ಆರೋಗ್ಯಆಹಾರಜೀವನ ಶೈಲಿ

ಡ್ರೈಪ್ರೂಟ್ಸ್ ಗಳಿಂದಾಗುವ ಆರೋಗ್ಯ ಲಾಭಗಳಿವು

ಬೆಂಗಳೂರು, ಅ.28: ಡ್ರೈಪ್ರೂಟ್ಸ್ ಸೇವಿಸುವಂತೆ ಮನೆಯ ಹಿರಿಯರು, ವೈದ್ಯರು ಸಲಹೆ ಮಾಡುತ್ತಲೇ ಇರುತ್ತಾರೆ. ಆದರೆ ಅವುಗಳ ಮಹತ್ವದ ಬಗ್ಗೆ ಅಷ್ಟೊಂದು ತಿಳಿದಿರದ ನಾವು, ಈ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ಒಣಬೀಜಗಳ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳ ಕುರಿತಂತೆ ನಾವು ಇಂದು ನಿಮಗೆ ಹೇಳುತ್ತೀವಿ ನೋಡಿ.

ದೈನಂದಿನ ಆಹಾರದಲ್ಲಿ ಡ್ರೈಪ್ರೂಡ್ಸ್- ಒಣಬೀಜ ಬಳಕೆ

ಬಾದಾಮಿ, ಪಿಸ್ತಾ, ಗೋಡಂಬಿ, ದ್ರಾಕ್ಷಿ, ಕೊಬ್ಬರಿ, ಕಡಲೆಬೀಜ, ಗಸಗಸೆ ಬೀಜ, ಅಗಸೆ ಬೀಜ, ಕುಂಬಳಕಾಯಿ , ಸೂರ್ಯಕಾಂತಿ, ವಾಲ್ ನಟ್ , ಎಳ್ಳು  ಹೀಗೆ ನಾನಾ ಬಗೆಯ ಡ್ರೈಪ್ರೂಟ್ಸ್ ಮತ್ತು ಒಣಬೀಜಗಳ ಬಳಕೆಯಿಂದ ದೇಹದ ಆರೋಗ್ಯ ಉತ್ತಮವಾಗುತ್ತದೆ. ಈ ಬೀಜಗಳು ಹಾಗೂ ಒಣಹಣ್ಣುಗಳ ನಿಯಮಿತ ಸೇವನೆಯಿಂದ  ದೇಹಕ್ಕೆ ಬೇಕಾದ  ನಾರಿನಾಂಶ, ಖನಿಜಾಂಶ, ವಿಟಮಿನ್ ಇ, ಕಬ್ಬಿಣಾಂಶ, ಸತು, ಪೋಟಾಶಿಯಂ, ಮೆಗ್ನೇಶಿಯಂ, ಮೊದಲಾದವುಗಳು ಪೂರೈಕೆಯಾಗಿ, ನಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ.  ಒಣಬೀಜಗಳು ಶಕ್ತಿ ಮತ್ತು ಪೋಷಕಾಂಶಗಳ ಆಗರವಾಗಿರುವುದರಿಂದ ಇವುಗಳು  ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲದೆ ಪಾರ್ಶ್ವವಾಯುವಿನಂತಹ ಸಮಸ್ಯೆಯನ್ನು ತಡೆಯುತ್ತದೆ. ಡ್ರೈಪ್ರೂಟ್ಸ್ ಮತ್ತು, ಒಣಬೀಜಗಳಿಂದ ದೊರೆಯುವ ಒಮೆಗಾ-3 ಉರಿಯೂತವನ್ನು ಶಮನಗೊಳಿಸುವುದು ಮಾತ್ರವಲ್ಲದೆ,  ಸ್ತನ ಕ್ಯಾನ್ಸರ್, ಕರಳು ಕ್ಯಾನ್ಸರ್ ಸಂಧಿವಾತ, ಅಲ್ಝೈಮರ್ ನಿಂದ ನಮ್ಮನ್ನು ರಕ್ಷಿಸುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಕವಾಗಿಯೂ ಒಣಹಣ್ಣುಗಳು ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲದೆ ಈ ಒಣಬೀಜಗಳ ಸೇವನೆಯಿಂದ, ದೇಹದಲ್ಲಿರುವ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಚರ್ಮ, ದಂತ ಸಮಸ್ಯೆ, ಎಲುಬು ಸವೆಯುವಂತಹ ಹಲವು ರೀತಿಯ  ಕಾಯಿಲೆಯಿಂದ ದೂರವಿರಲು ಇದು ಸಹಕಾರಿಯೂ ಹೌದು.

Tags