ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ಚರ್ಮ ಸುಕ್ಕು ಕಟ್ಟಿದೆಯೇ ಚಿಂತೆ ಬಿಡಿ, ಈ ಮನೆ ಮದ್ದುಗಳನ್ನು ಅನುಸರಿಸಿ

ಬೆಂಗಳೂರು, ಫೆ.18:

ಸೌಂದರ್ಯಕ್ಕೆ ಮತ್ತೊಂದು ಹೆಸರೇ ಸ್ತ್ರೀ. ಎಲ್ಲರಲ್ಲೂ ಸಾಮಾನ್ಯವಾಗಿ  ಚರ್ಮ ಸುಕ್ಕುಗಟ್ಟುವಿಕೆ ಹೆಚ್ಚಿನವರನ್ನು ಕಾಡುವ ಸಮಸ್ಯೆಯಾಗಿದೆ. ವಯಸ್ಸು ಹೆಚ್ಚಾದಂತೆ ಚರ್ಮ ಕಳೆಗುಂದಿ ನೆರಿಗೆಗಟ್ಟುವುದು ಸಹಜ. ಆದರೆ ಬಿಸಿಲು, ಮಾಲಿನ್ಯದಿಂದ ಕೂಡಿದ ಗಾಳಿ, ನೀರು, ವಾತಾವರಣ ವ್ಯತ್ಯಾಸ ಇತ್ಯಾದಿ ಕಾರಣಗಳಿಂದಲೂ ಚರ್ಮ ನೆರಿಗೆಗಟ್ಟುತ್ತದೆ. ಕೆಲವರಲ್ಲಿ ಸಹಿಸಲಾರದು ನೋವು ಕಾಣಿಸಿಕೊಳ್ಳುತ್ತದೆ. ಚರ್ಮ ನೆರಿಗೆಗಟ್ಟಿದ್ದನ್ನು ನೋಡಿ, ಜೋತು ಬೀಳುವ ಚರ್ಮವನ್ನು ನೋಡಿ ವಯಸ್ಸಾಯಿತು ಎಂದು ಮೂದಲಿಸಬಹುದು ಎಂಬ ಚಿಂತೆಯೂ ಕಾಡುತ್ತದೆ.

ಸರಳ  ಮನೆ ಮದ್ದುಗಳನ್ನು ಅನುಸರಿಸಿ

ಸಣ್ಣ ಮಂಜುಗಡ್ಡೆಯ ತುಂಡನ್ನು ನೆರಿಗೆಗಟ್ಟಿದ ಭಾಗದ ಮೇಲೆ 5-10 ಸೆಕೆಂಡು ಹದವಾಗಿ ಉಜ್ಜಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿ. ಇದರಿಂದ ಮುಖದ ರಂಧ್ರಗಳ ಗಾತ್ರ ಕಡಿಮೆಯಾಗುತ್ತದೆ. ಮುಖದಲ್ಲಿ ರಕ್ತ ಸಂಚಾರ ಹೆಚ್ಚಾಗಿ ಚರ್ಮ ಕಾಂತಿಯುತವಾಗುತ್ತದೆ.

ಜೇನು ತುಪ್ಪವನ್ನು ಮುಖಕ್ಕೆ ಹಚ್ಚಿ ಮಸಾಜ್‌ ಮಾಡಿ. 15 ನಿಮಿಷಗಳ ನಂತರ ಬಿಸಿ ನೀರಿನಲ್ಲಿ ಮುಖ ತೊಳೆಯಿರಿ. ಜೇನಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದ್ದು, ರಂಧ್ರದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.

ಐದಾರು ಬಾದಾಮಿ ಬೀಜಗಳನ್ನು ಪುಡಿ ಮಾಡಿ, ನಿಂಬೆ ರಸ ಸೇರಿಸಿದ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ. 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ.

ಒಂದು ಟೀ ಚಮಚಕ್ಕೆ ಕೆಲವು ಹನಿ ರೋಸ್‌ ವಾಟರ್‌, ಅಷ್ಟೇ ಪ್ರಮಾಣದ ಸೌತೆಕಾಯಿ ರಸ ಹಾಕಿ ಮಿಶ್ರಣ ಮಾಡಿ. ಹತ್ತಿಯ ಉಂಡೆ ಮೂಲಕ ಸುಕ್ಕುಗಟ್ಟಿದ ಭಾಗದ ಮೇಲೆ ಹಚ್ಚಿ. 15-20 ನಿಮಿಷಗಳ ನಂತರ ಮುಖವನ್ನು ತೊಳೆಯಬೇಕು. ಇದರಿಂದ ರಂಧ್ರದ ಗಾತ್ರ ಕಿರಿದಾಗುತ್ತ ಹೋಗುತ್ತದೆ.

ತಲಾ ಒಂದು ಟೀ ಚಮಚ ಗಂಧ ಮತ್ತು ಅರಿಶಿಣಕ್ಕೆ ಬಾದಾಮಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕುತ್ತಿಗೆಯ ಭಾಗ ಮತ್ತು ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ಮುಖವನ್ನು ತಣ್ಣನೆಯ ನೀರಲ್ಲಿ ತೊಳೆಯಿರಿ.

ಬೆಣ್ಣೆಗೆ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೆರಿಗೆಗಟ್ಟಿದ ಭಾಗದ ಮೇಲೆ ಹಚ್ಚಿ. 20 ನಿಮಿಷದ ನಂತರ ತಣ್ಣಗಿನ ನೀರಲ್ಲಿ ತೊಳೆಯಿರಿ.ಮೊಟ್ಟೆಯ ಬಿಳಿಯ ಭಾಗ, 2 ಆಸ್ಪಿರಿನ್‌ ಮಾತ್ರೆ, 1 ಟೀ ಚಮಚ ಮೊಸರಿನ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ, 20 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಲ್ಲಿ ತೊಳೆಯಿರಿ

ಮನೆಯಲ್ಲಿಯೇ ಸಿರಿಧಾನ್ಯಗಳನ್ನು ಬಳಸಿ ಸುಲಭವಾಗಿ ತಯಾರಿಸಿ ಬರ್ಫಿ

#skinwrinkles #beautytips #balkaninews #healthyfoods #healthytips #skinwrinkleshowtoremove

 

Tags

Related Articles