ಜೀವನ ಶೈಲಿಸೌಂದರ್ಯ

ಸೌಂದರ್ಯ ಇಮ್ಮಡಿಗೊಳಿಸುವ ಮೊಸರಿನ ಫೇಸ್ ಪ್ಯಾಕ್

ಅಡುಗೆ ಮನೆಯಲ್ಲಿ ಇರುವ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿ ಪೇಸ್ ಪ್ಯಾಕ್ ತಯಾರಿಸಲು ಸಾಧ್ಯ ಎಂಬ ವಿಚಾರವನ್ನು ನಾವು ಎಂದೋ ತಿಳಿದಿದ್ದೇವೆ. ಇದೀಗ ನಾವು ದಿನನಿತ್ಯ ಬಳಸುವ ಮೊಸರಿನಿಂದ ಸುಲಭವಾದ ಫೇಸ್ ಪ್ಯಾಕ್ ಬಳಸಿ ಸುಂದರವಾದ ತ್ವಚೆಯನ್ನು ಪಡೆಯಬಹುದು.

ಮೊಸರು ಮತ್ತು ಅರಿಶಿನವನ್ನು ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಬಹುದು. ಒಂದು ಚಮಚ ಅರಿಶಿನವನ್ನು ಎರಡು ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಶುಭ್ರವಾದ ನೀರಿನಿಂದ ಮುಖ ತೊಳೆದು ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಡಿ. ನೈಸರ್ಗಿಕ ಆಂಟಿಸೆಪ್ಟಿಕ್ ಮತ್ತು ಆಂಟಿಬ್ಯಾಕ್ಟೀರಿಯಲ್ ಅಂಶ ಅರಿಶಿನದಲ್ಲಿ ಹೇರಳವಾಗಿದೆ. ಇಂತಿಪ್ಪ ಅರಿಶಿನದಲ್ಲಿ ಮೊಡವೆ ಮತ್ತು ಕಪ್ಪು ಕಲೆಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ.

Image result for curd face pack

ಮೊಸರು ಮತ್ತು ಅರಿಶಿನದ ಜೊತೆಗೆ ಇನ್ನೊಂದು ಫೇಸ್ ಪ್ಯಾಕ್ ಅನ್ನು ಕೂಡಾ ಬಳಸಬಹುದು. ಎರಡು ಚಮಚ ಮೊಸರಿಗೆ ಎರಡು ಚಮಚ ಮುಲ್ತಾನಿ ಮಿಟ್ಟಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷ ಹಾಗೇ ಬಿಡಬೇಕು. ನಂತರ ಚೆನ್ನಾಗಿ ಮುಖವನ್ನು ತೊಳೆಯಿರಿ. ಉತ್ತಮ ಪ್ರಯೋಜನಕ್ಕಾಗಿ ವಾರಕ್ಕೊಮ್ಮೆ ಈ ಫೇಸ್ ಪ್ಯಾಕ್ ಬಳಸಬೇಕು.

ಬಿಗ್ ಬಿ ಭಾವನಾತ್ಮಕ ಪೋಸ್ಟ್, ಬಚ್ಚನ್ ಪುನರ್ಜನ್ಮ ಪಡೆದ ದಿನ.!!

#curd #curdfacepack #lifestyle

 

Tags