ಆರೋಗ್ಯಜೀವನ ಶೈಲಿ

ಕೊತ್ತಂಬರಿ ಸೊಪ್ಪಿನಲ್ಲಿ ಅಡಗಿದೆ ಹಲವಾರು ಗುಣಗಳು

ಕೊತ್ತಂಬರಿ ಸೊಪ್ಪು ಎಂದ ತಕ್ಷಣ ನೆನಪಾಗುವುದು ಆಹಾರಕ್ಕೆ ಪದಾರ್ಥಗಳಿಗೆ ಬಳಸುವುದೆಂದು. ಆಹಾರದ ಮೂಲಕ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ‍್ಳಿಸುತ್ತದೆ. ಆದರೆ ಇದು ಹೆಚ್ಚಿನವರಿಗೆ ತಿಳಿದಿಲ್ಲ ಕೊತ್ತಂಬರಿ ಸೊಪ್ಪು ಬರೀ ಆಹಾರ ಪದಾರ್ಥಗಳಿಗೆ ಮಾತ್ರ ಬಳಕೆಯಾಗುವುದಿಲ್ಲ ಬದಲಾಗಿ ಔಷಧ ತಯಾರಿಸಲು ಅನುಕೂಲ ಕಲ್ಪಿಸಿಕೊಡುವ ಸಸ್ಯಗಳಲ್ಲಿ ಕೊತ್ತಂಬರಿಯ ಪಾತ್ರ ಬಹಳ ಮಹತ್ವದ್ದು.

ವರ್ಷ ಪೂರ್ತಿ ಬೆಳೆಯಬಹುದಾದ ಈ ಗಿಡ ಹೆಚ್ಚು ಔಷಧೀಯ ಗುಣಗಳನ್ನು ಒಳಗೊಂಡಿವೆ. ಇದನ್ನು ಸೌಂದರ್ಯ ವರ್ಧಕ ಉತ್ಪನ್ನಗಳಿಗೆ, ಸಾಬೂನುಗಳ ತಯಾರಿಕೆ, ಟೂತ್ ಪೇಸ್ಟ್‍ಗಳ ಉತ್ಪಾದನೆ ಸೇರಿದಂತೆ ಅನೇಕ ಉತ್ಪನ್ನಗಳ ಉತ್ಪಾದನೆಯಲ್ಲಿ ಉಪಯೋಗಿಸುತ್ತಾರೆ.  ಸರಿಯಾಗಿ ಪೋಷಿಸಿದರೆ ಇದನ್ನು ಮನೆಯ ಹಿತ್ತಲಲ್ಲೇ ಬೆಳೆದು ಅನೇಕ ಲಾಭಗಳನ್ನು ಪಡೆದುಕೊಳ‍್ಳಬಹುದು. ಸಸ್ಯ ಶಾಸ್ತ್ರದ ಪ್ರಕಾರ ಇದು ಎಪಿಯಾಸಿಯಸ್ ವರ್ಗದ ಸಸ್ಯ ಹಾಗೂ ಕ್ಯಾರೆಟ್ ಕುಟುಂಬ ವರ್ಗಕ್ಕೆ ಸೇರಿದ್ದು ಎನ್ನಲಾಗುತ್ತದೆ.

Image result for Coriander leaves
ಕೊತ್ತಂಬರಿ ಮಾರುಕಟ್ಟೆಯಲ್ಲಿ ಧಾರಾಳವಾಗಿ ಕಮ್ಮಿಬೆಲೆಯಲ್ಲಿ ದೊರೆಯುತ್ತದೆ. ಈ ಸಸ್ಯ ಹಚ್ಚ ಹಸಿರು ಬಣ್ಣದಿಂದ ಕೂಡಿರುತ್ತದೆ ಹಾಗೂ ಸಸ್ಯದ ಎಲೆ ಹಾಗೂ ಕಾಂಡಗಳು ಬಹಳ ಮೃದುವಾಗಿರುತ್ತವೆ. ಈ ಸಸ್ಯದ ಪರಿಮಳವು ಹೆಚ್ಚು ಸುಗಂಧ ಭರಿತವಾಗಿರುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ತ್ವಚೆಯ ಆರೋಗ್ಯ ಕಾಪಾಡಲು ಹಾಗೂ ಬೊಜ್ಜು ಕರಗಿಸಲು ಉಪಕಾರಿಯಾಗಿದೆ ಕೊತ್ತಂಬರಿ ಸೊಪ್ಪು ಚರ್ಮ ರೋಗಕ್ಕೆ ರಾಮಬಾಣವಾಗಿದೆ.

ಇದು ಎಸ್ಜಿಮಾ, ಶುಷ್ಕತೆ, ಇಂತಹ ರೊಗಗಳಿಗೆ ಕೊತ್ತಂಬರಿ ಸೊಪ್ಪಿನ ಜ್ಯೂಸ್ ಪ್ರಮುಖ ಕಾರ್ಯ ನಿರ್ವಹಿಸುತ್ತದೆ. ಕೊತ್ತಂಬರಿ ಸಸ್ಯದಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ರಕ್ತದಲ್ಲಿ ಹಿಮಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಹಿಮಗ್ಲೋಬಿನ್ ಅಂಶ ಹೆಚ್ಚಾದ ಹಾಗೆ ರಕ್ತಹೀನತೆಯ ಸಮಸ್ಯೆಯು ಕಡಿಮೆಯಾಗುತ್ತದೆ. ಇದರಲ್ಲಿರುವ ಸಂಯುಕ್ತವು ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಸರಾಗಗೊಳಿಸುತ್ತದೆ. ಜೊತೆಗೆ ರಕ್ತಸಂಚಾರ ಸುಗಮವಾಗಿ ರಕ್ತಹೀನತೆ ದೂರವಾಗುತ್ತದೆ.

ಕೊತ್ತಂಬರಿ ಸೊಪ್ಪಿನ ರಸವನ್ನುನಿಯಮಿತವಾಗಿ ವೈದ್ಯರ ಸಲಹೆಯಂತೆ ಸೇವಿಸುತ್ತಾ ಬಂದರೆ ಜೀರ್ಣಾಂಗವ್ಯೂಹದ ಅನೇಕ ಸಮಸ್ಯೆಗಳು ಗುಣಮುಖವಾಗುತ್ತವೆ. ಇದರ ರಸವು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಜೀರ್ಣಕ್ರಿಯೆಯು ಸುಧಾರಣೆಗೊಳ್ಳುತ್ತದೆ. ಇದು ಅಜೀರ್ಣ ಹಾಗೂ ಉರಿಯೂತದಂತಹ ರೋಗಗಳನ್ನು ತಡೆಯುತ್ತದೆ ಎನ್ನಬಹುದು.

ಈ ಸಸ್ಯದಲ್ಲಿ ಕ್ಯಾಲ್ಸಿಯಂ ಮತ್ತು ಖನಿಜಾಂಶ ಹೆಚ್ಚಾಗಿರುವುದರಿಂದ ಮೂಳೆ ಬೆಳವಣಿಗೆ ಹಾಗೂ ಶಕ್ತಿಯನ್ನು ಹೆಚ್ಚಸಲು ಸಹಾಯಕವಾಗಿದೆ. ಕೊತ್ತಂಬರಿಯಲ್ಲಿ ಅಧಿಕ ಪ್ರಮಾಣದಲ್ಲಿ ಪೊಟ್ಯಾಶಿಯಂ ಇದ್ದು ವಿಶೇಷವಾಗಿ ಕೂದಲ ಉದುರುವಿಕೆಯನ್ನು ತಡೆ ಗಟ್ಟಿ ಕೂದಲ ಬುಡ ಸಡಿಲವಾಗುವುದನ್ನು ತಪ್ಪಿಸುತ್ತದೆ. ಇಷ್ಟೇ ಅಲ್ಲದೆ ಇನ್ನೂ ಅನೇಕ ಉಪಯೋಗಗಳಿವೆ ಈ ಪುಟ್ಟ ಕೊತ್ತಂಬರಿ ಸೊಪ್ಪಿನಲ್ಲಿ. ಆದರೆ ಕೊತ್ತಂಬರಿ ಕೆಲವರಿಗೆ ಅಲರ್ಜಿಯಾಗುವುದರಿಂದ ನಿಮ್ಮ ಆಹಾರಕ್ಕೆ ಅಥವಾ ಆರೋಗ್ಯಕ್ಕೆ ಔಷಧವಾಗಿ ಕೊತ್ತುಂಬರಿ ಬಳಸುವ ಮೊದಲು ವೈದ್ಯರೊಂದಿಗೆ ಮಾತನಾಡಿ ಮತ್ತು ನಿಮ್ಮ ದೇಹಕ್ಕೆ ಪ್ರತಿಕ್ರಿಯೆಯಾಗಿ ಗಮನ ಕೊಡಿ ಹಾಗೂ ಅವರ ಮಾರ್ಗದರ್ಶನದಂತೆ ಅನುಸರಿಸಿ.

ಕನ್ನಡದ ಹಿರಿಯ ನಟಿ ಎಸ್.ಕೆ. ಪದ್ಮಾದೇವಿ ನಿಧನ

#coriander leaves #corianderleavesbenifits

Tags