ಜೀವನ ಶೈಲಿಫ್ಯಾಷನ್

ದಿನನಿತ್ಯದ ಸಂಭ್ರಮಕ್ಕೆ ಕ್ಯಾಶುಯಲ್ ವೇರ್

ಹೈಸ್ಕೂಲ್ ಮೆಟ್ಟಿಲಿಳಿದು, ಕಾಲೇಜು ಕ್ಯಾಂಪಸ್ ಸೇರುವ ಈ ಸಮಯ, ಟೀನೆಜರ್ಸ್ ಗೆ ಸಂಕ್ರಮಣ ಕಾಲ. ಬಣ್ಣ ಬಣ್ಣದ ಕನಸುಗಳನ್ನು ಹೊತ್ತು ಕಾಲೇಜಿಗೆ ಬರುವ ತರುಣ-ತರುಣಿಯರಿಗೆ ಓದಿ ಮುಂದೆ ಬರಬೇಕೆಂಬ ಹಂಬಲ ಎಷ್ಟಿರುತ್ತದೆಯೋ, ತಾನು ಫ್ಯಾಷನ್ ಐಕಾನ್ ಆಗಿ ಮೆರೆಯಬೇಕೆಂಬ ತುಡಿತವೂ ಅಷ್ಟೇ ಇರುತ್ತದೆ.

ದಿನ ನಿತ್ಯ ಕಾಲೇಜಿಗೆ ಹೊರಡುವ ಮುನ್ನ ಇಂದು ಯಾವ ಡ್ರೆಸ್, ಶೂ ಹಾಕಿದರೆ ಚೆನ್ನ ಎಂದು ಯೋಚಿಸುತ್ತಲೇ…, ಸೆಲೆಬ್ರಿಟಿಗಳನ್ನು ತಮ್ಮ ರೋಲ್ ಮಾಡೆಲ್ ಗಳನ್ನಾಗಿಟ್ಟುಕೊಂಡರೆ, ಇನ್ನು ಕೆಲವರು ನಾನ್ಯಾಕೆ ಬೇರೆಯವರನ್ನ ಕಾಪಿ ಮಾಡಲಿ ಎಂದು ತಮಗಿಷ್ಟ ಬಂದಂತೆ ಉಡುಪು ಧರಿಸುತ್ತಾರೆ. ಇದೆಲ್ಲ ಸರಿಯೇ, ಆದರೆ ಕಾಲೇಜ್ ನಲ್ಲಿ ಡ್ರೆಸ್ ಕೋಡ್‍ಗಳಿದ್ದಾಗ ತಮಗಿಷ್ಟ ಬಂದ ಹಾಗೆ ಇರಲು ಸಾಧ್ಯವಾಗುವುದಿಲ್ಲ. ಹಾಗಾದರೆ ಸ್ಮಾರ್ಟ್ ಆಂಡ್ ಕ್ಯೂಟ್ ಆಗಲು ಎಂತಹ ಡ್ರೆಸ್ ಬೆಸ್ಟ್? ಇಲ್ಲಿವೆ ನೋಡಿ ಫೇಮಸ್ ಫ್ಯಾಶನ್ ಪ್ರಿಯರು ಹೇಳಿರುವ ಡ್ರೆಸ್…

ಜೀನ್ಸ್

ಜೀನ್ಸ್ ಎಲ್ಲ ಸಂದರ್ಭಗಳಲ್ಲೂ ಉಪಯುಕ್ತ. ಈಗೀಗ ಕಾಮನ್ ಆಗಿರುವ ಜೀನ್ಸ್‍ನಲ್ಲಿ ಡಿಫರೆಂಟ್ ಕೆಟರಿಗಳಿವೆ. ರೆಗ್ಯುಲರ್ ವೇರ್‍ಗೆ ಉತ್ತಮ ಔಟ್‍ಫಿಟ್. ಸರಿಯಾದ ಅಳತೆಯಿರುವ ಜೀನ್ಸನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿ.

ಟ್ಯಾಂಕ್ ಟಾಪ್ಸ್

ನೋಡಲು ಪ್ರೆಟಿಯಾಗಿ ಕಾಣುವ ಟ್ಯಾಂಕ್ ಟಾಪ್ ಗಳು ಸಖತ್ ಕಂಫರ್ಟಬಲ್. ಇದರಲ್ಲಿ ಆದಷ್ಟು ಬ್ರೈಟ್ ಕಲರ್ ಗಳನ್ನು ಆಯ್ಕೆ ಮಾಡಿ. ಜೀನ್ಸ್, ಲೇಯರ್ ಸ್ಕಟ್ರ್ಸ್ ಅಥವಾ ಸ್ಕರ್ಟ್ ಜೊತೆಗೆ ಹಾಕಿದರೆ ಚೆನ್ನಾಗಿರುತ್ತದೆ. ಪ್ರಿಂಟೆಡ್ ಸ್ನೀಕರ್ಸ್ ಮ್ಯಾಚ್ ಆಗುತ್ತದೆ.

ಫ್ಲಿಪ್-ಫ್ಲಾಪ್ಸ್ ಆಂಡ್ ಫ್ಲಾಟ್ಸ್

ಕಂಫರ್ಟಬಲ್ ಮತ್ತು ಕ್ಯೂಟ್ ಆಗಿರುವ ಇದನ್ನು ಬಹಳ ಸುಲಭವಾಗಿ ಮ್ಯಾನೇಜ್ ಮಾಡಬಹುದು. ನಿಮ್ಮ ಬಳಿ ಒಂದು ಜೊತೆಯಾದರೂ ಫ್ಲಿಪ್-ಫ್ಲಾಪ್ಸ್ ಅಥವಾ ಫ್ಲಾಟ್ಸ್ ಇದ್ದರೆ ಒಳಿತು. ಜೀನ್ಸ್, ಸ್ಕರ್ಟ್ಸ್ ಜೊತೆ ಬೆಸ್ಟ್. ಕ್ಯಾಶುಯಲ್ ವೇರ್ ಯಾವುದಾದರೂ ಇದರ ಜೊತೆ ಮ್ಯಾಚ್ ಆಗುತ್ತದೆ.

ನೈಸ್ ಡ್ರೆಸ್

ಅಯ್ಯೋ! ಹೀಗೂ ಒಂದು ಡ್ರೆಸ್ ಉಂಟೆ? ಎಂದುಕೊಳ್ಳಬೇಡಿ. ದೇಹದ ಆಕೃತಿ ಡ್ರೆಸ್ ಧರಿಸುವಾಗ ಬಹಳ ಮುಖ್ಯ. ಆದ್ದರಿಂದ ಹೈಟು, ಪರ್ಸನಾಲಿಟಿಗೆ ಮ್ಯಾಚ್ ಆಗುವುದನ್ನು ಖರೀದಿಸಿ. ಆಗ ಕೊಂಡ ಡ್ರೆಸ್ ಗಳೆಲ್ಲ ನೈಸ್ ಡ್ರೆಸ್ ಆಗುತ್ತವೆ.

ಕ್ಯಾಪ್ರಿಸ್

ಡಿಫರೆಂಟ್ ಫ್ಯಾಬ್ರಿಕ್, ಕಲರ್, ಸ್ಟೈಲ್ ಗಳಲ್ಲಿ ಸಿಗುವ ಕ್ಯಾಪ್ರಿಸ್, ಕ್ರಾಪ್ಡ್ ಪ್ಯಾಂಟ್ ಎಂದೇ ಫೇಮಸ್. ಎಲ್ಲ ಸೈಜ್ ಗಳಲ್ಲಿಯೂ ಲಭ್ಯವಿದೆ.

ಲೆಗಿಂಗ್ಸ್

ಟ್ಯೂನಿಕ್ ಟಾಪ್ಸ್, ಕುರ್ತಾ, ಲಾಂಗ್ ಶಾರ್ಟ್ ಟಾಪ್ಸ್ ಜೊತೆ ಮ್ಯಾಚ್ ಆಗುವ ಲೆಗಿಂಗ್ಸ್ ಎಲ್ಲ ಕಲರ್ ಗಳಲ್ಲಿ, ಪ್ರಿಂಟೆಡ್, ಫ್ಲೋರಲ್ ವರ್ಕ್‍ಗಳಲ್ಲಿ ದೊರೆಯುತ್ತದೆ. ರೆಗ್ಯುಲರ್ ವೇರ್ ಗೂ ಕಂಫರ್ಟಬಲ್.

ಮಿಡಿ ಸ್ಕರ್ಟ್ಸ್

ಫಂಡಮೆಂಟಲ್ ಫ್ಯಾಷನ್ ಎಂದೇ ಹೇಳಲಾಗುವ ಮಿಡಿ ಸ್ಕರ್ಟ್ಸ್ ಎವರ್ ಗ್ರೀನ್.  ಟ್ಯಾಂಕ್ ಟಾಪ್, ಹೀಲ್ಸ್ ಜೊತೆ ಮ್ಯಾಚ್ ಆಗುತ್ತದೆ.

ಬೂಟ್ಸ್

ಬೂಟ್ಸ್ ಆಯ್ಕೆಯಲ್ಲಿ ಸಾಕಷ್ಟು ಹುಷಾರಾಗಿರಬೇಕು. ಸೈಜ್‍ನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನಗೆಪಾಟಲಿಗೆ ಈಡಾಗುತ್ತೀರಿ. ಕಳಪೆ ಗುಣಮಟ್ಟದ ವಸ್ತುಗಳನ್ನು ಖರೀದಿಸಲೇ ಬೇಡಿ. ಬ್ರಾಂಡೆಡ್ ಐಟಮ್‍ಗಳನ್ನೇ ಕೊಳ್ಳಿ.

ಹೈ ಹೀಲ್ಸ್

ಎಲ್ಲ ಹೈ ಹೀಲ್ಸ್ ಗಳೂ ಒಂದೇ ರೀತಿ ಇರುವುದಿಲ್ಲ. ಆದ್ದರಿಂದ ಪಾದಕ್ಕೆ ಒಪ್ಪುವ ಹೈ ಹೀಲ್ಸ್ ಕೊಳ್ಳುವಾಗ ಸ್ವಲ್ಪ ಸಮಯ ವ್ಯಯವಾದರೂ ಪರವಾಗಿಲ್ಲ. ಹೀಲ್ಸ್ ಹಾಕಿ ಐದು ನಿಮಿಷ ವಾಕ್ ಮಾಡಿ. ಕಂಫರ್ಟಬಲ್ ಅನಿಸಿದರೆ ಮಾತ್ರ ಖರೀದಿಸಿ.

ಸನ್ನಿ ಲಿಯೋನ್ ಬಟ್ಟೆ ದರ ಎಷ್ಟು ಗೊತ್ತಾ..?

#balkaninews #casualwear #clothes #lifestyle #fashion

Tags