ಜೀವನ ಶೈಲಿಫ್ಯಾಷನ್ಸೌಂದರ್ಯ

ಡೈಮಂಡ್ ಲಿಪ್ ಆರ್ಟ್…! ಬರೆದಿದೆ ಗಿನ್ನಿಸ್ ದಾಖಲೆ

ಬೆಂಗಳೂರು, ಜ.16:

ನೈಲ್‍ ಆರ್ಟ್‍, ಹೇರ್ ಆರ್ಟ್‍, ಐ ಆರ್ಟ್‍ ಆಯ್ತು, ಈಗ ಈ ಪಟ್ಟಿಗೆ ಹೊಸ ಸೇರ್ಪಡೆ ಡೈಮಂಡ್‍ ಲಿಪ್‍ ಆರ್ಟ್‍. ಅಯ್ಯೋ ಭಗವಂತಾ ಎನ್ನೇನೆಲ್ಲಾ ಆರ್ಟ್‍ ಗಳನ್ನು ನೋಡಬೇಕಾಪ್ಪಾ ಅಂತ ಅಂದುಕೋಬೇಡಿ. ತುಟಿಗೆ ಬಣ್ಣ ಹಚ್ಚುವ ಹೊಸ ವಿಧಾನವೊಂದು ಫ್ಯಾಷನ್‍ ಜಗತ್ತಿನಲ್ಲಿ ಕಾಲಿಟ್ಟಿದೆ. ಅದೇ ಡೈಮಂಡ್‍ ಲಿಪ್‍ ಆರ್ಟ್‍.

ಆಸ್ಟ್ರೇಲಿಯಾದ ರೋಸೆಸ್‍ಡ್ರಾಪ್ ‍ಎಂಬ ಜ್ಯುವೆಲ್ಲರಿ ಕಂಪನಿ ಡೈಮಂಟ್‍ ಲಿಪ್‍ ತಯಾರಿಸುವ ಮೂಲಕ ‘ಮೋಸ್ಟ್ ವ್ಯಾಲುಯೇಬಲ್‍ ಲಿಪ್ ಆರ್ಟ್‍’ ಎಂಬ ದಾಳಕೆ ಬರೆದಿದೆ. ತನ್ನ 50 ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿ 3.78 ಕೋಟಿ ರೂ. ಮೌಲ್ಯದ 126 ಡೈಮಂಡ್‍ ನಿಂದ ಅಲಂಕಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.ರೋಸರ್ ಡ್ರಾಫ್‍ ಡೈಮಂಡ್‍ ಜ್ಯುವೆಲ್ಲರಿ ಕಂಪನಿ ಆಸ್ಟ್ರೇಲಿಯಾದಲ್ಲಿ ಹೆಸರಾಂತ ಜ್ಯುವೆಲ್ಲರಿ ಕಂಪನಿಗಳಲ್ಲಿ ಒಂದಾಗಿದೆ. ಈ ಕಂಪನಿ 1963ರಲ್ಲಿ ಸ್ಥಾಪನೆಯಾಗಿದ್ದು, ವಿಶೇಷವಾಗಿ ವಜ್ರದ ಆಭರಣಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದೆ. ಅಲ್ಲದೇ, ಡೈಮಂಡ್‍ ಲಿಪ್‍ ಆರ್ಟ್ ಮಾಡುವ ಮೂಲಕ ಜಗತ್ತಿನಾದ್ಯಂತ ಬಹಳಷ್ಟು ಸುದ್ದಿಯಲ್ಲಿದೆ.

ಮೇಕಪ್‍ ಆರ್ಟಿಸ್ಟ್ ಕ್ಲೇರ್ ಮ್ಯಾಕ್‍ ಎಂಬುವರು ಈ ಲಿಪ್‍ ಆರ್ಟ್‍ ಡಿಸೈನ್‍ ಮಾಡಿ. ಮೊದಲು ಮಾಡೆಲ್‍ ತುಟಿಗಳ ಮೇಲೆ ಬ್ಲ್ಯಾಕ್‍ ಲೇಯರ್ ಲಿಪ್‍ ಸ್ಟಿಕ್‍ ಹಾಕಿದ ಬಳಿಕ ಡೈಮಂಡ್‍ ಅಂಟಿಸಿದ್ದಾರೆ.

ಈ ಅತ್ಯಾಕರ್ಷಕ ಅಲಂಕಾರ ಮಾಡಲು ಸುಮಾರು ಎರಡೂವರೆ ಗಂಟೆಗಳ ಶ್ರಮವಿದೆ. 22.92 ಕ್ಯಾರೆಟ್‍ ನ 126 ಡೈಮಂಡ್ ‍ಬಳಸಿ ಲಿಪ್‍ ಆರ್ಟ್‍ ಮಾಡಲಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಸುದ್ದಿಯಲ್ಲಿ ಈ ಲಿಪ್ ಆರ್ಟ್‍ ಕೂಡ  ಸೇರ್ಪಡೆಯಾಗಿದೆ.

#diamond #diamondlipart #lipart #balkaninews

Tags