ಆರೋಗ್ಯಜೀವನ ಶೈಲಿ

ಒಣಕೂದಲಿಗೆ ಮನೆಮದ್ದು ಇಲ್ಲಿದೆ ನೋಡಿ..

ಒಣಕೂದಲಿಗೆ ಕಾರಣ ದೇಹದಲ್ಲಿ ಉತ್ತಮ ಪೌಷ್ಟಿಕಾಂಶದ ಕೊರತೆ

ಮೊಸರಿನಲ್ಲಿ ವಿಟಮಿನ್ ಬಿ 5 ಮತ್ತು ಡಿ ಹೇರಳವಾಗಿರುವುದರಿಂದ  ಇದು ಕೂದಲ ಆರೈಕೆಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಕೂದಲು ಫ್ರೀಜಿಯಾಗಿ, ಒಣಗಿದಂತಿದ್ದರೆ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ನುಣುಪಾದ, ಹೊಳೆಯುವ ಕೂದಲಿಗಾಗಿ ನಾವು ಅದೆಷ್ಟೋ ಶ್ಯಾಂಪು, ಕಂಡೀಷನರ್ ಬದಲಿಸುವುದು ಇದೆ. ದೇಹಕ್ಕೆ ಹೇಗೆ ಆರೋಗ್ಯಯುತವಾದ ಆಹಾರದ ಅಗತ್ಯವೋ ಹಾಗೆಯೇ ಕೂದಲು, ಉಗುರಿನ ಸೌಂದರ್ಯಕ್ಕೂ ಉತ್ತಮ ಆಹಾರ ಸೇವನೆ ಅತ್ಯಗತ್ಯ. ನಮ್ಮ ಉಗುರು, ಮತ್ತು ಕೂದಲ ಆರೋಗ್ಯ, ನಮ್ಮ ದೇಹದಲ್ಲಿರುವ ಪೌಷ್ಠಿಕಾಂಶದ ಕೊರತೆಯನ್ನು ಎತ್ತಿತೋರಿಸುತ್ತದೆ.

Image result for dry hair

 ಒಣಕೂದಲಿಗೆ ಕಾರಣ ಏನು?

ಒಣಕೂದಲಿಗೆ ಕಾರಣ ದೇಹದಲ್ಲಿ ಉತ್ತಮ ಪೌಷ್ಟಿಕಾಂಶದ ಕೊರತೆ. ದೇಹದಲ್ಲಿ ಹೆಚ್ಚುತ್ತಿರುವ ಉಷ್ಟಾಂಶ. ಹೀಗಾಗಿ ಮನೆಯಲ್ಲೇ ತಯಾರಿಸಿದ ಕೆಲವೊಂದು ಮಾಸ್ಕ್ ಗಳನ್ನು ತಲೆಗೆ ಹಾಕಿಕೊಳ್ಳುವುದರಿಂದ ಕೂದಲ ಆರೋಗ್ಯ ಹೆಚ್ಚುತ್ತದೆ ಎನ್ನುತ್ತರೆ ಪಂಡಿತರು. ಅಡುಗೆ ಮನೆಯಲ್ಲಿ ಸಿಗುವ ಕೆಲವೊಂದು ವಸ್ತುಗಳು ಹಾಗೂ ಮೊಸರಿನಿಂದ ಮಿನುಗುವ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಮೊಸರಿನಲ್ಲಿ ವಿಟಮಿನ್ ಬಿ 5 ಮತ್ತು ಡಿ ಹೇರಳವಾಗಿರುವುದರಿಂದ  ಇದು ಕೂದಲ ಆರೈಕೆಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲದೆ ಕೂದಲನ್ನು ಸ್ಟ್ರೈಟ್ ಮಾಡುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.

ಮೊಸರಿಗೆ ಕೊಂಚ ಲಿಂಬೆ ಹಣ್ಣಿನ ರಸ ಬೆರೆಸಿ, ಅದನ್ನು ಕೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ, ಕೂದಲಿಗೆ ಮಾಯಿಸ್ಟರೈಸರ್ ದೊರೆಯುತ್ತದೆ. ಅದೇ ರೀತಿ ಕೂದಲ ಹೊಟ್ಟು ಕೂಡ ನಿವಾರಣೆಯಾಗುತ್ತದೆ

ಮೊಸರಿಗೆ ಮುಲ್ತಾನಿ ಮುಟ್ಟಿ ಬೆರೆಸಿ ಆ ಪ್ಯಾಕ್ ಅನ್ನು ನೆತ್ತಿಗೆ ಹಾಕಿ, ಅರ್ಧಗಂಟೆಯ ನಂತರ ಸ್ನಾನ ಮಾಡುವುದರಿಂದ, ಕೂದಲಿಗೆ ನೈಸರ್ಗಿಕ ಪೋಷಕಾಂಶ ದೊರೆಯುತ್ತದೆ. ಇದರಿಂದ ಕೂದಲು ಹೊಳೆಯುತ್ತದೆ.

 

Tags

Related Articles