ಜೀವನ ಶೈಲಿಫ್ಯಾಷನ್

ನಿಶ್ಚಿತಾರ್ಥ ಅಥವಾ ಮದುವೆ ಉಂಗುರವನ್ನು ಹೀಗೂ ಆಯ್ಕೆ ಮಾಡಿಕೊಳ್ಳಬಹುದು: ನೀವೂ ಟ್ರೈ ಮಾಡಿ

ಪ್ರತಿಯೊಬ್ಬರ ಜೀವನದ ಅತೀ ಅಮೂಲ್ಯವಾದ ಘಟ್ಟ ಮದುವೆ. ಮದುವೆ ಎರಡು ಅಪರಿಚಿತ ಜೀವಗಳ ಬೆಸುಗೆ. ಈ ಕ್ಷಣವು ಸವಿನೆನಪಾಗಿ ಉಳಿಯುವಂತೆ ಮಾಡಿಕೊಳ್ಳುವಲ್ಲಿ ಉಂಗುರದ ಪಾತ್ರ ಬಹುಮುಖ್ಯ. ಹಾಗಾಗಿ, ಉಂಗುರ ಶಾಪಿಂಗ್ ಗೆ ಹೋದಾಗ ಈ ಟಿಪ್ಸ್ ಸಹಕಾರಿ.                                                                                                                                                                                                                                                                                                                                                                                                                                                 ಆಕಾರ:

ಇತ್ತೀಚಿನ ದಿನಗಳಲ್ಲಿ ನಮ್ಮ ಭಾವನೆಗೆ ತಕ್ಕಂತೆ ಡಿಸೈನ್ ಮಾಡಿಕೊಡುವ ಟ್ರೆಂಡ್ ಶುರುವಾಗಿದೆ. ಉಂಗುರದ ಆಕಾರ ವೃತ್ತ, ಹೃದಯ, ಚೌಕ ಅಥವಾ ನಿಮಗಿಷ್ಟವಾದ ಡಿಸೈನ್ ಮೊದಲೇ ಡಿಸೈಡ್ ಮಾಡಿಕೊಂಡಿರಿ. ಆಗ ನಿಮಗೊಪ್ಪುವ ಡಿಸೈನ್ ಬೇಗ ಆರಿಸಬಹುದು.

ಹಣದ ಬಗ್ಗೆ ಲಕ್ಷ್ಯವಿರಲಿ:

ಮದುವೆ ಪ್ರತಿಯೊಬ್ಬ ವ್ಯಕ್ತಿಗೂ ವಿಶೇಷವೇ, ನಿಜ. ಆದಷ್ಟು ನಿಮಗೆ ಹಿತಕರವಾದ ಬಜೆಟ್ ಅನ್ನು ಮೊದಲೇ ಫಿಕ್ಸ್‍ ಮಾಡಿಕೊಳ್ಳಿ. ಅದಕ್ಕೆ ತಕ್ಕಂತೆ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳಿ. ಆಗ ಮುಂದಿನ ಜೀವನ ಸುಖಕರವಾಗಿರುತ್ತದೆ. ಸೋಮಾರಿತನ ಬಿಟ್ಟು ಒಂದು ನಾಲ್ಕು ಅಂಗಡಿ ಹುಡುಕಿದರೆ ನಮ್ಮ ಮನದಾಸೆ ನೆರವೇರುವುದು ಖಂಡಿತ.

ಆಯ್ಕೆಯಲ್ಲಿ ವೈವಿಧ್ಯತೆ ಇರಲಿ:

ಉಂಗುರ ವೈವಿಧ್ಯಮಯವಾಗಿರಲು ಚಿನ್ನ, ವಜ್ರ, ಹರಳು, ಮುತ್ತು, ಪಚ್ಚೆ, ನೀಲ, ಮಾಣಿಕ್ಯ ಯಾವುದೆಂದು ಮೊದಲು ನಿರ್ಧರಿಸಿ. ಬಜೆಟ್ಟಿಗೆ ತಕ್ಕಂತೆ ಕಲ್ಲುಗಳನ್ನು ಆಯ್ಕೆ ಮಾಡಿಕೊಳ್ಳಿ.

ಮಾನದಂಡಗಳ ಬಗ್ಗೆ ಜ್ಞಾನ:

ನಿಶ್ಚಿತಾರ್ಥದ ಉಂಗುರಕ್ಕಾಗಿ ಶಾಪಿಂಗ್ ಮಾಡುವಾಗ ವಜ್ರಗಳನ್ನು ಪರಿಶೀಲಿಸಲು ನೀವು ಭಾರತೀಯ ಮಾನದಂಡಗಳಿಂದ ನಿಯಂತ್ರಿಸಲ್ಪಡುವ ಅಥವಾ ಎಸ್ ಜಿಎಲ್ (ಸಾಲಿಟೇರ್ ಜೆಮೊಲಾಜಿಕಲ್ ಲ್ಯಾಬೊರೇಟರಿ) ಅಥವಾ ಐಜಿಐ (ಇಂಟರ್ ನ್ಯಾಷನಲ್ ಜೆಮೊಲಾಜಿಕಲ್ ಇನ್ಸ್ಟಿಟ್ಯೂಟ್) ಗೆ.ಚಿನ್ನದ ಆಭರಣಗಳಲ್ಲಿ ಹಾಲ್‍ ಮಾರ್ಕಿಂಗ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಬೆರಳಿನ ಗಾತ್ರ:

ಇದು ಅತ್ಯಂತ ಮುಖ್ಯವಾದ ಭಾಗವಾಗಿದೆ. ಆದರೆ ಸುಲಭವಾಗಿ ಮರೆಯುವ ವಿಷಯ. ನಮ್ಮ ಬೆರಳಿನ ಗಾತ್ರಕ್ಕೆ ಒಪ್ಪುವ ರಿಂಗ್ ನಿಮ್ಮದಾಗಿಸಿಕೊಳ್ಳಿ.

ಈ ಮೇಲಿನ ಟಿಪ್ಸ್ ಖಂಡಿತವಾಗಿಯೂ ನಿಮ್ಮ ಉಂಗುರ ಆಯ್ಕೆಗೆ ಸಹಕಾರಿಯಾಗುತ್ತದೆ.

Related image

Image result for wedding rings on hands

Image result for wedding rings on hands

 

ಜಿಮ್ ಸೇರಿದ ಮಹೇಶ್ ಬಾಬು ಅತ್ತೆ!!

#balkaninews #wedding #weddingrings #engagementrings #weddingandengagementrings

 

Tags