ಜೀವನ ಶೈಲಿಫ್ಯಾಷನ್ಸೌಂದರ್ಯ

ಮೊಡವೆ ಮತ್ತು ಕಪ್ಪು ಕಲೆ ನಿವಾರಣೆಗೆ ಹೀಗೆ ಮಾಡಿ

ಉಪ್ಪಿನಿಂದ ಮುಖದ ಸೌಂದರ್ಯ ಹೆಚ್ಚುತ್ತದೆ. ಇದು ನಿಮಗೆ ಆಶ್ಚರ್ಯ ಎನಿಸಬಹುದು ಆದರೂ ಇದು ನಿಜ. ಉಪ್ಪು ಚರ್ಮದಲ್ಲಿ ಅಡಗಿರುವ ಧೂಳು ಮತ್ತು ಕೊಳಕನ್ನು ಹೊರತೆಗೆಯುತ್ತದೆ. ಅಲ್ಲದೆ ಕಪ್ಪುಕಲೆಯನ್ನು ಕೂಡ ಓಡಿಸುತ್ತದೆ.

ಮಾಡಬೇಕಾದ್ದು ಇಷ್ಟೆ:

ನಾರ್ಮಲ್ ಸ್ಕಿನ್ ಇರುವವರು: ಮುಖವನ್ನು ತೊಳೆದ ನಂತರ, ಜೇನುತುಪ್ಪದ ಜೊತೆಗೆ ಉಪ್ಪನ್ನು ಸೇರಿಸಿ ಮುಖಕ್ಕೆ ಮಸಾಜ್ ಮಾಡಿ. 10 ನಿಮಿಷದ ನಂತರ ಮುಖ ತೊಳೆಯಿರಿ. ಹೀಗೆ ವಾರಕ್ಕೆ ಎರಡು ಬಾರಿ ಮಾಡಿದರೆ ಉತ್ತಮ ಫಲಿತಾಂಶ ನೋಡಬಹುದು.

ಆಯಿಲೀ ಸ್ಕಿನ್ ಇರುವವರು: ಮುಖದಲ್ಲಿ ಅತೀ ಹೆಚ್ಚು ಮೊಡವೆ ಇದ್ದಲ್ಲಿ 2 ಚಮಚ ನಿಂಬೆರಸದಲ್ಲಿ ½ ಚಮಚ ಉಪ್ಪನ್ನು ಸೇರಿಸಿ ನಿಧಾನವಾಗಿ ಮಸಾಜ್ ಮಾಡಿ. ವಾರಕ್ಕೆ 2 ಬಾರಿ ಮಾಡಿದರೆ ಒಳ್ಳೆಯ ಫಲಿತಾಂಶ ನೋಡಬಹುದು.

ಡ್ರೈ ಸ್ಕಿನ್ ಇರುವವರು: ಮೊದಲು ತಿಳಿ ಹಾಲನ್ನು ಮುಖಕ್ಕೆ ಹಚ್ಚಿ. ಅದು ಒಣಗಿದ ನಂತರ ಉಪ್ಪಿನಿಂದ ನಿಧಾನವಾಗಿ ಮಸಾಜ್ ಮಾಡಿ. ಇವರೂ ಕೂಡ ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ 2 ಬಾರಿ ಹೀಗೆ ಮಾಡುವುದು ಒಳ್ಳೆಯದು. ಒಣಚರ್ಮದ ಆರೋಗ್ಯ ಹೆಚ್ಚಿಸುತ್ತದೆ.

ಈ ವಿಧಾನ ಅನುಸರಿಸಿದರೆ ತ್ವಚೆಯಲ್ಲಿ ಯಾವುದೇ ಸಮಸ್ಯೆಯಾದರೂ ಹೇಳಹೆಸರಿಲ್ಲದ ಹಾಗೆ ಮಾಯವಾಗುತ್ತದೆ.

Image result for how to remove dark spots and pimples from face

ಎಳ್ಳೆಣ್ಣೆ ಮಸಾಜ್ ಮಾಡಿದ್ದೀರಾ?

#balkaninews #beautytips #pimples #pimplesonface

Tags