕೂಲಕರವಾದ ಏಕಾಂತ ಮತ್ತು ಇಕ್ಕಟ್ಟಾದ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸುವ ಸಂತೋಷವನ್ನು ಪಡೆಯಲು ಜನ ಕಾರನ್ನು ಇಷ್ಟಪಡುತ್ತಾರೆ..

ಪ್ರತಿಶತ 80 %

80% ಪುರುಷರು ತಮ್ಮ ಜೊತೆಗೆ ಯಾವುದೇ ಸಂಬಂಧ ಇಲ್ಲದೆ ಒಂದು ರಾತ್ರಿ ಕಳೆಯಲು ಇಷ್ಟಪಡುವ ಮಹಿಳೆಯ ಜೊತೆಗೆ ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸಲು ಇಷ್ಟಪಡುತ್ತಾರಂತೆ. ಕೆಲವರು ತಮ್ಮ ಬಾಳ ಸಂಗಾತಿಯ ಜೊತೆಗೆ ತಮಗೆ ಮೂಡ್ ಇದ್ದಾಗ ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸಲು ಇಷ್ಟಪಡುತ್ತಾರೆ.

ರೋಮಾಂಚನ

ಇನ್ನೂ ಕೆಲವರು ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಸಿಕ್ಕಿ ಬೀಳುವ ಅಪಾಯ ಇರುತ್ತದೆ ಎಂದು ಭಾವಿಸುತ್ತಾರೆ. ಈ ಭಾವನೆಯೇ ಅವರಿಗೆ ಒಂದು ಬಗೆಯ ಥ್ರಿಲ್ ನೀಡುತ್ತದೆ ಮತ್ತು ಲೈಂಗಿಕ ಕ್ರಿಯೆಯನ್ನು ರೋಮಾಂಚಕಾರಿಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ವಿವಾಹೇತರ ಅಥವಾ ಅನೈತಿಕ ಸಂಬಂಧದಲ್ಲಿ ತೊಡಗಿಕೊಂಡವರು ತಮಗೆ ಕಾರಿಗಿಂತ ಸುರಕ್ಷಿತವಾದ ಸ್ಥಳ ಮತ್ತೊಂದು ದೊರೆಯುವುದಿಲ್ಲ ಎಂದು ಹೇಳುತ್ತಾರೆ.

ಆತುರ ಬೇಡ

ಕೆಲವರಿಗೆ ಆತುರ ಹೆಚ್ಚು. ಅವರಿಗೆ ಮೂಡ್ ಬಂದಾಗ ಅವರಿಂದ ತಡೆಯಲು ಆಗುವುದಿಲ್ಲ, ಅವಸರವಾಗಿ ಅವರು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಬಯಸುತ್ತಾರೆ. ಅದಕ್ಕಾಗಿ ಅವರು ಕಾರಿನಲ್ಲಿಯೇ ಲೈಂಗಿಕ ಕ್ರಿಯೆ ನಡೆಸಲು ಇಷ್ಟಪಡುತ್ತಾರೆ. ಸುಮ್ಮನೆ ಕಾರನ್ನು ಒಂದು ನಿರ್ಜನ ಪ್ರದೇಶದತ್ತ ತಿರುಗಿಸಿ, ಅದರೊಳಗೆಯೇ ತಮ್ಮ ಲೈಂಗಿಕ ಕ್ರಿಯೆಯನ್ನು ಮುಗಿಸಿಬಿಡುತ್ತಾರೆ. ಇನ್ನೂ ಕೆಲವರು ಕಾರ್ ಡ್ರೈವ್ ಮಾಡುತ್ತಿರುವಾಗಲೇ ಹಸ್ತಮೈಥುನ ಮಾಡಿಕೊಳ್ಳಲು ಹೋಗುತ್ತಾರೆ. ಇದು ಅತ್ಯಂತ ಅಪಾಯಕಾರಿಯಾದ ಕೆಲಸವಾಗಿದ್ದು, ಡ್ರೈವ್ ಮಾಡುವಾಗ ಹೀಗೆ ಮಾಡುವುದರಿಂದ ಅಪಘಾತಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ!.

ಅಧ್ಯಯನಗಳ ಪ್ರಕಾರ ಹೆಂಗಸರಿಗಿಂತ ಗಂಡಸರು ಕಾರಿನಲ್ಲಿ ಪರಾಕಾಷ್ಠೆಗೆ ತಲುಪುತ್ತಾರಂತೆ. 35% ಮಹಿಳೆಯರು ತಮಗೆ ಕಾರಿನಲ್ಲಿ ಪರಾಕಾಷ್ಠೆ ತಲುಪಿದ ಅನುಭವವಾಗಲಿಲ್ಲ ಎಂದು ಹೇಳಿದ್ದಾರೆ.

Tags