ಜೀವನ ಶೈಲಿಸೌಂದರ್ಯ

ಹಾಲಿನಂತ ‘ಕ್ಲಿಯರ್ ಸ್ಕಿನ್’ ನಿಮ್ಮದಾಗಬೇಕೆ? ಇಲ್ಲಿದೆ ನೋಡಿ….

ತಮ್ಮ ತ್ವಚ್ಛೆ ಸುಂದರವಾಗಿ ಫುಲ್ ಕ್ಲೀನ್ ಆಗಿ, ಹಾಲಿನಂತೆ ಚಂದವಾಗಿ ಕಾಣಬೇಕು ಎಂಬುದು ಎಲ್ಲ ಹೆಂಗಳೆಯರ ಮಹದಾಸೆ. ಈ ಆಸೆಗಾಗಿ ಕಂಡದ್ದು, ಕೇಳಿದ್ದು ಎಲ್ಲವನ್ನು ಹಚ್ಚಿ ಮುಖವನ್ನು ಹಾಳು ಮಾಡಿಕೊಳ್ಳುವವರೆ ಹೆಚ್ಚು.

ಆದ್ರೆ ನಿಮಗೆ ಗೊತ್ತ ಮನೆಯಲ್ಲಿನ ಪದಾರ್ಥಗಳನ್ನು ಬಳಸಿಕೊಂಡು ಮುಖದ ತ್ವಚ್ಛೆಯನ್ನು ಹಾಲಿನಂತೆ ಕ್ಲಿಯರ್ ಆಗಿ ಕಾಣುವಂತೆ ಮಾಡಬಹುದು. ಜತೆಗೆ ಮುಖ ಸ್ವಚ್ಛವಾಗಿದ್ದರೆ ಮೊಡವೆ ಮತ್ತು ಇತರೆ ಸಮಸ್ಯೆಗಳು ಬರುವುದಿಲ್ಲ. ಇನ್ನು ಹೊರಗೆ ಓಡಾಡುವವರ ತ್ವಚ್ಛೆ ಮಾಲಿನ್ಯದಿಂದ ಹಾಳಾಗಿರುತ್ತದೆ. ತ್ವಚ್ಛೆಯನ್ನು ಮಾಲಿನ್ಯದಿಂದ ಕಾಪಾಡಿಕೊಳ್ಳಲು ಹೀಗೆ ಮಾಡಿ.ಈ ಟಿಪ್ಸ್ ಅನುಸರಿಸಿ.

  1. ಎರಡು ಚಮಚ ಹಾಲಿಗೆ ಬಾದಾಮಿ ನೆನೆಸಿ ಪೇಸ್ಟ್ ಮಾಡಿ ಕೊಳ್ಳಿ. ನಂತರ ಆ ಪೇಸ್ಟ್‍ ಗೆ ಸ್ವಲ್ಪ ನಿಂಬೆ ರಸ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ 15 ನಿಮಿಷ ಬಿಟ್ಟು ಮುಖವನ್ನು ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
  2. ಹಾಲಿನಲ್ಲಿ ಹತ್ತಿಯನ್ನು ಅದ್ದಿ ಮುಖವನ್ನು ಒರೆಸಿ, ಇದು ಲೇಪನ ಒಣಗಿದ ನಂತರ ಮತ್ತೆ ಮತ್ತೆ ಹಚ್ಚಿ ಮಾಸಾಜ್ ಮಾಡಿ ನಂತರ ನೀರಿನಿಂದ ತೊಳೆಯಿರಿ.
  3. ಸೌತೆಕಾಯಿ ಒಂದು ನೈಸರ್ಗಿಕ ಕ್ಲೆನ್ಸರ್, ಸೋ ಸೌತೆಕಾಯಿ ರಸಕ್ಕೆ ಒಂದು ಚಮಚ ಮೊಸರು ಸೇರಿಸಿ ಮುಖದ ಮೇಲೆ ವೃತ್ತಾಕಾರವಾಗಿ ಮಾಸಾಜ್ ಮಾಡಿ ನಂತರ ನೀರಿನಿಂದ ತೊಳೆಯಿರಿ.
  4. ಇನ್ನು ಟೊಮ್ಯಾಟೋ ತಿರುಳಿಗೆ ಒಂದು ಚಮಚ ಹಾಲು ಮತ್ತು ಒಂದು ಚಮಚ ಕಿತ್ತಳೆ ರಸ ಸೇರಿಸಿ ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ತೊಳೆಯಿರಿ.
  5. 4 ಸ್ಪೋನ್ ಅಲೊವೆರಾ ತಿರುಳಿಗೆ ಒಂದು ಚಮಚ ಪಪ್ಪಾಯ, ಒಂದು ಚಮಚ ಜೇನುತುಪ್ಪ , ಸ್ವಲ್ಪ ಮೊಸರು ಹಾಕಿ ಮಿಕ್ಸಿ ಮಾಡಿ ಕೊಳ್ಳಿ ನಂತರ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ತೊಳೆಯಿರಿ.

ಈ ಎಲ್ಲ ಟಿಪ್ಸ್ ಗಳನ್ನು ಅನುಸರಿಸಿದರೆ ನಿಮ್ಮ ತ್ವಚ್ಛೆ ಬಹಳ ಸುಂದರವಾಗಿ ಕಾಣುವುದಲ್ಲದೆ ಕ್ಲಿಯರ್ ಸ್ಕಿನ್ ಆಗಿ ಒಳೆಯುತ್ತದೆ.

Tags