ಆರೋಗ್ಯಜೀವನ ಶೈಲಿಸೌಂದರ್ಯ

ಕಾಫಿ ಪುಡಿ ಸ್ಕ್ರಬ್ ಕೇಳಿದ್ದೀರಾ..? 

ಸೌಂದರ್ಯ ಯಾವ ಹೆಣ್ಣಿಗೆ ತಾನೇ ಬೇಡ ನೀವೇ ಹೇಳಿ? ಅದರಲ್ಲೂ ಬಹುಮುಖ್ಯವಾಗಿ ತ್ವಚೆಯ ಸೌಂದರ್ಯವರ್ಧನೆಗಾಗಿ ಆಕೆ ಮಾಡದ ಹರ ಸಾಹಸವಲ್ಲ. ಜಾಹೀರಾತಿನಲ್ಲಿ ಬರುವ ದುಬಾರಿ ಕ್ರೀಮುಗಳ ಮೊರೆ ಹೋದದ್ದು ಆಯಿತು, ಇತ್ತ ನಾನಾ ನಮೂನೆಯ ಫೇಶಿಯಲ್ ಎಂದು ಪಾರ್ಲರ್ ನಲ್ಲಿ ಗಂಟೆ ಗಟ್ಟಲೇ ಕುಳಿತದ್ದು ಆಯಿತು. ಆದರೆ ಮನೆಯಲ್ಲೇ ಇರುವ ವಸ್ತುಗಳಿಂದ ತ್ವಚೆಯ ಕಾಂತಿಯನ್ನು ಇಮ್ಮಡಿಗೊಳಿಸಬಹುದು. ಇದರಿಂದ ಕ್ರೀಮುಗಳು ಬೇಕಾಗಿಲ್ಲ, ಜೊತೆಗೆ ಪಾರ್ಲರ್ ನ ಅಗತ್ಯವೂ ಇಲ್ಲ.

ನಿಮ್ಮನ್ನು ಪ್ರತಿದಿನ ಫ್ರೆಶ್ ಆಗಿ ಇರಿಸುವ, ಒಂದು ಗುಟುಕು ಕುಡಿದರೆ ಸಾಕು, ದಿನವಿಡೀ ಉಲ್ಲಾಸದಿಂದ ಇರುವಂತೆ ಕಾಪಾಡುವ ಕಾಫಿ ಪುಡಿಯಿಂದ ನಿಮ್ಮ ತ್ವಚೆಯ ಕಾಂತಿಯನ್ನು ಇಮ್ಮಡಿಗೊಳಿಸಬಹುದು. ಅದು ಹೇಗೆ ಎಂದು ಈಗ ತಿಳಿಯೋಣ

ಎರಡು ಚಮಚ ಕಾಫಿ ಹುಡಿಗೆ ಸ್ವಲ್ಪ ಸಕ್ಕರೆ, ಒಂದು ಚಮಚದಷ್ಟು ಚಕ್ಕೆ ಪುಡಿ ಹಾಕಬೇಕು. ನಂತರ ಅದಕ್ಕೆ ತೆಂಗಿನೆಣ್ಣೆ ಮಿಕ್ಸ್ ಮಾಡಬೇಕು. ಆ ಮಿಶ್ರಣವನ್ನು ಅರ್ಧ ಗಂಟೆಗಳ ಕಾಲ ಹಾಗೆ ಇರಿಸಬೇಕು. ಇನ್ನು ನೀವು ಸ್ನಾನ ಮಾಡುವ ಮೊದಲು ಮೈ ಒದ್ದ ಮಾಡಬೇಕು. ನಂತರ ಈ ಮಿಶ್ರಣವನ್ನು ಹಚ್ಚಿ ಚೆನ್ನಾಗಿ ಸ್ಕ್ರಬ್ ಮಾಡಬೇಕು. ಐದು ನಿಮಿಷ ಹಾಗೇ ಇರಲಿ. ನಂತರ ಸ್ನಾನ ಮಾಡಿ.

ಕಾಫಿ ಪುಡಿಯ ಸ್ಕ್ರಬ್ ಮಾಡುವುದರಿಂದ ಸಣ್ಣ ಪುಟ್ಟ ಗಾಯಗಳಿದ್ದರೆ ಈ ಸ್ಕ್ರಬ್ ನಿಂದ ಆದಷ್ಟು ಬೇಗನೇ ಒಣಗುತ್ತದೆ. ಜೊತೆಗೆ ಇದರಿಂದ ಯಾವುದೇ ತರಹದ ಇನ್ ಫೆಕ್ಷನ್ ಗಳಂತೂ ಆಗುವುದೇ ಇಲ್ಲ.

ಬಹು ಬೇಡಿಕೆ ಇರುವಾಗ್ಲೇ ನಟನೆಯಿಂದ ದೂರ ಉಳಿದ ಅನುಷ್ಕಾ..! ಕಾರಣವೇನು ಗೊತ್ತಾ..?

#coffee, #powder, #scrub, #balkaninews #healthtips

Tags