ಜೀವನ ಶೈಲಿಸಂಬಂಧಗಳು

ಪಟ್ಟಣದ ಹೈ ಫೈ ಲೈಫ್ !! ಹಳ‍್ಳಿಯಲ್ಲಿ ಆದರೆ ಇದು ಸಿಗುತ್ತದೆಯೇ?

ಈಗಾಗಲೇ ನಾವು ಕಂಡಿರುವಂತೆ ನದಿಗಳು ಬತ್ತಿ ಹೋಗಿವೆ . ನೀರಿನ ಕೊರತೆ ದಿನೇ ದಿನೇ ನಾವು ಎದುರಿಸುತ್ತಿದ್ದೇವೆ. ಮೊದಲೆಲ್ಲಾ ಕಾಣಸಿಗುತ್ತಿದ್ದ ಕರೆ ಕಣಿವೆಗಳು ಈಗ ಮುಚ್ಚಿ ಹೋಗಿ ಅಲ್ಲಿ ಅನೇಕ ಕಟ್ಟಡಗಳನ್ನು ಕಾಣುತ್ತಿದ್ದೇವೆ. ಅಷ್ಟೇ ಅಲ್ಲದೆ ಈಗೀಗ ಮಳೆಯೇ ಇಲ್ಲದಂತಾಗಿದೆ. ಅದಕ್ಕೆ ಮೂಲ ಕಾರಣಗಳು ಅರಣ್ಯ ನಾಶ  ಎಂದು ನಮಗೂ ತಿಳಿದಿದೆ. ಮರ ಗಿಡಗಳನ್ನು ಕಡಿಯದೆ ಸರಿಯಾಗಿ ಬೆಳೆಸಿದಲ್ಲಿ ಸರಿಯಾದ ಸಮಯಕ್ಕೆ ಮಳೆಯೂ ಬರುತ್ತದೆ ನದಿ, ಹಾಗೂ ಅಣೆಕಟ್ಟುಗಳೂ ತುಂಬಿ ನೀರಿನ ಸಮಸ್ಯೆ ಇಲ್ಲದಂತಾಗುತ್ತದೆ. ನದಿಗಳನ್ನು ಉಳಿಸಲು ರಿವರ್ ವ್ಯಾಲಿ ಎಂಬ ರಾಲಿ ಕೂಡ ಪ್ರಾರಂಭಿಸಿದ್ದಾರೆ. ಇಷ್ಟಕ್ಕೆಲ್ಲ ಕಾರಣ ಮಾನವನೇ! ಅನೇಕ ಕಾರ್ಖಾನೆಗಳಿಂದ ಹೊರ ಹಾಕುವ ವಿಷವನ್ನು ನದಿಗೆ ಬಿಡುತ್ತಾರೆ, ಜಲ ಮಲೀನಗೊಳ‍್ಳುತ್ತಿದೆ ಮಾನವ ತನ್ನ ಬಯಕೆಗಳನ್ನು ತೀರಿಸಕೊಳ‍್ಳಲು ಏನೂ ಮಾಡಿಯಾನು ಹಾಗೆಯೇ ಮುಂದೊಂದು ದಿನ ತನಗೇ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಅರಿತುಕೊಂಡರೆ ನದಿಗಳನ್ನು ರಕ್ಷಿಸಬಹುದು.
Image result for city life image people india bangalore

ಹಳ‍್ಳಿಯಲ್ಲಿ ಬೇಕಾದ ಸವಲತ್ತುಗಳು ಕೈಗೆಟಕುವಂತೆ ಇಲ್ಲ

ಹೌದು ನಗರ ಜೀವನ ಶೈಲಿಯತ್ತ ವಾಲುತ್ತಿದ್ದೆ ಈಗಾಗಲೇ ಜನರು ವಾಲಿದ್ದಾರೆ. ಕಾರಣ ಅಲ್ಲಿ ಇರುವ ಎಲ್ಲಾ ರೀತೀಯ ಸೌಲಭ್ಯಗಳು ಜನರನ್ನು ಆಕರ್ಷಿಸಿವೆ. ಬೇಕು ಬೇಡಗಳು ಎಲ್ಲವೂ ಕೈಗೆ ಎಟಕುವಂತಿವೆ. ಮಕ್ಕಳಿಗೆ ಶಾಲೆ, ಕೋಚಿಂಗ್ ಕ್ಲಾಸ್, ಇತ್ಯಾದಿ ಚಟುವಟಿಕೆಗಳು ಹಾಗೂ ಮನೆಯವರಿಗೆ ಬೇಕಾದ ಹೈ ಫೈ ಲೈಫ್ . ಹಳ‍್ಳಿಯಲ್ಲಿ ಆದರೆ ಇದು ಸಿಗುತ್ತದೆಯೇ? ಮೂರು ಹೊತ್ತು ಮನೆ ಕೆಲಸ, ಕೈಗೊಂದು ಆಳು ಕಾಳು ಸರಿಯಾಗಿ ಸಿಗುವುದಿಲ್ಲ. ಸಿಕ್ಕರೂ ಅವರ ಸಂಬಳ ಗಗನಕ್ಕೆ ಮುಟ್ಟುವಂತಿವೆ. ಇದರ ಮಧ್ಯೆ ಹಳ‍್ಳಿಯಲ್ಲಿ ಬೇಕಾದ ಸವಲತ್ತುಗಳು ಕೈಗೆಟಕುವಂತೆ ಇಲ್ಲ ಎನ್ನುವುದು ಕೆಲವರ ನಂಬಿಕೆ. ಹಳ‍್ಳಿಯಲ್ಲಾದರೆ ಬೆಳಗ್ಗೆ ಬೇಗ ಎದ್ದು ಹಾಲು ಕರೆಯುವುದು, ಅಡುಗೆ ಮಾಡಬೇಕು ಇತ್ಯಾದಿ. ಪಟ್ಟಣದಲ್ಲಾದರೆ ಇದರ ಯಾವಕೊರತೆಯೂ ಇಲ್ಲ, ಅಡುಗೆ ಮಾಡಿಲ್ಲಾಂದ್ರೂ ಸರಿ ಹೋಟೆಲ್ ಗೆ ಹೋದ್ರೆ ಆಯ್ತು. ಆದರೆ ಇದೆಲ್ಲಾ ತಾತ್ಕಾಲಿಕ ಮಟ್ಟಕ್ಕೆ ಎಂಬ ಕಹಿ ಸತ್ಯ ಹೆಚ್ಚಿನವರಿಗೆ ಇನ್ನೂ ತಿಳಿದಿಲ್ಲ. ಹಳ‍್ಳಿಯಲ್ಲಿ ಸಿಗುವ ಸುಂದರ ಪರಿಸಿರ, ಶುದ್ದ ಗಾಳಿ, ಇವೆಲ್ಲವೂ ನಮ್ಮನ್ನು ಆರೋಗ್ಯದಿಂದ ಕಾಪಾಡುತ್ತದೆ. ಮತ್ತು ಪಟ್ಟಣದಲ್ಲಿ ಇರುವ ಹಾಗೆ ಶಬ್ದ ಮಾಲಿನ್ಯ, ಕಿರಿಕಿರಿ ಇಲ್ಲಿ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಪಟ್ಟಣ ಬೇಡವೇ ಬೇಡ ಎಂದು ಹಳ‍್ಳಿಯತ್ತ ಮುಖ ಮಾಡಲು ಶುರು ಮಾಡಿದ್ದಾರೆ

ಶ್ರೀದೇವಿಯ ನೆಚ್ಚಿನ ಸೀರೆ ಹರಾಜಿಗೆ!!

#balkaninews #sandalwood #villagelife #lifestyle

Tags

Related Articles