ಆರೋಗ್ಯಜೀವನ ಶೈಲಿ

ಮಳೆಗಾಲದಲ್ಲಿ ಶುರುವಾಗುವ ನೆಗಡಿ ಕೆಮ್ಮುಗೆ ಮನೆ ಮದ್ದು!!

ಬೇಸಿಗೆ ಕಾಲ ಮುಗಿದಿದ್ದೇ ತಡ ಮಳೆಗಾಲ ಬಂದಾಗಿದೆ .ಚುಮು ಚುಮು ಮಳೆಗೆ ನೆನೆಯಲು ಹೆಚ್ಚಿನವರು ಇಷ್ಟ ಪಡುತ್ತಾರೆ. ಜೋರಾಗಿ ಸುರಿಯುವ ಮಳೆಗೆ ಏನಾದರೂ ಬಿಸಿ ಬಿಸಿ ಕರುಂಕುರುಂ ತಿನ್ನಬೇಕೆಂದು ಅನಿಸುತ್ತಿರ ಬೇಕಲ್ಲವೇ?
ಮಳೆಗಾಲ ಬಂತೆಂದರೆ  ಸಾಕು ಕಾಯಿಲೆಗಳು ಶುರು ಗಾಳಿ ಹಾಗೂ ನೀರಿನಿಂದ ಹೆಚ್ಚಿನ ಕಾಯಿಲೆಗಳು ಹರಡುತ್ತವೆ. ಮಳೆಯಿಂದ ಒಳ‍್ಳೆಯದು ಹಾಗೂ ಕೆಟ್ಟದು ಇದ್ದೇ ಇದೆ ಅದಕ್ಕೆ ನಾವು ಸದಾ  ತಯಾರಿರಬೇಕು. ರಸ್ತೆ ಬದಿ ,ಚರಂಡಿ ಗುಂಡಿಗಳಲ್ಲಿ ಕೊಚ್ಚೆ ನೀರುಗಳು  ಹರಿದು ಹೋಗದೆ ಶೇಕರಣೆಯಾಗಿ  ಆ ನೀರಿನಲ್ಲಿ ಸೊಳ್ಳೆ ,ಸೂಕ್ಷ್ಮ ಜೀವಿಗಳು ಉತ್ಪತಿಯಾಗಿ ಗಾಳಿಯಿಂದ ,ನೀರಿನಿಂದ ಹರಡುವ ಕಾಯಿಲೆಗಳು ಆರಂಭವಾಗುವವು. ಸಾಮಾನ್ಯವಾಗಿ  ಜನರಿಗೆ ಈ ಸಮಯದಲ್ಲಿ ಫ್ಲೂ ಜ್ವರ, ಶೀತ,ಗಂಟಲು ನೋವು ಇತ್ಯಾದಿಯಿಂದ ಪ್ರಮುಖವಾಗಿ ಅಸ್ವಸ್ಥಗೊಳ್ಳುವರು. ಆದರೆ ಜನರಲ್ಲಿ ಹೆಚ್ಚಾಗಿ ಈ ರೋಗಗಳು ವರ್ಷ ಪೂರ್ತಿ ಕಂಡು ಬಂದರೂ ಮಳೆಗಾಲದಲ್ಲಿ ಜಾಸ್ತಿಯೇ ಸರಿ.

Related image
ಸ್ತ್ರೀ ಪುರುಷರೆನ್ನದೆ ಯಾವುದೇ ಋತುಮಾನಗಳಿಗೆ ಅನುಗುಣವಾಗದೆ ಶೀತ ,ಗಂಟಲು ನೋವು ಇತ್ಯಾದಿ ಭಾದಿಸಿದಾಗ ಜನರಿಗೆ ನೋವು ಕಿರಿಕಿರಿ ಇತ್ಯಾದಿ  ತನ್ನ ದಿನ ನಿತ್ಯದ ಚಟುವಟಿಕೆಗಳಿಗೆ ಅಡ್ಡಿಯಾಗುತ್ತವೆ.
ಸಹಜವಾಗಿ ನಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸಾಮಾನ್ಯ ಶೀತ ,ಕೆಮ್ಮು ಗಂಟಲು ನೋವುಗಳನ್ನು ನೀಡುವ ಬ್ಯಾಕ್ಟೀರಿಯಾಗಳು ನಮ್ಮ ರೋಗಕ್ಕೆ ಗುರಿ ಪಡಿಸುತ್ತದೆ.ನಮ್ಮ ಶರೀರದಲ್ಲಿ ರೋಗ ನಿರೋಧಕ ಷಕ್ತಿ ಹೆಚ್ಚಿಸಿ ಕಾಯಿಲೆಗಳಿಂದ ದೂರವಿರಬಹುದು .
ಈ ರೀತಿ  ರೋಗಕ್ಕೆ ಒಳಗಾದಾಗ ವೈದ್ಯರು ರೋಗನಿರೋಧಕ (antibiotics)ಔಷಧಿಗಳನ್ನು ಸೇವಿಸಲು ಶಿಫಾರಸ್ಸು ಮಾಡುತ್ತಾರೆ.ಆದರೆ ನಮಗೆ ಇದರ ವಿರುದ್ಧ ಹೋರಾಡಲು ಮನೆಯಲ್ಲೇ ಸುಲಭವಾಗಿ ಕೆಲವೊಂದು ಔಷಧಿಗಳನ್ನು ತಯಾರಿಹಬಹುದು.

Image result for ayurvedic kashayam
ಬೇಕಾಗುವ ಪದಾರ್ಥಗಳು
ಕಂದು ಸಕ್ಕರೆ – 1 ಟೇಬಲ್ ಸ್ಪೂನ್
ಲವಂಗ – 4 -5
ತುಳಸಿ -5-6
ಅರಿಶಿಣ – 1 ಟೇಬಲ್ ಸ್ಪೂನ್.
ಇವುಗಳನ್ನು ಸರಿಯಾದ ಕ್ರಮಗಳಲ್ಲಿ ಇವುಗಳನ್ನು ಸೇವನೆ ಮಾಡಿದ್ದಲ್ಲಿ ಗಂಟಲು ಕೆರೆತ ,ಶೀತದಿಂದ ದೂರವಿರಬಹುದು.
ಇದರ ಜೊತೆಯಲ್ಲಿ ಕೆಲವೊಂದು ಪಥ್ಯೆಗಳಾದ ಎಣ್ಣೆ ತಿಂಡಿ ತಿನ್ನದೇ ಇರುವುದು ,ಬೆಚ್ಚಗಿನ ಕೋಣೆಯಲ್ಲಿರುವುದು ,ಸುತ್ತ ಮುತ್ತ ಶುಚಿತ್ವ ಕಾಪಾಡುವುದರಿಂದ ಗಂಟಲು ಕೆರೆತ ,ಇತ್ಯಾದಿಯಿಂದ ರಕ್ಷಣೆ ಪಡೆಯಬಹುದು.
ತ್ರೀವ್ರತರವಾಗಿ ನಮಗೆ ಜ್ವರ ,ಗಂಟು ನೋವು ಕಾಣಿಸಿಕೊಂಡಲ್ಲಿ ತಕ್ಷಣ ನಾವು ವೈದ್ಯರನ್ನು ಸಂಪರ್ಕಿಸಿಕೊಳ್ಳಬೇಕು.

ಸಾಮಾನ್ಯವಾಗಿ ನೆಗಡಿ ಗಂಟಲು ಕೆರೆತಕ್ಕೆ  ತುಳಸಿ, ಅರಿಶಿಣ, ಲವಂಗ ಕಂದು ಸಕ್ಕರೆಗಳಲ್ಲಿರುವ ಔಷಧೀಯ ಗುಣಗಳು ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡಲು ಉಪಯುಕ್ತವಾಗಿವೆ.

ಮಾಡುವ ವಿಧಾನ:

ಮೇಲೆ ತಿಳಿಸಿದಂತಹ ಎಲ್ಲಾ ಪದಾರ್ಥಗಳನ್ನು ಕುದಿಸಿ
ಸರಿಯಾಗಿ ಮಿಶ್ರಣ ಮಾಡಿರಿ
ನಂತರ ಅದನ್ನು ಒಂದು ಕಪ್ ಗೆ ಹಾಕಿರಿ
ಬಿಸಿಯಿರುವಾಗಲೇ ಇದನ್ನು ಕುಡಿಯಿರಿ

ಶೀತ ಹಾಗೂ ಗಂಟಲು ಕೆರೆತವಿದ್ದಾಗ ದಿನಕೊಮ್ಮೆ ಒಂದೆರಡು ಬಾರಿ ಸೇವಿಸಿ.

‘ಸಾಹೋ’ ಪೋಸ್ಟ್ ಪೋನ್ ಆಗುವುದು ಈ ಸ್ಟಾರ್ ನಟನಿಗೆ ಮೊದಲೇ ಗೊತ್ತಿತ್ತಂತೆ!?

#coldandflu #homeremidies #health #lifestyle

Tags