ಆರೋಗ್ಯಆಹಾರಜೀವನ ಶೈಲಿ

ಸರ್ವರೋಗ ನಿವಾರಕ ನುಗ್ಗೆ ಸೊಪ್ಪು

ಅಧಿಕ ಪ್ರಮಾಣದ ನಾರಿನಾಂಶಗಳನ್ನು ಒಳಗೊಂಡ, ರುಚಿಕರವಾದ ನುಗ್ಗೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಹೇರಳವಾದ ಆಂಟಿ ಆಕ್ಸಿಡೆಂಟುಗಳೂ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ ನುಗ್ಗೆಸೊಪ್ಪು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುತ್ತದೆ. ಮಾತ್ರವಲ್ಲ ಅಧಿಕ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ್ದು. ಯಾಕೆಂದರೆ ಇದರಲ್ಲಿ ಸಕ್ಕರೆಯ ಅಂಶ ಇಲ್ಲದ ಕಾರಣ ಮಧುಮೇಹಿಗಳು ನಿಶ್ಚಿಂತೆಯಿಂದ ಇದನ್ನು ಸೇವಿಸಬಹುದು. ಅಲ್ಲದೇ ಮಧುಮೇಹ ಇರುವವರು ಸ್ವಲ್ಪ ಪ್ರಮಾಣದಲ್ಲಿ ನುಗ್ಗೆ ಸೊಪ್ಪು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು.

ನುಗ್ಗೆ ಸೊಪ್ಪಿನ ಮುಖ್ಯವಾದ ಅಂಶವೆಂದರೆ ಇದು ಮೂಳೆಗಳನ್ನು ದೃಢಗೊಳಿಸುವಲ್ಲಿ ನೆರವಾಗುವುದು. ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿರುವ ಕಾರಣ ಸಂಧಿವಾತವಾಗುವುದರಿಂದ ಇದು ರಕ್ಷಿಸುತ್ತದೆ. ರಕ್ತಹೀನತೆಯನ್ನು ನಿವಾರಿಸುವ ಇದು ಜೀರ್ಣಕ್ರಿಯೆ ಉತ್ತಮಗೊಳಿಸಲು ನೆರವಾಗುತ್ತವೆ.

ಇದರಲ್ಲಿರುವ ಬ್ಯಾಕ್ಟೀರಿಯಾ ಗುಣಗಳು ಸೋಂಕಿನ ವಿರುದ್ಧ ಹೋರಾಡುತ್ತದೆ. ತೂಕ ಇಳಿಸಲು ಸಹಕರಿಸುವ ನುಗ್ಗೆ ಸೊಪ್ಪಿಗೆ ಮೊಡವೆ ಬಾರದಂತೆ ತಡೆಯುವ ಶಕ್ತಿಯಿದೆ.

ರುಚಿಯಾದ ನುಗ್ಗೆಸೊಪ್ಪಿನಲ್ಲಿ  ಅಧಿಕ ಪ್ರಮಾಣದಲ್ಲಿರುವ ಕರಗದ ನಾರು ಕಲ್ಮಶಗಳನ್ನು ಶೀಘ್ರವಾಗಿ ಹೊರಹಾಕುತ್ತದೆ.

ಗರ್ಭಿಣಿಯರು ಮತ್ತು ಬಾಣಂತಿಯರು ನುಗ್ಗೆ ಎಲೆಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಎದೆಹಾಲಿನ ಉತ್ಪನ್ನ ಉತ್ತಮವಾಗಿರುತ್ತದೆ ಹಾಗೂ ಹೆರಿಗೆಯ ಬಳಿಕ ಮಗುವಿಗೆ ಕುಡಿಯಲು ಹೆಚ್ಚಿನ ಪ್ರಮಾಣದ ಹಾಲು ಲಭ್ಯವಾಗುತ್ತದೆ.

Image result for drumstick leaves benefits

ನಿಮ್ಮ ಮಕ್ಕಳ ಕೋಪ ನಿಯಂತ್ರಣ ಮಾಡಲು ಹೀಗೆ ಮಾಡಿ

#drumstick #drumsticklleaves #drumstickplant #drumsticktree #drumstickplantleaves #drumsticksamber

 

Tags