ಆರೋಗ್ಯಆಹಾರಜೀವನ ಶೈಲಿ

ಈ ಬಾರಿಯ ದೀಪಾವಳಿಗೆ ಸುಲಭವಾಗಿ ಮಾಡಬಹುದಾದ ವಿಶೇಷವಾದ ತಿನಿಸು, ಒಮ್ಮೆ ಟ್ರೈ ಮಾಡಿ ನೋಡಿ

ಬಹುಉಪಯುಕ್ತ ಡ್ರ್ಯಾಗನ್ ಹಣ‍್ಣು

ಬೆಂಗಳೂರು, ನ.08: ಹೌದು, ಈ ದೀಪಾವಳಿಯನ್ನು ನೀವು ಮನೆಯಲ್ಲಿ ಸುಲಭ ಹಾಗೂ ಕಡಿಮೆ ಸಮಯದಲ್ಲಿ ಮುಖ್ಯವಾಗಿ ಮಕ್ಕಳಿಗೆ ಹಾಗೂ ಎಲ್ಲಾ ವಯೋಮಾನದವರಿಗೂ ಇಷ್ಟವಾಗುವ ‘ಡ್ರ್ಯಾಗನ್ ಬೈಟ್ಸ್’ ಸಿಹಿ ತಿನಿಸು ಮಾಡಿ. ವಿಶೇಷವಾಗಿ ಆಚರಿಸಿ. ಈ ಸಿಹಿ ಮಕ್ಕಳಿಗೆ ಹಾಗೂ ಎಲ್ಲರಿಗೂ ತಿನ್ನಲು ಸ್ವಾದಿಷ್ಟ ಹಾಗೂ ಅಷ್ಟೇ ಆರೋಗ್ಯ ಕೂಡ.

ಈ ಸಿಹಿ ತಿನಿಸು ಮಾಡಲು ಬೇಕಾಗುವ ಪದಾರ್ಥಗಳು

ಕಾರ್ನ್ ಫ್ಲೋರ್ – 1 ಕಪ್

ಪುಡಿ ಮಾಡಿದ ಸಕ್ಕರೆ – 1 ಕಪ್

ಹಾಲು – 250 ಮಿಲಿ

ತೆಂಗಿನಕಾಯಿ – ಅರ್ಧ ಕಪ್

ವಿಪ್ಪಿಂಗ್ ಕ್ರೀಮ್ – 2 ಚಮಚ

ಡ್ರ್ಯಾಗನ್ ಹಣ್ಣು – 1 ಅಥವಾ 2ತಯಾರಿಸುವ ವಿಧಾನ

ಮೊದಲಿಗೆ ಒಂದು ಪಾನ್ ನಲ್ಲಿ ಕಾರ್ನ್ ಫ್ಲೋರ್ , ಪುಡಿ ಮಾಡಿದ ಸಕ್ಕರೆ, ಹಾಲು , ತೆಂಗಿನ ಹಾಲು ಮತ್ತು ವಿಪ್ಪಿಂಗ್ ಕ್ರೀಮ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ, ಕಡಿಮೆ ಉರಿಯಲ್ಲಿ ಈ ಮಿಶ್ರಣವನ್ನು ಕುದಿ ಬರುವವರೆಗೂ ಬೆರೆಸಿ. ಸ್ವಲ್ಪ ಸಮಯದ ನಂತರ ರುಬ್ಬಿದ ಡ್ರ್ಯಾಗನ್ ಹಣ್ಣನ್ನು ಮಿಶ್ರಣಕ್ಕೆ ಬೆರೆಸಿ ತಿರುಗಿಸಬೇಕು. ಸ್ವಲ್ಪ ಸಮಯಗಳ ಕಾಲ ಕುದಿಸಿ, ತದನಂತರ ಆ ಮಿಶ್ರಣವನ್ನು ಒಂದು ಬಾಕ್ಸ್ ನಲ್ಲಿ ಹಾಕಿ ಫ್ರೀಜರ್ ನಲ್ಲಿ ಅರ್ಧ ಗಂಟೆಗಳ ಇಟ್ಟು ನಂತರ ಅದನ್ನು ಕ್ಯೂಬ್ ಆಕಾರದಲ್ಲಿ ಕತ್ತರಿಸಿ, ಸ್ವಲ್ಪ ಸಮಯದ ನಂತರ ಸ್ವಾದಿಷ್ಟವಾದ ಡ್ರ್ಯಾಗನ್ ಬೈಟ್ಸ್ ತಿನಿಸು ತಿನ್ನಲು ರೆಡಿ.

Tags