ಆರೋಗ್ಯಆಹಾರಜೀವನ ಶೈಲಿ

ಬಾದಾಮ್ ಹಾಲಿನ ಪೇಯ ಕುಡಿದು ಶಕ್ತಿವಂತರಾಗಿ

ಬೆಂಗಳೂರು, ಫೆ.18:

ಸಸ್ಯಾಹಾರಿಗಳಲ್ಲಿ ದೇಹದ ಆರೋಗ್ಯ ಸದೃಢವಾಗಿರಿಸಲು ಹಸುವಿನ ಉತ್ಪನ್ನಗಳು ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಹಾಲು ದೈನಂದಿನ ಜೀವನದಲ್ಲಿ ದೇಹಕ್ಕೆ ಅತ್ಯುತ್ತಮ ಪ್ರೊಟೀನ್‌ ಹಾಗೂ ಪೋಷಕಾಂಶಗಳನ್ನು ಒದಗಿಸುತ್ತದೆ.

ದಿನ ನಿತ್ಯದ ಆಹಾರ ಬಳಕೆಯಲ್ಲಿ ಹಾಲು ಬಳಕೆ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯುವುದರ ಜೊತೆಗೆ            ಆರೋಗ್ಯವಾಗಿ ಇರಲೂ ಸಹಕಾರಿ.

ಹಾಲು, ಮೊಸರು, ತುಪ್ಪ ಸೇರಿದಂತೆ ಇನ್ನಿತರ ಉತ್ಪನ್ನಗಳು ದೇಹದಲ್ಲಿನ ಕೆಟ್ಟ ಕೊಬ್ಬನ್ನೂ ನಿಯಂತ್ರಿಸಲು ಅನುಕೂಲವಾಗುತ್ತದೆ.

ಅದರಂತೆಯೇ ಬಾದಾಮ್‌ ಹಾಲೂ ಸಹ ಇದಕ್ಕೆ ಸರಿ ಸಮನಾದ ಪೋಷಕಾಂಶಗಳನ್ನು ಒದಗಿಸುತ್ತದೆ

ಬಾದಾಮ್‌ ನಿಂದ ಆಗುವ ಪ್ರಯೋಜನಗಳು  ಹೀಗಿದೆ.

. 1.ಕಡಿಮೆ ಕ್ಯಾಲೊರಿ :ಬಾದಾಮ್‌ ಹಾಲಿನಲ್ಲಿ ಕಡಿಮೆ ಕ್ಯಾಲೊರಿ ಇರುವುದು ಧನಾತ್ಮಕ ಅಂಶ. ಸ್ಥೂಲ ಕಾಯದಿಂದ ಮುಕ್ತಿಹೊಂದಲು ಡಯಟ್‌ ಮಾಡುತ್ತಿರುವವರಿಗೆ ಬಾದಾಮ್‌ ಹಾಲು ಸೇವನೆಯಿಂದ ಹೆಚ್ಚಿನ ಅನುಕೂಲತೆ ಸಾಧ್ಯ. ಒಂದು ಗ್ಲಾಸ್‌ ಹಸುವಿನ ಹಾಲಿನಲ್ಲಿ 146 ಕ್ಯಾಲೋರಿಗಳಿದ್ದರೆ, ಬಾದಾಮ್‌ ಹಾಲಿನಲ್ಲಿ ಕೇವಲ 30-40 ಕ್ಯಾಲೋರಿಗಳಿರುತ್ತದೆ.

2.ಸಿಹಿ ಅಂಶವೂ ಕಡಿಮೆ : ಒಂದು ಲೋಟದಷ್ಟು ಬಾದಾಮ್‌ ಹಾಲಿನಲ್ಲಿರುವ ಸಕ್ಕರೆ ಅಂಶ ಕೇವಲ 1-2 ಗ್ರಾಂ ಮಾತ್ರ. ಇದರಿಂದ ದೇಹಕ್ಕೆ ಸಕ್ಕರೆ ಅಂಶದಲ್ಲಿ ಹೆಚ್ಚಿನ ಏರುಪೇರು ಉಂಟಾಗುವುದಿಲ್ಲ.

3.ಪೋಷಕಾಂಶಯುಕ್ತ ಆಹಾರ :ಬಾದಾಮಿಯಲ್ಲಿ ಕ್ಯಾಲ್ಸಿಯಂ, ಪೊಟ್ಯಾಷಿಯಂ, ವಿಟಮಿನ್‌ ಇ ಹಾಗೂ ವಿಟಮಿನ್‌ ಡಿ ಸೇರಿದಂತೆ ಇನ್ನಿತರ ಪೋಷಕಾಂಶಗಳನ್ನು ಹೊಂದಿದೆ. ದೇಹದ ತೂಕ ಹೆಚ್ಚಳ ಆಗುವಂತಹ ಅಥವಾ ಕೆಟ್ಟ ಕೊಬ್ಬು ಹೆಚ್ಚಾಗುವಂತಹ ಯಾವುದೇ ಅಂಶಗಳು ಬಾದಾಮಿಯಲ್ಲಿ ಇರುವುದಿಲ್ಲ. ಹೀಗಾಗಿ ತೂಕ ಇಳಿಸಿಕೊಳ್ಳಲು ಇಚ್ಚಿಸುವವರು ಬಾದಾಮಿ ಹಾಲಿನ ಪ್ರಯೋಜನ ಅಗತ್ಯವಾಗಿ ಪಡೆಯಬಹುದು.

ಈ ಎಲ್ಲ ಮಾಹಿತಿಗಳು ಸಾಮಾನ್ಯಜ್ಞಾನದ ಅಂಶಗಳೇ ಹೊರತು ಯಾವುದೇ ತಜ್ಞರ ಅಭಿಪ್ರಾಯಗಳನ್ನು ಒಳಗೊಂಡಿಲ್ಲ. ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ನಿಮ್ಮ ವೈದ್ಯರ ಸಲಹೆಯನ್ನೂ ಪಾಲಿಸುವುದು ಸೂಕ್ತವಾಗಿರುತ್ತದೆ.

ಹಬ್ಬ ಬಂತು, ಯಾವ ಸೀರೆ ಉಟ್ಟರೆ ಚೆನ್ನ??

#badammilk #badammilpowder #balkaninews #almond #almondadvantages #healthytips

Tags

Related Articles