ಜೀವನ ಶೈಲಿಫ್ಯಾಷನ್ಸಂಬಂಧಗಳು

ಸೀರೆ ಕೊಳ್ಳುವುದಕ್ಕಿಂತ ಬ್ಲೌಸ್ ಹೊಲಿಸುವುದೇ ದುಬಾರಿ…!!!

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಸರಿಹೊಂದುವಂತೆ ಬಗೆ ಬಗೆಯ ಸೀರೆಗಳು ಮಾರುಕಟ್ಟೆಯಲ್ಲಿ ಇವೆ. ಅದರಂತೆ ಸೀರೆಗೆ ಎಷ್ಟು ಬೆಲೆಯೋ , ಅಷ್ಟೇ ಬೆಲೆ ನಾವು ಟೈಲರ್ ಬಳಿ ಹೊಲಿಸುವ ಬ್ಲೌಸ್ ಗೂ ಕೂಡ ದುಬಾರಿ ಎಂದರೇ ನೀವು ನಂಬುತ್ತಿರಾ…?

ಹೌದು, ಇತ್ತೀಚಿನ ದಿನಗಳಲ್ಲಿ ನಾವು 1000ರೂ ಕೊಟ್ಟು ಸೀರೆಯನ್ನು ತೆಗೆದುಕೊಂಡು ಬಂದರೇ, ಬ್ಲೌಸ್ ಗೆ ಡಿಸೈನ್, ಹ್ಯಾಂಡ್ ವರ್ಕ್, ಬುಟ್ಟ, ಟೈ ಹೀಗೆ ಒಂದೊಂದಕ್ಕೂ ಸಹ 1500  ಯಿಂದ 2000 ರೂ ವರೆಗೆ ಬ್ಲೌಸ್ ಹೊಲಿಸಲು ಖರ್ಚಾಗುತ್ತದೆ. ಇಷ್ಟೇ ಅಲ್ಲದೇ ಒಂದೊಂದು ಡಿಸೈನ್ ಗೂ ಕೂಡ ಸಾವಿರಕ್ಕೂ ಹೆಚ್ಚು ಹಣವನ್ನು ವ್ಯಯಿಸಬೇಕಾಗಿದೆ.

Image result for blouse designs

ನಿಮ್ಮ ಇಷ್ಟದ ಕೆಲವೊಂದು ಬ್ಲೌಸ್ ಗಳ  ಡಿಸೈನ್ಸ್ ಗಳು ಇಲ್ಲಿವೆ ನೋಡಿ

  1. ಸಿಂಪಲ್ ಬ್ಲೌಸ್ ನೆಕ್
  2. ಹೈ ನೆಕ್ ಬ್ಲೌಸ್ ಡಿಸೈನ್
  3. ಟ್ರೆಂಡಿ ಬೋಟ್ ನೆಕ್ ಬ್ಲೌಸ್ ಡಿಸೈನ್
  4. ಮಿರರ್ ವರ್ಕ ಡಿಸೈನ್ಸ್
  5. ರೌಂಡ್ ನೆಕ್ ಬ್ಲೌಸ್
  6. ಸೈಡ್ ಟೈ ಅಪ್ ಬ್ಲೌಸ್
  7. ಪಫ್ ಸ್ಲೀವ್ ಬ್ಲೌಸ್
  8. ಬ್ಲೆಟ್ ಬ್ಲೌಸ್ ಡಿಸೈನ್
  9. ಡೀಪ್ ವಿ ನೆಕ್ ಬ್ಲೌಸ್
  10. ಸ್ವೀಟ್ ಹಾರ್ಟ್ ನೆಕ್ ಬ್ಲೌಸ್ ಡಿಸೈನ್Related image

ಹೀಗೆ ನಾವು ಹೇಳುತ್ತಾ ಹೋದರೆ ಡಿಸೈನ್ ಗಳ ಸುರಿಮಳೆಯೇ ಇರಲಿದೆ. ಅದರಂತೆ ಬಗೆ ಬಗೆಯ ಬ್ಲೌಸ್ ಡಿಸೈನ್ ಗಳು ಬಂದಿದ್ದು, ಟೈಲರ್ ಗಳಿಗಂತೂ ಬಹಳ ಬೇಡಿಕೆಯುಂಟಾಗಿದೆ. ಮದುವೆ ಮುಂಜಿ ಶುಭ ಸಮಾರಂಭಗಳಲ್ಲಂತೂ ಹೆಣ್ಣು ಮಕ್ಕಳು ಧರಿಸುವ ಬ್ಲೌಸ್ ಗಳನ್ನು ಒಮ್ಮೆ ನೀವು ಗಮನಿಸಿದರೆ ನಿಮಗೆ ತಿಳಿಯುತ್ತದೆ. ಕೆಲವರಂತೂ ಬ್ಲೌಸ್ ನ ಹಿಂದೆಯಲ್ಲಿ ದೇವಸ್ಥಾನವನ್ನೇ ನಿರ್ಮಾಣ ಮಾಡಿರುತ್ತಾರೆ. ಅಷ್ಟರ ಮಟ್ಟಿಗೆ ಬ್ಲೌಸ್ ಹ್ಯಾಂಡ್ ವರ್ಕ್ ತುಂಬಾ ದುಬಾರಿಯಾಗಿರುತ್ತವೆ.

Image result for blouse designsಕೆಲವೊಮ್ಮೆ ಹೆಣ್ಣು ಮಕ್ಕಳು ಈ ಬ್ಲೌಸ್ ಹಾಗೂ ಸೀರೆಯ ಸಹವಾಸ ಬೇಡವೇ ಬೇಡ ಎಂದುಕೊಂಡರೂ ಸಹ ಅವರ ಮನಸ್ಸು ಸುಮ್ಮನಿರುವುದಿಲ್ಲ. ಹೆಣ್ಣು ಮಕ್ಕಳು ಸೀರೆಯನ್ನು ಧರಿಸುವಾಗ ಕಾಣುವ ಅವರ ಅಂದ ಯಾವುದೇ ಬಟ್ಟೆಗಳನ್ನು ಧರಿಸಿದರೂ ಕಾಣುವುದಿಲ್ಲ. ಅದರ ಸಲುವಾಗಿ ಮನೆಯಲ್ಲಿ ಎಷ್ಟೇ ಸೀರೆಗಳಿದ್ದರೂ ಇನ್ನೂ ಬೇಕು ಎನ್ನುವ ಬಯಕೆ ಅವರಿಗಿರುತ್ತದೆ. ಅದಕ್ಕೆ ಅನಿಸುತ್ತದೆ ನಮ್ಮ ಕಿಚ್ಚ ಸುದೀಪ್ ರವರು ‘ರನ್ನ’ ಸಿನಿಮಾದಲ್ಲಿ ‘ಸೀರೆಲಿ ಹುಡುಗಿಯರ ನೋಡಬಾರದೇ…’ಎಂದಿರುವುದು.

Image result for blouse designs

ಭಾರತದ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬ್ಯೂಟಿ ಸಿಕ್ರೇಟ್ ಇಲ್ಲಿದೆ ನೋಡಿ…

#blouse #balkaninewskannada #beauty #blousedesigns

Tags