ಆಹಾರಜೀವನ ಶೈಲಿ

ಉತ್ತಮ ಆರೋಗ್ಯಕ್ಕೆ ಪ್ರತಿ ದಿನವೂ ರಾಗಿ ತಿನ್ನಿ

‘ರಾಗಿ ತಿನ್ನುವವನಿಗೆ ರೋಗವಿಲ್ಲ’ ಎಂಬ ಮಾತನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿಯೇ ಇರುತ್ತೀರಿ. ಪ್ರತಿದಿನವೂ ಈ ಆಹಾರ ಸೇವನೆಯಿಂದ ಅನೇಕ ರೀತಿಯ ಲಾಭಗಳಿವೆ. ಇನ್ನು ಈ ರಾಗಿಯನ್ನು ಮುದ್ದೆಯಾಗಿ, ದೋಸೆಯಾಗಿ, ಗಂಜಿಯಾಗಿ, ಉಪ್ಪಿಟ್ಟಾಗಿ ಬಳಸಲ್ಪಡುತ್ತಾರೆ.

1 ಅಸ್ತಮಾದಿಂದ ಬಳಲುತ್ತಿರುವವರಿಗೆ ರಾಗಿ ಉತ್ತಮ ಆಹಾರವಾಗಿದ್ದು, ಇದನ್ನು ಬಳಕೆ ಮಾಡುವ ಮೂಲಕ ಆರೋಗ್ಯ ವೃದ್ಧಿಗೊಳಿಸುವುದು ಮಾತ್ರವಲ್ಲದೇ ರೋಗ ಬರದಂತೆ ಕೂಡಾ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

2 ರಾಗಿಯನ್ನು ಚೆನ್ನಾಗಿ ಹುರಿದು ಅದನ್ನು ನುಣ್ಣಗೆ ಪುಡಿ ಮಾಡಿ ಅದಕ್ಕೆ ಬೆಲ್ಲದ ಪುಡಿ. ಹುಣಸೆ ಹುಳಿ. ಏಲಕ್ಕಿ ಪುಡಿ ಸೇರಿಸಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

3 ಒತ್ತಡಗಳಿಂದ ಮನಸ್ಸು ನೊಂದಿದರೆ ಮನಸ್ಸಿಗೆ ನೆಮ್ಮದಿ ಸಿಗಲು ನಿಮ್ಮ ಆಹಾರಗಳ ಜೊತೆ ರಾಗಿಯನ್ನು ಮಿಶ್ರಣ ಮಾಡಿಕೊಳ್ಳಿ.

4 ದಿನನಿತ್ಯ ರಾಗಿಯ ಗಂಜಿ ಮಾಡಿಕೊಂಡು ಮಜ್ಜಿಗೆ ಅಥವಾ ಮೊಸರು ಸೇರಿಸಿ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ ಜೊತೆಗೆ ಯಾವುದೇ ರೀತಿಯ ರೋಗಗಳು ಹತ್ತಿರ ಸುಳಿಯುವುದಿಲ್ಲ.

5 ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶವು ಜಾಸ್ತಿ ಇರುವುದರಿಂದ ರಾಗಿಯು ರಕ್ತಹೀನತೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ.

6 ರಾಗಿಯಲ್ಲಿ  ಫೈಬರ್ ಅಂಶವು ಇರುವುದರಿಂದ ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ.

ಬರೀ 24 ಗಂಟೆಯಲ್ಲಿ ಮೊಡವೆ ಮಾಯವಾಗಿಸಲು ಹೀಗೆ ಮಾಡಿ

#Millet #MilletFood #MilletHealth,

Tags